ತುಂಗಭದ್ರಾ ಎಡದಂಡೆ ವಿತರಣಾ ಕಾಲುವೆ ನಂ.55 ರಿಂದ ಅನಧಿಕೃತವಾಗಿ ನೀರನ್ನು ತೆಗೆಯುವುವರ ವಿರುದ್ದ ರೈತ ಮುಖಂಡ ಅಮೀನಪಾಷ ದಿದ್ದಗಿ ಗರಂ…!!!

Listen to this article

ಸಿಂಧನೂರು : ತುಂಗಭದ್ರಾ ಎಡದಂಡೆ ವಿತರಣಾ ಕಾಲುವೆ ನಂ.55 ರಿಂದ ಅನಧಿಕೃತವಾಗಿ ಮತ್ತು ಪೈಪ್ ಅಳವಡಿಸಿ ನೀರು ತೆಗೆಯುವ ಎತ್ತುವ ವ್ಯಕ್ತಿಗಳ ವಿರುದ್ಧ ರೈತ ಮುಖಂಡ ಅಮೀನಪಾಷ ದಿದ್ದಗಿ ರವರಿಂದ ಲೋಕಾಯುಕ್ತ ನ್ಯಾಯಾಲಯದಲ್ಲಿ 7/2/2015 ರಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ನ್ಯಾಯಾಲಯ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಉಪಕಾಲುವೆ 55ರ ಅಡಿಯಲ್ಲಿ ಒಟ್ಟು 17ಸಾವಿರ ಎಕರೆ ನೀರು ಕೊಡಬೇಕು.ಮೇನ್ ಕಾಲುವೆಯಲ್ಲಿ ಮೈಲ್ ನಂ. 69 ರಲ್ಲಿ 9 ಪಿಟ್ ನೀರು ಗೇಜ್ ಇರಬೇಕು 0 ದಿಂದ 31 ಕಿ.ಮೀಟರ್ ವರಗೆ ರೈತರ ಹೊಲಗಳಿಗೆ ನೀರು ಹರಿಸಬೇಕು ಎಂದು ಜುಲೈ 2021 ರಂದು ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ.ಕಾಲುವೆಗೆ ಅನಧಿಕೃತವಾಗಿಅಳವಡಿಸಿರುವ ಪಂಪ್ ಸೆಟ್‌ಗಳನ್ನು ತೆಗೆದುಹಾಕಲು ಕಾನೂನಿನ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಿ ರೈತರು ತಮ್ಮಪಂಪ್‌ಸೆಟ್‌ಮತ್ತು ಇತರ ಅಳವಡಿಸಲಾದ ವಸ್ತುಗಳನ್ನು ತೆಗೆದು ಹಾಕಲು ಸಮಂಜಸವಾದಸಮಯವನ್ನು ನೀಡಬೇಕು ರೈತರು ತಮ್ಮ ಹೊಲಗಳಲ್ಲಿ ಬೆಳೆ ಬೆಳೆದಿರುವಂತಹ ಸಂದರ್ಭಗಳಲ್ಲಿ, ಪಂಪ್ ಸೆಟ್‌ಗಳನ್ನು ಹಠಾತ್ ಮತ್ತು ತಕ್ಷಣ ತೆಗೆದುಹಾಕುವುದರಿಂದ ಬೆಳೆಗಳಿಗೆಹಾನಿಯಾಗಬಹುದು. ಹೀಗಾಗಿ ಪಂಪ್ ಸೆಟ್ ಗಳನ್ನು ಕಾಲುವೆಯಿಂದ ತೆಗೆಯಲು ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕಾಲಾವಕಾಶ ಬೇಕು ಎಂಬ ಉದ್ದೇಶದಿಂದ ಆರು ತಿಂಗಳ ಕಾಲಾವಕಾಶ ನೀಡಿದೆ. 6 ತಿಂಗಳೊಳಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಲು ವಿಫಲವಾದರೆ, ಅಗತ್ಯವಿದ್ದಲ್ಲಿ ಮತ್ತೊಂದು ದೂರು ಸಲ್ಲಿಸಲು ದೂರುದಾರರಿಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ತಿಳಿಸಿದೆ ಎಂದು ತಾಲೂಕು ಎಪಿಎಂಸಿ ಸಭಾಭವನದಲ್ಲಿ ಆರ್. ಮಾನಸಯ್ಯ ಪತ್ರಿಕಾಗೋಷ್ಠಿ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಂತರ ಮಾತನಾಡಿದ ರೈತ ಮುಖಂಡ ಅಮೀನಪಾಷ ದಿದ್ದಗಿ ರೈತರ ಪರವಾಗಿ ಕೆಲಸ ಮಾಡಬೇಕಾದ ನೀರಾವರಿ ಅಧಿಕಾರಿಗಳು ಅಕ್ರಮ ಪಂಪಸೇಟ್, ಪೈಪಲೈನ್, ಅಳವಡಿಸಿರುವವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಶಾಸಕ ವೆಂಕಟರಾವ್ ನಾಡಗೌಡ್ರು ಅಧಿಕಾರ ಇಲ್ಲದ ಸಂಧರ್ಭದಲ್ಲಿ ನಾನು ರೈತರ ಪರವಾಗಿ ಇದ್ದೇನೆ ಎಂದು ಭಾಷಣ ಬೀಗಿತಿರಿ. ಒಂದು ದಿನವಾದರೂ ಕೆಡಿಪಿ ಸಭೆಯಲ್ಲಿ ಕೆಳಭಾಗದ ರೈತರ ಪರವಾಗಿ ಸಭೆಯಲ್ಲಿ ಚರ್ಚೆ ಮಾಡಿಲ್ಲ,ಸಹಾಯಕ ಆಯುಕ್ತರು, ಮಸ್ಕಿ ಮತ್ತು ಸಿಂಧನೂರು ತಹಸೀಲ್ದಾರ ತಾಲೂಕು ಆಡಳಿತ ಸಂಪೂರ್ಣ ವಿಫಲರಾಗಿದ್ದಾರೆ .ತುಂಗಭದ್ರಾ ಎಡದಂಡೆ ವಿತರಣಾ ಕಾಲುವೆ ನಂ.55 ರಿಂದ ಅಕ್ರಮವಾಗಿ ಮತ್ತು ಅನಧಿಕೃತವಾಗಿ ನೀರು ತೆಗೆಯುವ ಎತ್ತುವವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾದ ನೀರಾವರಿ ಅಧಿಕಾರಿಗಳು ಮುಖ್ಯ ಇಂಜಿನಿಯರ್,ಅಧೀಕ್ಷಕ ಅಭಿಯಂತರರು,ಸಹಾಯಕ ಅಭಿಯಂತರರು,ಸಹಾಯಕ ಕಾರ್ಯಪಾಲಕಅಭಿಯಂತರರು,ಈ ಎಲ್ಲಾ ಅಧಿಕಾರಿಗಳು ಕಾಲುವೆಗೆ ಅನಧಿಕೃತವಾಗಿ ಅಳವಡಿಸಿರುವ ಪಂಪ್ ಸೆಟ್‌ಗಳನ್ನು ತೆಗೆದುಹಾಕಲು ಕಾನೂನಿನ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳವಲ್ಲಿ ವಿಫಲರಾಗಿದ್ದಾರೆ.ಈಗಲಾದರೂ ನ್ಯಾಯಾಲಯದ ಆದೇಶವನ್ನು ಪಾಲಿಸಿ, ಇಲ್ಲದಿದ್ದರೆ ಪುನಃ ನ್ಯಾಯಾಲದ ಮೊರೆ ಹೋಗಲು ಅವಕಾಶ ಮಾಡಿಕೊಡದೆ ಸಂಬಂಧಪಟ್ಟ ಅಧಿಕಾರಿಗಳು ನ್ಯಾಯ ಒದಗಿಸಿ ಕೊಡಬೇಕು ಇಲ್ಲದಿದ್ದರೆ ಮತ್ತೊಮ್ಮೆ ನ್ಯಾಯಲಯದ ಮೊರೆ ಒಗಬೇಕಾಗುತ್ತದೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ರಮೇಶಪ್ಪ ದಿದ್ದಗಿ, ಎಂ. ಗಂಗಾಧರ, ಮಾಬುಸಾಬ,ಮಹಾತೇಶ ನಾಯಕ, ಶ್ರೀನಿವಾಸ, ಬಾಗೋಡೆಪ್ಪ ಇತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend