ಮಲೇರಿಯಾ ಮಾಸಾಚರಣೆ” ಜೂನ್ 2022 ಟಾಸ್ಕ ಫೋರ್ಸ ಸಮಿತಿ ಸಭೆ…!!!

Listen to this article

ಮಲೇರಿಯಾ ಮಾಸಾಚರಣೆ” ಜೂನ್ 2022
ಟಾಸ್ಕ ಫೋರ್ಸ ಸಮಿತಿ ಸಭೆ.

ಸಿಂಧನೂರು : ಜೂನ್ 15.” ಮಲೇರಿಯಾ ಮಾಸಾಚರಣೆ” ಜೂನ್ 2022 ಕಾರ್ಯಕ್ರಮ ಅನುಷ್ಠಾನಕ್ಕಾಗಿ ತಾಲೂಕು ಮಟ್ಟದ ಟಾಸ್ಕ ಫೋರ್ಸ ಸಮಿತಿ ಸಭೆಯನ್ನು ತಹಸೀಲ್ದಾರ ಮಂಜುನಾಥ ಭೋಗಾವತಿ ರವರ ಅಧ್ಯಕ್ಷತೆಯಲ್ಲಿ ತಹಸೀಲ್ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಿತು.

ಈ ಸಭೆಯಲ್ಲಿ ಮಾತನಾಡಿದ ಮಂಜುನಾಥ ಬೋಗಾವತಿ ಅವರು ಸೊಳ್ಳೆಗಳಿಂದ ಮಲೇರಿಯಾ, ಡೆಂಗಿ ಜ್ವರ ಮುಂತಾದ ಹಲವಾರು ಕಾಯಿಲೆ ಹರಡುತ್ತಿದ್ದು, ಸೊಳ್ಳೆ ನಿಯಂತ್ರಣ ಮಾಡಿದಲ್ಲಿ ಇಂತಹ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಸಾರ್ವಜನಿಕರಲ್ಲಿ ಸೊಳ್ಳೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಲೇರಿಯಾ ತಡೆಗಟ್ಟಲು ಎಲ್ಲಾ ಇಲಾಖೆಯ ಸಮನ್ವಯತೆ ಸಹಕಾರ ಬಹಳ ಮುಖ್ಯ ಎಂದು ಅಧಿಕಾರಿಗಳಿಗೆ ತಹಸೀಲ್ದಾರ ಮಂಜುನಾಥ ಬೋಗಾವತಿ ಸಲಹೆ ನೀಡಿದರು.

ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದ ಪೂರ್ವಭಾವಿ ಟಾಸ್ಕಪೋರ್ಷ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಹೆಣ್ಣು ಅನಾಫಿಲಿಸ್‌ ಸೊಳ್ಳೆಯು ಮಲೇರಿಯಾ ಸೋಂಕಿತ ವ್ಯಕ್ತಿಗೆ ಕಚ್ಚಿ ರಕ್ತ ಹೀರಿ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ 10 ರಿಂದ 14 ದಿವಸದೊಳಗಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮಲೇರಿಯಾ ರೋಗ ಲಕ್ಷಣಗಳು ಚಳಿ ಮತ್ತು ನಡುಕದ ಜೊತೆ ಜ್ವರ, ಚಳಿಯ ನಂತರದ ವಿಪರೀತ ಜ್ವರ, ವಾಂತಿ, ತಲೆನೋವು,ಬೆವರುವುದು,ಸುಸ್ತು ಮತ್ತು ನಿಶ್ಯಕ್ತಿಯಾಗುವುದು. ವಯಸ್ಸಾದವರಿಗೆ ಮತ್ತು ಮಕ್ಕಳಿಗೆ ಬರುವ ಲಕ್ಷಣಗಳು ಜಾಸ್ತಿನೇ ಇರುತ್ತೆ. ಮಳೆಗಾಲ ಸಂಭವಿಸಿದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಖಾಲಿ ಸೈಟುಗಳಲ್ಲಿ ಕಲುಷಿತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು,ಪ್ರತಿ ವಾರ್ಡ್ ನಲ್ಲಿ ಸಭೆ ಮಾಡಿ ಪಾಂಗಿಂಗ್ ಮಾಡಿಸಬೇಕು ಜನರಿಗೆ ಹರಿವು ಮೂಡಿಸುವ ಕೆಲಸ ಮಾಡಬೇಕು, ಗ್ರಾಮ ಪಂಚಾಯಿತಿಯ ಕಸದ ವಿಲೇವಾರಿ ವಾಹನದಲ್ಲಿ ಪ್ರಚಾರ ಮಾಡಬೇಕು, ಗೋಡೆಗಳಿಗೆ ಬಿತ್ತಿ ಪತ್ರಗಳನ್ನು ಅಂಟಿಸಿಬೇಕು, ಗ್ರಾಮ ನೈರ್ಮಲ್ಯ ಸಮಿತಿಯಿಂದ ಪ್ರಚುರ ಪಡಿಸಬೇಕು, ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿ ಸ್ತ್ರೀಯರಿಗೆ ಸೊಳ್ಳೆಗಳ ಪರದೆ ಬಳಸಲು ತಿಳಿಸಬೇಕು,

ಈ ಸಂದರ್ಭದಲ್ಲಿ ಟಿ.ಎಚ್.ಓ.ಡಾ.ಅಯ್ಯನಗೌಡ, ವಿಜಯ ಪ್ರಕಾಶ ಸಹಾಯಕ ಆಡಳಿತಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿ ವಿಜಯಲಕ್ಷ್ಮಿ, ಎಸ್. ಟಿ. ಇಲಾಖೆ ಅಧಿಕಾರಿ ಶಿವಮಾನಪ್ಪ, ಎಇಇ ಅಶೋಕರಡ್ಡಿ, ಅನ್ನಪೂರ್ಣ, ಅಮರಗುಂಡಪ್ಪ, ಅಶೋಕ, ಸುದೀಪಕುಮಾರ, ರುದ್ರಮುನಿ ಕೆ. ವಿ. ಪಾಂಡುರಂಗ ಜೆ. ಇ,ಅಬಕಾರಿ ಇಲಾಖೆ ಯಮನಪ್ಪ ತಳವಾರ, ವಿಜಯಕುಮಾರ್ ಜೆಸ್ಕಾಂ, ಈರಣ್ಣ ಕೆಎಸ್ಆರ್ಟಿಸಿ,ಜಿ ರಂಗನಾಥ,ಎಸ್.ಎಂ.ಪಾಟೀಲ್, ಇಸ್ಮಾಯಿಲ್, ಷಡಕ್ಷರಿ, ಡಾ. ಬಸವರಾಜ, ಡಾ.ಗೀತಾ ಪಾಟೀಲ, ಗೀತಾ ಹಿರೇಮಠ ಇನ್ನಿತರ ಅಧಿಕಾರಿಗಳು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend