ಹಸಿದವರ ಹಸಿವು ನೀಗಿಸುವ ನಿರಂತರ ಕಾಯಕ ಮಾಡುತ್ತಿರುವ ಅಶೋಕ ನಲ್ಲ – ಶಾಸಕ ವೆಂಕಟರಾವ್ ನಾಡಗೌಡ…!!!

Listen to this article

ಹಸಿದವರ ಹಸಿವು ನೀಗಿಸುವ ನಿರಂತರ ಕಾಯಕ ಮಾಡುತ್ತಿರುವ ಅಶೋಕ ನಲ್ಲ – ಶಾಸಕ ವೆಂಕಟರಾವ್ ನಾಡಗೌಡ-

ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ನಿರಂತರವಾಗಿ ನಾಲ್ಕು ವರ್ಷಗಳಿಂದ ಅನೇಕ ಕಾರ್ಯಕ್ರಮಗಳಲ್ಲಿ ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿನ ಕಾರ್ಯಕ್ರಮಗಳಲ್ಲಿಉಳಿದಿರುವ ಮಹಾಪ್ರಸಾದವನ್ನು ಶೇಖರಣೆ ಮಾಡಿ ದಾನಿಗಳ ಸಹಕಾರದಿಂದ ಅನಾಥಾಶ್ರಮ ವೃದ್ಧಾಶ್ರಮ ಹಾಗೂ ನಿರ್ಗತಿಕ ಬಡಕುಟುಂಬಗಳಿಗೆ ತಲುಪಿಸುವಂತಹ ಮಾದರಿ ಕಾರ್ಯವನ್ನುನಿರ್ವಹಿಸುತ್ತಿದ್ದಾರೆ. ಹಸಿದವರಿಗೆ ಹಸಿವು ನೀಗಿಸುವ ಕೆಲಸವನ್ನು ಅಶೋಕ್ ನಲ್ಲವರು ಮತ್ತು ಅವರ ತಂಡದೊಂದಿಗೆ ಮಾಡುತ್ತಿರುವ ಕಾರ್ಯ ನಮ್ಮ ಸಿಂಧನೂರಿನ ಕರುಣೆ ಘನತೆ ಗೌರವವನ್ನು ಹೆಚ್ಚಿಸುತ್ತದೆ. ಇಂದು ವಿಜಯರಾಯ ಪಾಟಿಯವರು ವಾಹನವನ್ನು ಇವರ ಕಾರ್ಯಕ್ಕೆ ವಿತರಿಸುವ ಮೂಲಕ ಅನ್ನದ ಮಹತ್ವವನ್ನು ತಿಳಿಸಿ ಕೊಡುವಂತಹ ಇಂತಹ ಕಾರ್ಯ ಶ್ಲಾಘನೀಯ ಎಂದು ಮಾತನಾಡಿದರು.

ಸಿಂಧನೂರು ನಗರದ ಹೊಸಳ್ಳಿ (ಇ. ಜೆ)ಕ್ಯಾಂಪಿನ ಶ್ರೀ ಆದಿಶಕ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸಿಂಧನೂರು ಕಮ್ಮವಾರಿ ಸಂಘದ ವಿಜಯರಾಯಪಾಟಿ ಅವರಿಂದ ವಿತರಿಸಿದ ಆಹಾರ ಶೇಖರಣಾ ವಾಹನಕ್ಕೆ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಚಾಲನೆ ನೀಡಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ದೇವದುರ್ಗ ತಾಲೂಕಿನ ನಿಲಗಲ್ ಹಿರೇಮಠದ ಷಟಸ್ಥಲ ಬ್ರಹ್ಮ ಶ್ರೀ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಸಾನಿಧ್ಯವನ್ನು ಷಟಸ್ಥಲ ಬ್ರಹ್ಮ ಶ್ರೀ ಸೋಮನಾಥ ಶಿವಾಚಾರ್ಯಮಹಾಸ್ವಾಮಿಗಳು ಜಗದ್ಗುರು ರಂಭಾಪುರಿ ಶಾಖಾಮಠ ಮೂರನೇ ಮೈಲ್ ಕ್ಯಾಂಪ್ ಸಿಂಧನೂರು, ಶ್ರೀ ಅಮರ ಗುಂಡೇಶ್ವರ ಶಿವಾಚಾರ್ಯಮಹಾಸ್ವಾಮಿಗಳು ತುರುವಿಹಾಳ ವಹಿಸಿಕೊಂಡಿದ್ದರು.ವಾಹನದ ವಿಶೇಷ ಪೂಜೆಯನ್ನು ಶ್ರೀ ವಿರುಪಾಕ್ಷಯ್ಯ ದೇವಸ್ಥಾನದ ಅರ್ಚಕರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರೇಶಯಾದವ ಮಾಜಿ ಸೈನಿಕರು,ಅವಿನಾಶ ದೇಶಪಾಂಡೆ ಕಾರ್ಯದರ್ಶಿಗಳು ಜೀವ ಸ್ಪಂದನ ಸೇವಾ ಸಂಸ್ಥೆ, ಧರ್ಮನ ಗೌಡ ಮಲ್ಕಾಪುರ ಜೆಡಿಎಸ್ ಮುಖಂಡರು, ಅಶೋಕಗೌಡ ಗದ್ರಟಗಿ, ಶಂಕರಗೌಡ ಎಲೆಕೂಡ್ಲಿಗಿ ಗೌರವಾಧ್ಯಕ್ಷರು ವನಸಿರಿ ಫೌಂಡೇಶನ್,ಎನ್.ನಾಗಲಿಂಗಪ್ಪ ಅಧ್ಯಕ್ಷರು ಗ್ರಾ.ಪ.ಹೊಸಳ್ಳಿ (ಇ.ಜೆ.) ಜೇಮ್ಸ್ ಗ್ರಾ.ಪಂ.ಸ, ಲಿಂಗರಾಜು ಗ್ರಾ.ಪಂ.ಸ,ಕೆ ಶಿವು ಗ್ರಾ.ಪಂ.ಸ,ಸಂತೋಷ ಅಂಗಡಿ ಅಧ್ಯಕ್ಷರು ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್, ಚನ್ನಬಸಯ್ಯ ಸ್ವಾಮಿಹಿರೇಮಠ ಆಡಳಿತಾಧಿಕಾರಿಗಳು ಕಾರುಣ್ಯ ಆಶ್ರಮ,ಪ್ರಶಾಂತ್ ರಾಥೋಡ್ ಸಮಾಜ ಸೇವಕರು,ಹುಲ್ಲಪ್ಪ ರಾಥೋಡ್ ನಿವೃತ್ತ ಪೊಲೀಸ್ ಅಧಿಕಾರಿಗಳು, ಚನ್ನ ವೀರನಗೌಡ ಸಮಾಜ ಸೇವಕರು,ಡಾ.ನವೀನ್ ದಂತವೈದ್ಯರು ಸಿಂಧನೂರು, ದುರ್ಗೇಶ ಡಿಎಸ್ಪಿ ವನಸಿರಿ ಫೌಂಡೇಶನ್,ಮಹೇಶ ವಿಶ್ವಕರ್ಮ ಕಾರುಣ್ಯ ಆಶ್ರಮ ಸಿಬ್ಬಂದಿ ಹಾಗೂ ಹೊಸಳ್ಳಿ ಗ್ರಾಮದ ಹಾಗೂ ಕ್ಯಾಂಪಿನ ಸರ್ವ ನಾಗರಿಕರು ಉಪಸ್ಥಿತರಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend