ಸರ್ಕಾರಿ ಶಾಲಾ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಗವಹಿಸುವಂತೆ ಶೇಖ್ ತನ್ವೀರ್ ಆಸಿಫ್ ಕರೆ…!!!

Listen to this article

ಸರ್ಕಾರಿ ಶಾಲಾ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಗವಹಿಸುವಂತೆ ಶೇಖ್ ತನ್ವೀರ್ ಆಸಿಫ್ ಕರೆ

ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಭಾಗವಹಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಮಂಡ್ಯ ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ವಲಯ ಮಂಡ್ಯ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಉಮ್ಮಡಹಳ್ಳಿ ಗ್ರಾಮ ಪಂಚಾಯತಿಯ ಸಹೋದ್ಯೋಗದೊಂದಿಗೆ 25 ದಿನಗಳ ಬೇಸಿಗೆ ಹಬ್ಬ ಕಾರ್ಯಕ್ರಮ ನಡೆಯಿತು.

8 ರಿಂದ 10ನೇ ತರಗತಿಯವರ ವಿದ್ಯಾರ್ಥಿಗಳಿಗೆ ಈಜು, ಯೋಗ, ಧ್ಯಾನ, ಗ್ರಾಮೀಣ ಕ್ರೀಡೆಗಳು, ಪವಾಡ ರಹಸ್ಯ, ಬಯಲು ಜನಸ್ನೇಹಿ, ಪೊಲೀಸ್ ವಿನೋದ, ಗಣಿತ, ಕಂಪ್ಯೂಟರ್ ಶಿಕ್ಷಣ, ಕರಾಟೆ, ಸಂಗೀತ, ಆರೋಗ್ಯ, ಶಿಕ್ಷಣ, ಮಾನಸಿಕ ಸಾಮರ್ಥ್ಯ, ಚಿತ್ರಕಲೆ ಹಾಗೂ ಇತರೆ ಚಟುವಟಿಕೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅಂತಿಮ ದಿನವು ಕೂಡ ನಡೆಯಿತು.

ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಲು ಕುತೂಹಲ ಮೂಡಬೇಕು ಹಾಗೂ ಪರಿಶ್ರಮ ಇರಬೇಕು ಪರಿಶ್ರಮದ ಜೊತೆಯಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಮನಸ್ಸು ಹಾಗೂ ಗುಣವನ್ನು ಹೊಂದಿರಬೇಕು ಗೆಲುವಿನ ಜೊತೆಯಲ್ಲಿ ನಿಮ್ಮ ಜೊತೆಯಲ್ಲಿರುವ ವ್ಯಕ್ತಿಗಳು ಕೂಡ ಗೆಲ್ಲಬೇಕು ಆದ್ದರಿಂದ ನಿಮ್ಮ ಗೆಲುವಿನ ಉತ್ತರ ಹೆಚ್ಚಾಗುತ್ತದೆಂದು ತಿಳಿಸಿದರು.

ಜಗತ್ತಿನಲ್ಲಿ ಪ್ರಖ್ಯಾತಿ ಹೊಂದಿರುವ ಪ್ರತಿಭಾವಂತ ವ್ಯಕ್ತಿಗಳ ಬಗ್ಗೆ ನಾವು ಗ್ರಂಥಾಲಯ ಹಾಗೂ ಇತರೆ ಕ್ಷೇತ್ರಗಳಲ್ಲಿ ತಿಳಿಯಬಹುದು.

ಪ್ರತಿಭಾವಂತ ಶಿಕ್ಷಕರು ಸಿಕ್ಕರೆ ನಮ್ಮ ಗುರಿ ಸುಗಮವಾಗಿ ತಲುಪಬಹುದು ಎಂದು ಈ ಶಾಲೆಯು ಎಲ್ಲಾ ಸರ್ಕಾರಿ ಶಾಲೆಗಳಿಗೆ ಒಂದು ಮಾದರಿಯಾಗಿದೆ.

ಈ ಸಂದರ್ಭದಲ್ಲಿ ಡಿ.ಡಿ.ಪಿ.ಐ ಜವರೇಗೌಡ , ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೇಣು, ತಾಲ್ಲೂಕು ಪಂಚಾಯತ್ ಟಿ.ಪಿ.ಓ ಶ್ರೀನಿವಾಸ, ಮುಖೋಪಾಧ್ಯಾಯರಾದ ನಾಗರಾಜು ಹಾಗೂ ಇನ್ನಿತರರಿದ್ದರು ಉಪಸ್ಥಿತರಿದ್ದರು…

 

ವರದಿ. ಸುರೇಶ್. ಮಂಡ್ಯ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend