ಶಾಂತಿ ರೀತಿ ಬಕ್ರೀದ್ ಆಚರಿಸಿ, ಸರ್ಕಾರದ ಆದೇಶ ಪಾಲಿಸಿ -ವೆಂಕಟಪ್ಪ ನಾಯಕ…!!!

Listen to this article

ಶಾಂತಿ ರೀತಿ ಬಕ್ರೀದ್ ಆಚರಿಸಿ, ಸರ್ಕಾರದ ಆದೇಶ ಪಾಲಿಸಿ -ವೆಂಕಟಪ್ಪ ನಾಯಕ

ಸಿಂಧನೂರು.ಜುಲೈ 10 ರಂದು ಬರುವ ಬಕ್ರೀದ್ ಹಬ್ಬವನ್ನು ಶಾಂತಿ ರೀತಿಯಿಂದ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಸ್ಲಿಂ ಸಮುದಾಯದ ಮುಖಂಡರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಡಿವೈಎಸ್ಪಿ ವೆಂಕಟಪ್ಪ ನಾಯಕ ಮುಸ್ಲಿಂ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿಕೊಂಡರು.

ನಗರ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ಯ ಕರೆದ ಹಿಂದೂ ಮುಸ್ಲಿಂ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಅಹಿತಕರ ಘಟನೆ ನಡೆಯದಂತೆ ಶಾಂತಿ ರೀತಿಯಿಂದ ಬಕ್ರೀದ್ ಹಬ್ಬ ಆಚರಿಸಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ.ಸರಕಾರದ ಆದೇಶಗಳನ್ನು ಪಾಲಿಸುವ ಮೂಲಕ ಹಬ್ಬವನ್ನು ಆಚರಿಬೇಕು ಎಂದರು.

ಜನರು ತಮ್ಮ ಸುರಕ್ಷಿತ ದೃಷ್ಟಿಯಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು, ಇದರಿಂದ ಅವರಿಗೂ ಒಳ್ಳೆಯದು ಹಾಗೂ ಅಪರಾಧ ಕೃತ್ಯ ಎಸಗುವವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಹಾಯ ಮಾಡಿದಂತಾಗುತ್ತದೆ. ವಾಹನಗಳಿಗೆ ವಿಮೆ ಇಲ್ಲದೆ ಅಪಘಾತ ಸಂಭವಿಸಿ ಚಾಲಕರು ಮೃತಪಟ್ಟರೆ ಅವರ ಕುಟುಂಬ ಬೀದಿ ಪಾಲಾಗುತ್ತದೆ.ವಿಮೆ ಮಾಡಿಸಿ ಆಕಸ್ಮಿಕವಾಗಿ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಆತನ ಕುಟುಂಬಕ್ಕೆ ವಿಮೆ ಕಂಪನಿಯಿಂದ ಸೌಲಭ್ಯ ದೊರೆಯುತ್ತದೆ.ಎಸ್ ಪಿ ಆದೇಶದ ಮೇರೆಗೆ ನಗರದಲ್ಲಿ ವಿಮೆ ಇಲ್ಲದ ವಾಹನಗಳನ್ನು ಹಿಡಿದು ಠಾಣೆಗೆ ತಂದು ವಿಮೆ ಕಂಪೆನಿಯ ಅಧಿಕಾರಿಗಳನ್ನು ಕರೆಸಿ ಠಾಣೆಯಲ್ಲಿಯೇ ವಿಮೆ ಮಾಡಿಸುವ ಮೂಲಕ ವಾಹನ ಚಾಲಕರಿಗೆ ಪೊಲೀಸ್ ಇಲಾಖೆಯಿಂದ ಅಳಿಲು ಸೇವೆ ಮಾಡಲಾಗುತ್ತದೆ ಇದಕ್ಕೆ ವಾಹನ ಸವಾರರು ಸಹಕರಿಸಬೇಕೆಂದರು.

ಸರಕಾರದ ಹೊಸ ಕಾಯ್ದೆ ಗಳನ್ನು ಜಾರಿಗೆ ತಂದಿದ್ದು ಸರ್ಕಾರದ ಕಾನೂನುಗಳನ್ನು ಪಾಲಿಸುವ ಮೂಲಕ ಬಕ್ರೀದ್ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಬೇಕು. ಇಲ್ಲಿತನಕ ಹಿಂದೂ ಮುಸ್ಲಿಂ ಹಬ್ಬಗಳಲ್ಲಿ ಯಾವುದೇ ರೀತಿಯ ಗಲಾಟೆಗಳು ಆಗದೆ ಶಾಂತಿ ರೀತಿಯಲ್ಲಿ ಆಚರಿಸಲಾಗಿದೆ. ಯಾರೇ ಆಗಲಿ ಕಾನೂನು ಉಲ್ಲಂಘಿಸಿದರೆ ಅಂತವರ ವಿರುದ್ಧ ಪೊಲೀಸರು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮದ್ವಚಾರ್ಯ ಮಾತನಾಡಿದರು.

ಸರಕಾರದ ಕಾನೂನುಗಳನ್ನು ಪಾಲಿಸುವ ಮೂಲಕ ಹಬ್ಬವನ್ನು ಆಚರಿಸುತ್ತಿದ್ದು, ಪ್ರಾಣಿಗಳನ್ನು ಬಿಟ್ಟು ಕುರಿ ಕೋಳಿ ಗಳನ್ನು ಮಾತ್ರ ಬಕ್ರೀದ್ ಹಬ್ಬದಲ್ಲಿ ವಧೆ ಮಾಡಲು ಸಭೆ ಮಾಡಿ ನಾವು ನಿರ್ಧರಿಸಿದ್ದೇವೆ ಎಂದು ನಗರ ಸಭೆ ಸದಸ್ಯರಾದ ಜೀಲಾನಿ ಪಾಶ ಮಾತನಾಡಿದರು.

ನಗರಸಭೆ ಉಪಾಧ್ಯಕ್ಷ ಮೂರ್ತಜಾ ಹುಸೇನ್, ಸದಸ್ಯರಾದ ಚಂದ್ರಶೇಖರ್ ಮೈಲಾರ ,ಮುನೀರ್ ಪಾಶ, ಮಹಿಬೂಬ್,ಹಿಂದೂ ,ಮುಸ್ಲಿಂ ಸಮಾಜದ ಮುಖಂಡರಾದ ಬಾಬರ್ ಪಾಶ ಜಾಗೀರದಾರ, ಛತ್ರಪ್ಪ,ಇಲಿಯಾಸ್, ಹುಸೇನ್ ಸಾಬ್, ನಿರಪಾದೆಪ್ಪ ನಾಗಲಾಪುರ, ಆರ್ ಅOಬ್ರೂಸ್, ಕಿಶನ್ ರಾವ್, ಸಿಪಿಐ ಉಮೇಶ್ ಕಾಂಬ್ಳೆ, ಪಿಎಸೈ ಸೌಮ್ಯ ಹಿರೇಮಠ ಸೇರಿದಂತೆ ಇನ್ನಿತರರು ಸಭೆಯಲ್ಲಿ ಹಾಜರಿದ್ದರು….

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend