ಸಿಂಧನೂರು:-ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ರವರು ದೇಹತ್ಯಾಗ ಮಾಡಿದ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಣೆ…!!!

Listen to this article

ಸಿಂಧನೂರು : ಇಂದು ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ರವರು ದೇಹತ್ಯಾಗ ಮಾಡಿದ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಆಚರಿಸಲಾಯಿತು.

1956 ಡಿಸೆಂಬರ್ 6 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮಹಾಪರಿನಿರ್ವಾಣವಾದ ದಿನ. ನಮ್ಮ ದೇಶಕ್ಕೆ ಈ ದಿನವನ್ನು ಕರಾಳ ದಿನ ಎಂದು ನಾವು ಹೇಳಬಹುದು. ಇತಿಹಾಸ ಪುಟದಲ್ಲಿ ಮಾನವಕುಲಕ್ಕೆ ಆದಂತಹ ಅಘಾತಕಾರಿ ಬೆಳವಣಿಗೆ ಇದು. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸ ಬೇಕಾದರೆ ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. 520 ದೇಶಗಳ ಸಂವಿಧಾನದಲ್ಲಿ ಜಗತ್ತಿನಲ್ಲಿ ಅತಿ ದೊಡ್ಡ ಸಂವಿಧಾನ ಭಾರತದ ಸಂವಿಧಾನ.ಮುಂದಿನ ಭವಿಷ್ಯದ ದೃಷ್ಟಿಯಿಟ್ಟುಕೊಂಡು ಅವತ್ತಿಗೆ ಅವರು ಮೀಸಲಾತಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ, ವಿವಿಧ ಇಲಾಖೆಗಳಲ್ಲಿ ಹೆಚ್ಚಿನ ಅನುದಾನ ಸಿಗುತ್ತದೆ ಅಂದರೆ ಅವರ ದೂರದೃಷ್ಟಿ ಹೇಗಿರಬೇಕೆಂದು ತಿಳಿದುಕೊಳ್ಳಬೇಕು. ಸಮಾಜದಲ್ಲಿ ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು ಕಟ್ಟಕಡೆಯ ವ್ಯಕ್ತಿಗೆ ಸರಕಾರಿ ಸೌಲಭ್ಯಗಳನ್ನು ಕಲ್ಪಿಸುವ ಪ್ರಯತ್ನ ಮಾಡಿದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿ ದೊರಕಲಿದೆ ಎಂದು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ತಾಲೂಕು ದಂಡಾದಿಕಾರಿಗಳಾದ ಮಂಜುನಾಥ ಭೋಗಾವತಿ ತಿಳಿಸಿದರು.

ನಂತರ ಮಾತನಾಡಿದ ಸಮಾಜ ಕಲ್ಯಾಣ ಅಧಿಕಾರಿಗಳಾದ ಮಹಾಲಿಂಗಪ್ಪ ಲಿಂಗಳದಾಳ ಡಿಸೆಂಬರ್ 6 ಮಹಾ ಚೇತನರನ್ನು ಕಳೆದುಕೊಂಡ ದಿನ. ಬಾಬಾ ಸಾಹೇಬರು ಸಂವಿಧಾನಾತ್ಮಕ ಹಕ್ಕುಗಳನ್ನು ಮತ್ತು ಸೌಕರ್ಯಗಳನ್ನು ನೀಡಿದ್ದಾರೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರ ಪರಿಶ್ರಮದಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರಕಾರದ ಅನೇಕ ಯೋಜನೆಗಳು ದೊರೆಯುತ್ತವೆ. ಅವುಗಳನ್ನು ಉಪಯೋಗಿಸಿಕೊಂಡು ತಳಸಮುದಾಯವೂ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದರು.

ಈ ಸಂದರ್ಭದಲ್ಲಿ ದಲಿತ ಮುಖಂಡ ಬೋನಾಚಾರ್ಯ ಮಾತನಾಡಿ ಡಿಸೆಂಬರ್ 6 ದಿನವನ್ನು ಐಕ್ಯತೆಯ ದಿನವನ್ನಾಗಿ ಮತ್ತು ಅವರ ಹೋರಾಟದ ದಿನವನ್ನು ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಣೆ ಮಾಡಿದಾಗ ಮಾತ್ರ ಅವರಿಗೆ ಗೌರವ ಸಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ಗುರುರಾಜ ಮುಕುಂದಾ,ರಾಮಣ್ಣ ಗೋನ್ವಾರ,ಹನುಮಂತಪ್ಪ ವಕೀಲರು ಬೂದಿವಾಳ, ಅಯ್ಯಪ್ಪ ವಕೀಲರು ಮಲ್ಲಾಪುರು, ಅವಿನಾಶ್ ದೇಶಪಾಂಡೆ,ಚನ್ನಬಸವಸ್ವಾಮಿ ಮರಿಯಪ್ಪ ಸುಕಲ್ಪೇಟೆ, ಹನುಮಂತ ಗೋಮರ್ಸಿ, ಸಂಗಮೇಶ್ ಮುಳ್ಳೂರ, ಮೌಲಪ್ಪ ಸುಕಲ್ಪೇಟೆ,ಇನ್ನೂ ಅನೇಕ ದಲಿತಪರ ಮುಖಂಡರು, ಕನ್ನಡಪರ ಮುಖಂಡರು ಭಾಗವಹಿಸಿದ್ದರು…

 

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend