ಮನುಷ್ಯನ ಆರೋಗ್ಯ ಸರಿಯಾಗಿದ್ದರೆ ಇಡೀ ಸಮಾಜವೇ ಸರಿಯಾಗಿರುತ್ತದೆ – ಡಾ.ರಾಮಕೃಷ್ಣ…!!!

Listen to this article

ಮನುಷ್ಯನ ಆರೋಗ್ಯ ಸರಿಯಾಗಿದ್ದರೆ ಇಡೀ ಸಮಾಜವೇ ಸರಿಯಾಗಿರುತ್ತದೆ – ಡಾ.ರಾಮಕೃಷ್ಣ.

ಸಿಂಧನೂರು : ಮನುಷ್ಯನ ಆರೋಗ್ಯ ಸರಿಯಾಗಿದ್ದರೆ ಇಡೀ ಸಮಾಜವೇ ಸರಿಯಾಗಿರುತ್ತದೆ ಆದರಿಂದ ಆರೋಗ್ಯದ ಬಗ್ಗೆ ಅಲಕ್ಷೇ ಮಾಡದೇ ವೈಧ್ಯರ ಬಳಿ ತೋರಿಸಿಕೊಂಡು ಉತ್ತಮ ಆರೋಗ್ಯ ದಿಂದ ಜೀವನ ಸಾಗಿಸಬೇಕು ಎಂದು ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ಹೇಳಿದರು.

ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶಾದಿ ಮಹಲ್ ನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಂದೆ ಹಳ್ಳಿಯ ಜನರು ಅವರು ತೆಗೆದುಕೊಳ್ಳುವ ಆಹಾರದ ಮೇಲೆ ಆರೋಗ್ಯ ಚೆನ್ನಾಗಿರುತ್ತಿತ್ತು, ಹಿಂದೆ ಸಕ್ಕರೆ ಕಾಯಿಲೆ ಶ್ರೀಮಂತರಿಗೆ ಸಿಮಿತವಾಗಿರುತ್ತಿತ್ತು,ಆದರೆ ಸಕ್ಕರೆ ಕಾಯಿಲೆ ಜೊತೆಗೆ ಈಗ ಎಲ್ಲಾ ರೀತಿಯ ರೋಗ ರುಜಿನುಗಳು ಬಡವ ಶ್ರೀಮಂತ ಎನ್ನದೇ ಬರುತ್ತಿವೆ ಎಂದರು.

ಸಾಂಕ್ರಮಿಕ ಹಾಗೂ ಆಸಾಂಕ್ರಮಿಕ ರೋಗಗಳ ತಪಾಸಣೆ ಮಾಡಿ ಗುಣಪಡಿಸುವುದೇ ಈ ಆರೋಗ್ಯ ಮೇಳದ ಉದ್ದೇಶವಾಗಿದೆ.ಜಿಲ್ಲೆಯಲ್ಲಿ 22 ಲಕ್ಷ ಜನಸಂಖ್ಯೆಯಿದ್ದು ಅದರಲ್ಲಿ 8 ಲಕ್ಷ ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ಆರೋಗ್ಯ ಇಲಾಖೆ ಮೇಲಿದೆ, ಯಾವುದೇ ರೋಗ ಬಂದಾಗ ವೈದ್ಯರಿಗೆ ತೋರಿಸಬೇಕು, ಹಣ ಇಲ್ಲ ಎಂದು ಮುಚ್ಚಿಟ್ಟುಕೊಂಡರೆ ಮುಂದೆ ನೀವು ತೊಂದರೆ ಅನುಭವಿಸಬೆಕಾಗುತ್ತದೆ.ರೋಗಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಂತಹ ಆರೋಗ್ಯ ಮೇಳವನ್ನು ಮಾಡಲಾಗುತ್ತದೆ. ಸಾರ್ವಜನಿಕರು ಉಪಯೋಗ ಮಾಡಿಕೊಳ್ಳಬೇಕು. 63 ವಿವಿಧ ರೀತಿಯ ರೋಗ ತಪಾಸಣೆ ಮಾಡುವ ಮೂಲಕ 373 ಔಷಧಿಗಳನ್ನು ಉಚಿತವಾಗಿ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ಐದು ಲಕ್ಷ ರೂಪಾಯಿ ಉಚಿತ ಚಿಕಿತ್ಸೆ ಅನುಕೂಲಗಳು ಇದ್ದು, ಪ್ರತಿಯೊಬ್ಬರು ಆಯುಷ್ ಮಾನ್ ಭಾರತ ಆರೋಗ್ಯ ಕಾರ್ಡ್ ಮಾಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಡಾ. ರಾಮಕೃಷ್ಣ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಸರ್ವೋತ್ತಮ ಪ್ರಶಸ್ತಿ ಪಡೆದ ತಹಸೀಲ್ದಾರ ಮಂಜುನಾಥ ಭೋಗಾವತಿ, ಡಾ ರಾಮಕೃಷ್ಣ, ಡಾ. ಸುರೇಂದ್ರ ಬಾಬು, ಡಾ. ನಾಗರಾಜ ಕಾಟ್ವಗೆ ಸನ್ಮಾನಿಸಿ ಗೌರವಿಸಲಾಯಿತು.

ಶಾದಿಮಹಲ್ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಸಿಬ್ಬಂದಿಗಳಿಂದ ಆಯುಷಮಾನ್ ಭಾರತ ಆರೋಗ್ಯ ಕಾರ್ಡ್ ವಿತರಣೆ, ಎಚ್. ಐ. ವಿ. ಬಗ್ಗೆ ಅರಿವು ಅದು ಗರ್ಭಿಣಿ ಸ್ತ್ರೀಯರಿಗೆ, ಸೊಳ್ಳೆಗಳ ನಿಯಂತ್ರಣ ಮಾಡುವ ಗರ್ಪಿ ಮೀನುಗಳ ಪರಿಚಯ, ತಾಯಿ ಮಕ್ಕಳ ಆರೋಗ್ಯದ ಬಗ್ಗೆ, ಕುಷ್ಟರೋಗ, ಮಹಿಳೆಯರ ಸಾಂಕ್ರಾಮಿಕ ರೋಗ, ಕೋರೊನಾ ವ್ಯಾಕ್ಸಿನ್, ಆಪ್ತ ಸಮಾಲೋಚನೆ,ಸೀಳು ತುಟಿ ಸೇರಿದಂತೆ ಒಟ್ಟು 12 ರೀತಿಯ ಆರೋಗ್ಯದ ಮಳಿಗೆಗಳನ್ನು ತೆರೆದು ಬಂದಂತ ಜನರಿಗೆ ಮಾಹಿತಿ ನೀಡಿ ಜಾಗ್ರುತಿ ಮೂಡಿಸುವ ಮೂಲಕ ತಾಲೂಕು ಮಟ್ಟದ ಆರೋಗ್ಯ ಮೇಳವನ್ನು ಅಧಿಕಾರಿಗಳ ಒಗ್ಗಟ್ಟಿನಿಂದ ಯಶಸ್ವಿ ಯಾಗಿದ್ದು ಕಂಡು ಬಂತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮದ್ವಚಾರ್ಯ, ಸದಸ್ಯರಾದ ಮುನಿರಪಾಷ , ಅಲ್ಲಂಸಾಭ್, ಯಲ್ಲುಸಾಭ್ ಬದಿ, ಎಚ್. ಭಾಷ್, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ದೊಡ್ಡ ಬಸವರಾಜ್, ಅಭಿಷೇಕ್ ನಾಡಗೌಡ, ತಹಸೀಲ್ದಾರ ಮಂಜುನಾಥ ಭೋಗಾವತಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷೀದೇವಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಲೂಕು ಆರೋಗ್ಯಾಧಿಕಾರಿ ಡಾ. ಅಯ್ಯನಗೌಡ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಸುರೇಂದ್ರ ಬಾಬು, ಬಿಸಿಎಂ ತಾಲೂಕು ಅಧಿಕಾರಿ ಲಿಂಗಪ್ಪ ಅಂಗಡಿ, ಡಾ. ಹನುಮಂತ ರಡ್ಡಿ, ಡಾ. ನಾಗರಾಜ ಕಾಟ್ವಾ, ಡಾ. ಜೀವನೇಶ್ವರಯ್ಯ, ಡಾ. ಶಂಕರ ಗೌಡ, ಸಿಡಿಪಿಓ ಗಳಾದ ಸುದೀಪ ಕುಮಾರ, ಸೇರಿದಂತೆ ಹಾಜರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend