ಬಾಲಕಿಯರ ವಸತಿ ನಿಲಯ ಸ್ಥಳಾಂತರ. ಭಯದ ವಾತಾವರಣದಲ್ಲಿ ಬಾಲಕಿಯರು…!!!

Listen to this article

ಬಾಲಕಿಯರ ವಸತಿ ನಿಲಯ ಸ್ಥಳಾಂತರ.
ಭಯದ ವಾತಾವರಣದಲ್ಲಿ ಬಾಲಕಿಯರು.

ಸಿಂಧನೂರು ಜುಲೈ 19. ನಗರದ ಗಂಗಾ ನಗರದಲ್ಲಿರುವ ಬಾಡಿಗೆ ಕಟ್ಟಡದಲ್ಲಿರುವ ಬಾಲಕಿಯರ ಹಾಸ್ಟೆಲ್ ಶಿವಜ್ಯೋತಿ ನಗರದಲ್ಲಿ ಹೊಸದಾಗಿ ಜಿಲ್ಲಾ ಪಂಚಾಯತ್ ರಾಯಚೂರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹೊಸದಾಗಿ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗಗಳ ಬಾಲಕಿಯರಿಗಾಗಿ ಹೊಸ ಹಾಸ್ಟೆಲ್ ಗೆ ನಿರ್ಮಿಸಿದ್ದು ಇಂದು ಸ್ಥಳಾಂತರಗೊಂಡಿದೆ.

ವಸತಿ ನಿಲಯ ಕೆಲವು ತಿಂಗಳುಗಳ ಹಿಂದೆ ಉದ್ಘಾಟನೆಯಾಗಿದ್ದು, ಇಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಊಟದ ಕೋಣೆ, ಶೌಚಾಲಯ, ಸ್ನಾನಕ್ಕೆ ಸೋಲಾರ ವಾಟರ್, 12 ಸಿಸಿ ಟಿವಿ ಕ್ಯಾಮೆರಾಗಳು ಅಳವಡಿಸಲಾಗಿದೆ, ಸ್ನಾನಕ್ಕೆ ಬಳಸುವ ನೀರು ಉಪ್ಪು ಇದೆ,ನಗರಸಭೆ ಕಡೆಯಿಂದ ಸಿ.ಎಮ್. ಸಿ. ನೀರು ಒದಗಿಸಬೇಕು, ವಸತಿ ನಿಲಯಕ್ಕೆ ಬರುವ ಗಂಗಾವತಿ ರಸ್ತೆಯ ಮೇನ್ ರೋಡಲ್ಲಿ ಕೋರಿಕೆ ನಿಲ್ಲುಗಡೆ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಪರಿಶಿಷ್ಟ ಪಂಗಡ ಅಧಿಕಾರಿ ಶಿವಮಾನಪ್ಪ ಪತ್ರಿಕೆಗೆ ತಿಳಿಸಿದರು.

ಈ ವಸತಿ ನಿಲಯದಿಂದ 4 ರಿಂದ 5 ಕೀ.ಮಿ. ಕಾಲೇಜುಗಳು ದೂರ ಇರುವುದರಿಂದ ಯಾವುದೇ ಬಸ್ ಸೌಕರ್ಯವಿಲ್ಲದೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಆಗುವುದಿಲ್ಲ. ಹಾಗೂ ಹಾಸ್ಟೆಲ್ ಗೆ ಹೋಗುವ ದಾರಿಯ ಸುತ್ತ ಮುತ್ತ ಜಾಲಿ ಗಿಡಗಳು ಬೆಳೆದಿದ್ದು ಹಾಡಹಗಲೇ ಅಲ್ಲಲ್ಲಿ ಪುಂಡ ಪೋಕರಿಗಳು ಕುಳಿತು ಮಧ್ಯಪಾನ ಕುಡಿಯುತ್ತಿರುವುದು ಸಾಮನ್ಯವಾಗಿ ಬಿಟ್ಟಿದೆ,ಇಂತಹ ಸಂಧರ್ಭದಲ್ಲಿ ಬಾಲಕಿಯರು ಕಾಲೇಜಿಗೆ ನಡೆದುಕೊಂಡು ಹೋಗಲು ಭಯಬೀತಿ ಹೋಗುವುದು ಅನಿವಾರ್ಯವಾಗುತ್ತದೆ.ಇದೀಗ ರಾಜ್ಯದಲ್ಲಿ ಅಲ್ಲಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಬಾಲಕಿಯರ ಹಿತ ದೃಷ್ಟಿಯಿಂದ ವಸತಿ ನಿಲಯದ ಈ ಪ್ರದೇಶಕ್ಕೆ ಒಬ್ಬ ಪೊಲೀಸ್ ಸಿಬ್ಬಂದಿ,ಹಾಸ್ಟೆಲ್‌ಗೆ ಕಾವಲುಗಾನನ್ನು ನಿಯೋಜಿಸಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.

ವಸತಿ ನಿಲಯ ಉದ್ಘಾಟನೆ ಸಂದರ್ಭದಲ್ಲಿ ಬಸ್ ಸೌಕರ್ಯ, ಪೋಲಿಸ್ ನಿಯೋಜನೆ ಬಗ್ಗೆ ವಿಧ್ಯಾರ್ಥಿಗಳು ಸಚಿವ ಬಿ. ಶ್ರೀ ರಾಮುಲು, ಹಾಗೂ ಶಾಸಕ ವೆಂಕಟರಾವ್ ನಾಡಗೌಡ ರ ಬಳಿ ತಮ್ಮ ನೋವನ್ನು ಹೇಳಿಕೊಂಡಿದ್ದರು, ಸಚಿವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದರು, ಆದರೆ ಸೂಚನೆ ಸೂಚನೆಯಾಗಿ ಉಳಿಯದೇ ಅದು ಕಾರ್ಯಗತವಾಗಬೇಕು….

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend