ಅಭಿವೃದ್ದಿ ಕಾಮಗಾರಿಗಳ ವೀಕ್ಷಣೆ, ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಸೂಕ್ತ ಕ್ರಮ : ಚಂದ್ರಶೇಖರ ನಾಯಕ…!!!

Listen to this article

ಅಭಿವೃದ್ದಿ ಕಾಮಗಾರಿಗಳ ವೀಕ್ಷಣೆ, ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಸೂಕ್ತ ಕ್ರಮ : ಚಂದ್ರಶೇಖರ ನಾಯಕ.

ಸಿಂಧನೂರು : ಜೂನ್,20. ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ರವರು ಭೇಟಿ ನೀಡಿ, ಅಸ್ಪತ್ರೆಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಸಕ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರ ಜೊತೆ ಇಂದು ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ತಾಲೂಕು ಕ್ರೀಡಾಂಗಣ, ಕುಡಿಯುವ ನೀರಿನ ಶುದ್ಧೀಕರಣ ಘಟಕ, ಪಶು ಆಸ್ಪತ್ರೆ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳ, ವೀಕ್ಷಣೆ ಮಾಡಿ ನಂತರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಅವರು, ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳು, ಚುಚ್ಚು ಮದ್ದು ಕೊಠಡಿ,ಜನ ಔಷಧಿ ವಿತರಣಾ ಕೇಂದ್ರ, ಐ.ಸಿ.ಟಿ.ಸಿ. ಅಪರೇಷನ್‌ ಕೊಠಡಿ,ಹೆರಿಗೆ ವಿಭಾಗ, ಕ್ಷಕಿರಣ, ಸೇರಿದಂತೆ ಎಲ್ಲಾ ವಿಭಾಗಳಿಗೂ ಸಂಚರಿಸಿ ಅಸ್ಪತ್ರೆಯ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ರಕ್ತ ಪರೀಕ್ಷೆ ಕೇಂದ್ರದಲ್ಲಿ ರಿಜಿಷ್ಟಾರ್ ಬುಕ್ ಚೆಕ್ ಮಾಡಿದಾಗ ದಿನಾಲೂ ಸಂಜೆ ಹೊತ್ತಿಗೆ ಒಂದು ದಿನಕ್ಕೆ 50 ರೋಗಿಗಳ ನೋಂದಣಿ ಇದೆ,ಆದರೆ ಇಂದು ಮಧ್ಯಾಹ್ನಕ್ಕೆ 49 ಜನ ಚಿಕಿತ್ಸೆ ಪಡೆಯಲು ಹೇಗೆ ಸಾಧ್ಯ, ನಾನು ಬರುತ್ತೇನೆ ಎಂದು ಈ ರೀತಿ ಮಾಡಿದ್ದೀರಿ ಎಂದು ಸಿಬ್ಬಂದಿಗಳ ವಿರುದ್ಧ ಗರಂ ಆದರು.

ಸ್ವಚ್ಛವಿಲ್ಲದ ಶೌಚಾಲಯ : ಆಸ್ಪತ್ರೆಯ ವಾರ್ಡ್‌ಗಳ ಶೌಚಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಇಡೀ ಆಸ್ಪತ್ರೆಗೆ ಎರಡೇ ಎರಡು ಶೌಚಾಲಯ ಇದ್ದು,ಶುಚಿತ್ವ ಕಾಪಾಡದೇ ಇರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಶುಚಿತ್ವ ಕಾಪಾಡಲು ಸರ್ಕಾರದಿಂದ ಪ್ರತ್ಯೇಕವಾಗಿ ಹಣ ಬರುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡು ಆಸ್ಪತ್ರೆಯನ್ನು ನೈರ್ಮಲ್ಯ ಕಾಪಾಡಬೇಕು ಎಂದರು.

ಹೊಸದಾಗಿ ನವೀಕರಣಗೊಳ್ಳುತ್ತಿರುವ ಐಸಿಯು ವಾರ್ಡ್ ಗೆ ಬೇಟಿ ನೀಡಿದಾಗ ನಿಧಾನ ಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಮುಂದಿನ ಸಾರಿ ಬರುವುದರೊಳಗಾಗಿ ಜನರಿಗೆ ಬಳಕೆಯಾಗಬೇಕೆಂದರು.

ನಂತರ ಪತ್ರಕರ್ತರ ಜೊತೆ ಮಾತನಾಡಿದ ಜಿಲ್ಲಾಧಿಕಾರಿಗಳು ರಾತ್ರಿ ವೇಳೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲ ಎಂಬ ದೂರುಗಳು ಬಂದಿವೆ. ಇದರ ಬಗ್ಗೆ ತಹಸೀಲ್ದಾರ ಅವರಿಗೆ ರಾತ್ರಿ ವೇಳೆಯಲ್ಲಿ ರೌಂಡ್ಸ ಮಾಡಲು ಸೂಚನೆ ನೀಡಿದ್ದೇನೆ. ಇಂದು ನಾನು ಬರುವ ವಿಷಯ ತಿಳಿದು ಎಲ್ಲಾ ವೈಧ್ಯರುಗಳು, ಸಿಬ್ಬಂದಿಗಳು, ಕರ್ತವ್ಯದಲ್ಲಿದ್ದಾರೆ ಹಾಗೂ ಸ್ವಚ್ಛತೆ ಮಾಡಿದ್ದಾರೆ. ಒಳರೋಗಿಯ ಚೀಟಿಯ ಹಣ ಐದು ರೂಪಾಯಿ ಇದ್ದು ಅದರ ಬದಲು ಹತ್ತು ರೂಪಾಯಿ ಪಡೆದಿರುವ ಬಗ್ಗೆ ಸ್ವತಃ ಕಣ್ಣಾರೆ ಕಂಡಿದ್ದೇನೆ. ಮುಂದಿನ ಸಾರಿ ಯಾರಿಗೂ ಮಾಹಿತಿ ನೀಡದೇ ಬೇಟಿ ನೀಡಿ ಆಸ್ಪತ್ರೆಯಲ್ಲಿ ಲೋಪದೋಷಗಳು ಕಂಡು ಬಂದಾಗ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಮಂಜುನಾಥ ಭೋಗಾವತಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಡಾ.ಅಯ್ಯನಗೌಡ, ಡಾ. ಸುರೇಶಗೌಡ,ಇದ್ದರು….

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend