ಮೊಳಕಾಲ್ಮೂರು: ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ, ಅಧಿಕಾರಿಗಳ ಸೋಮಾರಿತನ: ಸ್ವಚ್ಛತೆ ಮರೀಚಿಕೆ.!?

Listen to this article

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಸ್ವಚ್ಛತೆ ಮರೀಚಿಕೆ
ಕಚೇರಿಯ ರಾತ್ರಿ ಆಗುತ್ತಿದ್ದಂತೆ ಕುಡುಕರ ಅಡಿಯಾಗಿ ಮಾರ್ಪಡುತ್ತಿದೆ. ಕಚೇರಿಯ ಆವರಣದಲ್ಲಿ ಕುಡಿದು ಬಿಸಾಡಿದ ಕಾಲಿ ಬಾಟಲುಗಳು, ಸೀಕ್ರೆಟ್ ಗಳು, ಕಾಗದ, ಪ್ಲಾಸ್ಟಿಕ್ ತ್ಯಾಜ್ಯ, ಬೆಳೆಗೆ ಕಚೇರಿ ತೆಗೆಯುವ ಅಷ್ಟರಲ್ಲಿ ಗೋಚರಿಸುತ್ತವೆ. ಕಚೇರಿ ಆವರಣದಲ್ಲಿ ಜಾಲಿ ಮುಳ್ಳಿನ ಗಿಡಗಳು ಹೆಮ್ಮರವಾಗಿ ಬೆಳೆದರು ತೆರವುಗೊಳಿಸಲು ಮುಂದಾಗಬೇಕಾದ ಅಧಿಕಾರಿಗಳು ಮೌನವಾಗಿದ್ದಾರೆ.? ಕಚೇರಿಯ ಆವರಣದಲ್ಲಿ ಹತ್ತು-ಹದಿನೈದು ವರ್ಷಗಳ ಕೆಟ್ಟು ನಿಂತ ವಾಹನಗಳು ಕಚೇರಿಯ ಮುಂದೆ ಇತರ ಇದ್ದರೆ ಕಚೇರಿಯ ಅಂದ ಹಾಳಾಗುತ್ತೆ ಪ್ರತಿನಿತ್ಯ ಕೆಲಸಕ್ಕೆ ಹಾಜರಾಗುವ ಅಧಿಕಾರಿಗಳು ಕಂಡು ಕಾಣದಂತೆ ನಿರ್ಲಕ್ಷ್ಯವಹಿಸಿದ್ದಾರೆ. ಕಚೇರಿಯ ಮುಂಭಾಗ ಹಾಳುಕೊಂಪೆ ಯಾಗಿ ಮಾರ್ಪಟ್ಟಿದೆ. ನೈರ್ಮಲ್ಯದ ನಡುವೆಯೇ ಅಧಿಕಾರಿಗಳು ಕೆಲಸ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರಿ ಸಂಸ್ಥೆಯ ಕಚೇರಿಗಳ ಆವರಣ ತ್ಯಾಜ್ಯಮಯವಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕಾದವರು ಸಾರ್ವಜನಿಕರ ಅಪಹಾಸ್ಯಕ್ಕೆ ಗುರಿಯಾಗಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಕಚೇರಿ ಕಾಂಪೌಂಡಿನ ಸುತ್ತ ಕಾಗದ, ಪ್ಲಾಸ್ಟಿಕ್ ತ್ಯಾಜ್ಯ ಸಾಮಾನ್ಯವಾಗಿದ್ದು ಸೊಳ್ಳೆಗಳ ತಾಣವಾಗಿವೆ. ಮಧ್ಯೆ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿ ದುರ್ವಾಸನೆಯ ತಾಣವಾಗಿ ಬದಲಾಗಿದೆ. ಅಧಿಕಾರಿಗಳು ಯಾವಾಗ ಬುದ್ಧಿ ಕಾಲಿಯುತ್ತಾರೆ. ಎಂಬುದು ಈ ಕಚೇರಿಗಳಿದದಿನವೂ ಎಡತಾಕುವ ಸಾರ್ವಜನಿಕರ ಪ್ರಶ್ನೆ.?.

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend