ಮೊಳಕಾಲ್ಮೂರು: ತಾಲೂಕಿನ ವಿವಿಧ ಅರಣ್ಯ ಪ್ರದೇಶ ಗಳಲ್ಲಿ ಗಿಡ ಬೆಳೆಸಲು ಬಿಜೆಪಿ ಕಾರ್ಯಕರ್ತರು ಮಣ್ಣಿನ ಬೀಜದುಂಡೆ ತಯಾರಿಕೆ.!

Listen to this article

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಹಾನಗಲ್ ಬಳಿಯ ಕೆಳಗಳಹಟ್ಟಿಯಲ್ಲಿ ಇಂದು ಚಾಲನೆ. ವಿವಿಧ ಅರಣ್ಯ ಪ್ರದೇಶಗಳಲ್ಲಿ ಗಿಡ ಬೆಳೆಸಲು ಬಿಜೆಪಿ ಕಾರ್ಯಕರ್ತರು ಮಣ್ಣಿನ ಬೀಜದುಂಡೆ ತಯಾರಿಸುತ್ತಿರುವುದು. ಜನ ಸಂಘ ಸಂಸ್ಥಾಪಕರಾದ ಸ್ವರ್ಗೀಯ ಡಾ ಶ್ಯಾಮಪ್ರಸಾದ್ ಮುಖರ್ಜಿ ರವರ ಪುಣ್ಯ ತಿಥಿ (23-06) ಇಂದ ಜನ್ಮ ವರ್ಷಾಚರಣೆ (ಜುಲೈ 06-07) ವರೆಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಪರಿಸರ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದು ರಾಜ್ಯ ಜಿಲ್ಲಾ ಭಾ ಜ ಪ ಆಪೇಕ್ಷೆ ಅದರಂತೆ ಮೊಳಕಾಲ್ಮುರು ಮಂಡಲದಲ್ಲೂ ಇತ್ತೀಚೆಗೆ ಮಾನ್ಯ ಸಚಿವರಾದ ಬಿ ಶ್ರೀರಾಮುಲು ರವರು 1000 ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಅದನ್ನು ಯಶಸ್ವಿಯಾಗಿ ನೆಡೆಸಲು ನಮ್ಮ ಕಾರ್ಯಕರ್ತರು ಶ್ರಮಿಸಿದ್ದನ್ನು ನೀವು ಕಂಡಿದ್ದಿರಿ. ಜಿಲ್ಲಾ ಭಾಜಪ ವತಿಯಿಂದ 20000 ಕ್ಕೂ ಹೆಚ್ಚು ಸೀಡ್ ಬಾಲ್ ಮಾಡಿ ಜೋಗಿಮಟ್ಟಿ ಪ್ರದೇಶದಲ್ಲಿ ಎಸೆಯಲು ತಯಾರಿ ನೆಡೆಸಿದ್ದು ಮುಂದಿನ ದಿನದಲ್ಲಿ ಮೊಳಕಾಲ್ಮುರು ಮಂಡಲದ ನೇರ್ಲೂಟಿ, ಮರ್ಲಹಳ್ಳಿ ಬಳಿ, ನುಂಕೇ ಮಲೆ ಸಿದ್ದೇಶ್ವರ ಬೆಟ್ಟಕ್ಕೆ ತೆರಳುವ ಮಣ್ಣಿನ ಬೆಟ್ಟಗಳಲ್ಲಿ 10000 ಎಸೆಯಲು ಯೋಚಿಸಲಾಗಿದೆ ಡಾ. ಪಿ ಎಂ ಮಂಜುನಾಥ್ ಅವರು ತಿಳಿಸಿದರು. ಆ ಕಾರ್ಯಕ್ಕೂ ಇಂದು ಹಾನಗಲ್ ಬಳಿಯ ಕೆಳಗಳಹಟ್ಟಿಯಲ್ಲಿ ಸೀಡ್ ಬಾಲ್ ಮಾಡುವ ಕಾರ್ಯ ಪಕ್ಷದ ಕಾರ್ಯಕರ್ತರಿಂದ ಹಮ್ಮಿಕೊಳ್ಳಲಾಗಿತ್ತು. ಒಂದಷ್ಟು ಹರಟೆ, ಸ್ವಲ್ಪಹೊತ್ತು ಭಕ್ತಕುಂಬಾರರಂತೆ ಮಣ್ಣನ್ನು ಹದಗೊಳಿಸಿ, ಚಂದದ ಬೀಜಗಳು ಯುಕ್ತ 3000 ಕ್ಕೂ ಹೆಚ್ಚು ಮಣ್ಣಿನುಂಡೆ ಕಾರ್ಯಕರ್ತರು ಒಂದೆರೆಡು ಗಂಟೆಗಳಲ್ಲಿ ತಯಾರಿಸಿ ಒಣಗಿಸಲಿರಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಎಲ್ಲಾ ಮುಖಂಡರುಗಳು ಉಪಸ್ಥಿತರಿದ್ದರು.

 

ವರದಿ. ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend