ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಛಲುವಾದಿ ಸಮಾಜದಿಂದ ಪೂರ್ವಭಾವಿ ಸಭೆ…!!!

Listen to this article

ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಛಲುವಾದಿ ಸಮಾಜದಿಂದ ಪೂರ್ವಭಾವಿ ಸಭೆ.

ಸಿಂಧನೂರು:ಮಾ.07.ನಗರದ ಪ್ರವಾಸಿ ಮಂದಿರದಲ್ಲಿ ಛಲುವಾದಿ ಮಹಾಸಭಾ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ 131 ನೇಯ ಜಯಂತಿಯ ಪ್ರಯುಕ್ತ ಸಮಾಜದಿಂದ ಪೂರ್ವಭಾವಿ ಕರೆಯಲಾಗುತ್ತದೆ.

ಸಭೆಯ ಉದ್ದೇಶಿಸಿ ಮಾತನಾಡಿದ ಛಲುವಾದಿ ಮಹಾಸಭಾ ತಾಲೂಕ ಅಧ್ಯಕ್ಷರಾದ ಡಾ.ರಾಮಣ್ಣ ಗೋನವಾರ ಈ ಜಯಂತಿಯನ್ನು ರಾಷ್ಟ್ರೀಯ ಹಬ್ಬದ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ನಾವು ಹಿಂದಿನಿಂದ ಸನಾತನ ಧರ್ಮಕ್ಕೆ ಹೊಂದಿಕೊಂಡು ಚಾಚು ತಪ್ಪದೆ ಹಬ್ಬಗಳನ್ನು ಆಚರಿಸುವಂತೆ ಅದೇರೀತಿ ಯಲ್ಲಿ ನಮ್ಮ ಮನೆಯ ಹಾಗೂ ನಮ್ಮ ಏರಿಯಾಗಳಲ್ಲಿ ಬಾಬಾ ಸಾಹೇಬರ ಜನುಮದ ಹಬ್ಬವನ್ನು ಸಡಗರ ಸಂಭ್ರಮದಿಂದ ಈ ವರ್ಷದಲ್ಲಿ ನಮ್ಮಿಂದಲೇ ಪ್ರಥಮವಾಗಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ಹಬ್ಬದಂತೆ ಆಚರಣೆಯನ್ನು ಕೈಗೊಳ್ಳುವಂತೆ “ಅಂಬೇಡ್ಕರ್ ಹಬ್ಬ” ಆಚರಿಸುವಂತೆ ಸಮಾಜದಿಂದ ನಿರ್ದಾರವನ್ನು ಕೈಗೊಳ್ಳೋಣ , ಪ್ರಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಯೊಬ್ಬರಿಗೆ ತಲುಪುವಂತೆ ಹೇಳಿದರು.

ಇಲ್ಲಿಯವರೆಗೆ ನಡೆದಂತೆ ಮಹಾನೀಯರ ಜಯಂತಿಗಳಿಗೆ ಗೈರು ಹಾಜರಾದ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಮಾಜದ ಮುಖಂಡರಿಗೆ ಯಾವುದೇ ನೋಟಿಸ್ ಕಳಿಸದೆ ತಹಶಿಲ್ದಾರರು ನಿರ್ಲಕ್ಷ್ಯ ವಹಿದ್ದಾರೆ ಹಾಗೂ ಡಾ.ಬಾಬು ಜಗಜೀವನ ರಾಮರವರ ಜಯಂತಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮ್ಯಾಟ್, ಊಟದ ವ್ಯವಸ್ಥೆ ಹಾಗೂ ಸರಿಯಾದ ಹಾಸನದ ವ್ಯವಸ್ಥೆ ಕಲ್ಪಿಸಿರಲಿಲ್ಲಾ ಹಾಗಾಗಿ ಕಾರ್ಯಕ್ರಮವು ಅಸ್ತವ್ಯಸ್ತತೆ ಯಾಗದಂತೆ ನಿಗಾ ವಹಿಸಬೇಕು ಕಾಟಾಚಾರಕ್ಕೆ ಜಯಂತಿ ಆಚರಣೆ ಯಾಗಬಾರದೆಂದು ಹನುಮಂತಪ್ಪ ವಕೀಲರು ಬೂದಿಹಾಳ ತಿಳಿಸಿದರು.

ತಾಲೂಕು ಆಡಳಿತಕ್ಕೆ ಸಮಾಜದ ವತಿಯಿಂದ ಸಲಹೆಗಳನ್ನು ನೀಡುವುದರ ಮೂಲಕ ಏಪ್ರಿಲ್ 14 ರಂದು ನಡೆಯುವ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಗೆ ಚರ್ಚಿಸುವು ವಿಷಯ ಹೋಬಳಿಗೆ ಎರಡರಂತೆ ವಾಹನದ ವ್ಯವಸ್ಥೆ ಕೈಗೊಳ್ಳುವಂತೆ ,ನಗರದ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬಗಳಿಗೆ ನೀಲಿಧ್ವಜ ಕಟ್ಟಿಸಬೇಕು, ಮೆರವಣಿಗೆಯಲ್ಲಿ ಭಾವಚಿತ್ರ,ನೀಲಿದ್ವಜದ ಬಾವುಟ ಕಲ್ಪಿಸಬೇಕು.ಬಿಸಿಲಿನ ತಾಪಮಾನವು ಹೆಚ್ಚಾಗಿರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಜನರಿಗೆ ತಂಪಾದ ಕುಡಿಯುವ ನೀರಿನ ವ್ಯವಸ್ಥೆಹಾಗೂ ಕಾರ್ಯಕ್ರಮದ ವೇದಿಕೆಯನ್ನು ವಿಜ್ರಂಭಣೆಯಿಂದ,ಅಚ್ಚುಕಟ್ಟಾಗಿ ಅಲಂಕರಿಸವುದರ ಜೊತೆಗೆ ಊಟದ ವ್ಯವಸ್ಥೆ,ಜಯಂತಿ ಆಚರಣೆಯ ಪ್ರಚಾರವನ್ನು ನಗರದ ಎಲ್ಲಾ ವಾರ್ಡಗಳಿಗೆ ಆಟೋದಿಂದ ದ್ವನಿವರ್ಧಕ ಮೂಲಕ ಕೈಗೊಳ್ಳಬೇಕು, ಎಂದು ತಹಶೀಲ್ದಾರ ಕಾರ್ಯಾಲಯದಲ್ಲಿ ನಾಳೆ ನಡೆಯುವ ತಾಲೂಕು ಆಡಳಿತ ವತಿಯಿಂದ ಪೂರ್ವಭಾವಿ ಸಭೆಯಲ್ಲಿ ವಿಷಯಗಳ ಅಂಶಗಳನ್ನು ತಹಶಿಲ್ದಾರರಿಗೆ ಸಮ್ಮುಖದಲ್ಲಿ ಪ್ರಸ್ತಾಪಿಸಲಾಗುವುದೆಂದು ತಾಲೂಕು ಛಲುವಾದಿ ಮಹಾಸಭಾದ ವತಿಯಿಂದ ಒಮ್ಮತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಛಲುವಾದಿ ಸಮಾಜದ ಮುಖಂಡರಾದ ನರಸಪ್ಪ ಕಟ್ಟಿಮನಿ,ಎಮ್.ಬಿ.ದೊಡ್ಡಮನಿ,ಹೆಚ್.ಎಫ್ ಮಸ್ಕಿ,ಹಿರಿಯ ಮುಖಂಡರಾದ ಈರಪ್ಪ ಗೋಮರ್ಸಿ, ವಿರೇಶ ಹೊಸಳ್ಳಿ, ಮಹಾಕಾಳೆಪ್ಪ ಮಲ್ಲಾಪೂರು, ನೀರುಪಾದಿ ಸಾಸಲಮರಿ, ಮೌಲಪ್ಪ ವಕೀಲರು,ಹುಲುಗಪ್ಪ ಬಿಎಸ್ಪಿ, ಬಸವರಾಜ ಕುನ್ನಟಗಿ, ಶರಣಬಸವ ಮಲ್ಲಾಪೂರು, ಬಸವರಾಜ ತಿಡಿಗೋಳ, ಮೌಲಪ್ಪ ಸುಕಾಲಪೇಟೆ, ವಿರುಪಣ್ಣ ಬೂದಿಹಾಳ ಇತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend