ಶಾಸಕರಿಂದ ವಿವಿಧ ಅಬಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ…!!!

Listen to this article

ಶಾಸಕರಿಂದ ವಿವಿಧ ಅಬಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ.

ಸಿಂಧನೂರು : ಜುಲೈ. 3. ಲೋಕೋಪಯೋಗಿ ಇಲಾಖೆಯಿಂದ ಬಸಾಪೂರ ಗ್ರಾಮದಲ್ಲಿ ಇ ಜೆ 20.00 ಲಕ್ಷ ರೂಗಳ ವೆಚ್ಚದಲ್ಲಿ ಎಸ್ ಸಿ ಕಾಲೋನಿ ಯಲ್ಲಿ ಸಿ ಸಿ ರಸ್ತೆ ನಿರ್ಮಾಣ, ಹರೆಟನೂರು ಗ್ರಾಮದಲ್ಲಿ ಎಸ್. ಟಿ.ಕಾಲೋನಿಯಲ್ಲಿ 30.00 ಲಕ್ಷ ರೂಗಳ ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಬಾದರ್ಲಿ ಗ್ರಾಮದಲ್ಲಿ 25.00 ಲಕ್ಷ ರೂಗಳ ವೆಚ್ಚದಲ್ಲಿ ಎಸ್ ಸಿ ಕಾಲೋನಿ ಯಲ್ಲಿ ಸಿ ಸಿ ರಸ್ತೆ ನಿರ್ಮಾಣ, ಮಲದಿನ್ನಿ ಕ್ಯಾಂಪ್ ದಲ್ಲಿ 10.00 ಲಕ್ಷ ರೂಗಳ ವೆಚ್ಚದಲ್ಲಿ ಎಸ್ ಟಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ, ಸಾಸಲಮರಿ ಗ್ರಾಮದಲ್ಲಿ 20.00 ಲಕ್ಷ ರೂಗಳ ವೆಚ್ಚದಲ್ಲಿ ಸಿ ಸಿ ರಸ್ತೆ ನಿರ್ಮಾಣ, ಸಣ್ಣ ನೀರಾವರಿ ಇಲಾಖೆಯಿಂದ ಕುನ್ನಟಗಿ ಗ್ರಾಮದಲ್ಲಿ 100.00 ಲಕ್ಷ ರೂಗಳ ವೆಚ್ಚದಲ್ಲಿ ಚೆಕ್ ಡ್ಯಾಮ್ ನಿರ್ಮಾಣ ರೈತರಿಗೆ ಏತ ನೀರಾವರಿ ಯೋಜನೆ ಉದ್ಘಾಟನೆ ನೆರವೇರಿಸಿದರು.

ಶಾಸಕ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡರು ರವರು ಕ್ಷೇತ್ರದ ವಿವಿಧ ಅಬಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿಗಳನ್ನು ಮುಗಿಸಬೇಕು. ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅವರಿಂದ ಯಾವುದೇ ಕಾಮಗಾರಿ ಬಗ್ಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರು ಬರದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಗಡದಿನ್ನಿ ಗ್ರಾಮ ಪಂಚಾಯತ್ ಅಧ್ಯಕ್ಷ ರಮೀಜಾ ಅವರ ಪತಿ ಸಾಮೀದ ಸಾಬ, ಉದ್ಬಾಳ ಶರಣಪ್ಪ, ಬಸ್ಸಪ್ಪ ಕುನ್ನಟಗಿ ಕ್ಯಾಂಪ್,ಸದಸ್ಯರಾದ ಲಕ್ಷ್ಮೀ ಪರಸಪ್ಪ, ಮೈಬೂಬು , ಹರಟೆನೂರು ಗ್ರಾಮದ ಸದಸ್ಯರಾದ ರಾಜಶೇಖರ, ಅಂಬಣ್ಣ, ರಾಮಣ್ಣ, ಮುಖಂಡರಾದ ಮಲ್ಲಯ್ಯ ನಾಯಕ, ಪಂಪನಗೌಡ, ದ್ಯಾವಣ್ಣ, ಅಯ್ಯಪ್ಪ ದೇವರಮನಿ, ಪಕ್ಷದ ನಾಯಕರು, ಶಿವಪ್ಪ ಜೆಇ, ಆಸೀಪ್, ಬೀಮನಗೌಡ, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend