ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ನೀಡುವಂತೆ ಆಗ್ರಹ..!

Listen to this article

ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ನೀಡುವಂತೆ ಆಗ್ರಹ..! ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ ಬೆಂಗಳೂರು.

ಬೆಳಗಾವಿ:-ನಗರದಲ್ಲಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ 21/10/2022 ರಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ ಕರ್ನಾಟಕದಲ್ಲಿರುವ ಪರಿಶಿಷ್ಟರು ಏಕಸ್ವರೂಪದ ಒಂದೇ ಬಗೆಯ ಒಂದೇ ಭಾಷೆಯ ವರ್ಗಗಳೊಳ್ಳ ಜಾತಿಗಳಾಗಿರುವುದಿಲ್ಲ,

ಅಸ್ಪೃಶರು, ಸ್ಪೃಶರು, ಅಲೇಮಾರಿಗಳು ಸೇರಿಕೊಂಡು 101 ಪರಿಶಿಷ್ಟ ಜಾತಿಗಳಾಗಿವೆ. ಪರಿಶಿಷ್ಟ ಅತ್ಯಂತ ಹಿಂದೂಳದಿರುವ ಸೌಲಭ್ಯ ವಂಚಿತ ಸಮೂದಾಯಗಳಿಗೆ ಅವರವರ ಜನಸಂಖ್ಯೆ ಆಧಾರಿತವಾಗಿ ಈಗಿರುವ ಮೀಸಲಾತಿಯನ್ನು ಪರಿಸ್ಕರಣೆ ಮಾಡಿ 101 ಜಾತಿಗಳಗೂ ಸಮಪಾಲು ಸಮಬಾಳು ಸಾಮಾಜಿಕ ನ್ಯಾಯಕ್ಕಾಗಿ ಪ್ರಸ್ತುತ ಚಳಗಾಲ ಆಧೀವೇಶನದ ಸಂದರ್ಭದಲ್ಲಿ ಬೆಳಗಾವಿ ಸುರ್ವಣ ಸೌಧ ಎದುರಲ್ಲಿ ಒಳಮೀಸಲಾತಿ ಜಾರಿಗಾಗಿ ಡಿಸೆಂಬರ್ 14 ರಿಂದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ಸಮನ್ವಯ ಸಮಿತಿ ತಿಳಿಸಿದೆ.

ನ್ಯಾಯಮೂರ್ತಿ ನಾಗಮೋಹನದಾಸ ವರದಿ ಶಿಫಾರಸ್ಸಿನಂತೆ ಪರಿಶಿಷ್ಟರಿಗೆ ಶೇಕಡಾ 2 ರ ಮೀಸಲು ಏರಿಕೆಯನ್ನು ಸರ್ಕಾರ ಅಧಿಕೃತಗೊಳಿಸಿ ನಂತರ ಮೊದಲಿದ್ದ ಶೇಕಡಾ 15 ರ ಮೀಸಲು ಸೇರಿಸಿಕೊಂಡು ಒಟ್ಟು ಶೇಕಡಾ 17 ರ ಮೀಸಲಾತಿಯಲ್ಲಿ ರಾಜ್ಯದ 101 ಪರಿಶಿಷ್ಟರ ಜಾತಿ ಸಮುದಾಯಗಳಿಗೆ ಜನಸಂಖ್ಯಾಧಾರಿತ ಒಳಮೀಸಲಾತಿ ಜಾರಿಗಾಗಿ ಸರ್ಕಾರದ ಗಮನ ಸೇಳೆಯಲು ಹುಬ್ಬಳ್ಳಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮನೆಯಿಂದ ದಿನಾಂಕ: 21/11/2022 ರಂದು ಅಸ್ಪೃಶ್ಯರ ನಡೆ ಬೆಳಗಾವಿ ಸುರ್ವಣ ಸೌಧದ ಕಡೆ ಒಳಮೀಸಲಾತಿಗಾಗಿ ಬೆಳಗಾವಿ ಚಲೋ ಎಂಬ ಜನಾಂದೋಲನ ಬೈಕ್ ಜಾಥಾ ಶ್ರೀ ಅಜೀತ ಮಾದರ ಹಾಗೂ ಎಸ್.ಆರ್ ರಂಗನಾಥ ರವರ ನೇತೃತ್ವದಲ್ಲಿ ಸುಮಾರು 2000 ಕಿ.ಮೀ 21 ದಿನ ಸುಮಾರು 250 ಕಾರ್ಯಕರ್ತರ ತಂಡದೊಂದಿಗೆ ಬೈಕ್ ಜಾಥಾ ಆರಂಭಗೊಂಡು ರಾಜ್ಯದ ವಿವಿಧ ಮತಕ್ಷೇತ್ರಗಳಲ್ಲಿ ಸಂಚರಿಸಿಕೊಂಡು ಯಾವ ಶಾಸಕರು ಒಳಮೀಸಲಾತಿ ಪರ ಧ್ವನಿ ಎತ್ತುವುದಿಲ್ಲವೋ ಅಂತಹ ಶಾಸಕರನ್ನು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸೋಅಸುವಂತೆ ಸಮಗ್ರ ಪರಿಶಿಷ್ಟರಿಗೆ ಜಾಗೃತಿ ಮೂಡಿಸುತ್ತಾ ನಂತರ ದಿನಾಂಕ:01/12/2022 ರಂದು ರಾಮದುರ್ಗ ಮತ ಕ್ಷೇತ್ರದ ಮೂಲಕ ಬೆಳಗಾವಿ ಜಿಲ್ಲೆಗೆ ಬೈಕ್‌ ಜಾಥಾ ಪ್ರವೇಶಗೊಂಡು, ಬೆಳಗಾವಿ ಜಿಲ್ಲೆಯ ವಿವಿಧ ಮತ ಕ್ಷೇತ್ರಗಳಲ್ಲಿ ಸಂಚರಿಸಿ ನಂತರ ದಿನಾಂಕ: 14/12/2022 ರಿಂದ ಬೆಳಗಾವಿಯ ಸುರ್ವಣ ಸೌಧದ ಎದುರು ಪರಿಶಿಷ್ಟರ ಜನಸಂಖ್ಯಾಧಾರಿತ ಒಳಮೀಸಲಾತಿ ಘೋಷಿಸುವವರೆಗೂ ಬೈಕ್‌ ಜಾಥಾವೂ ಧರಣಿ ಸತ್ಯಾಗ್ರಹವಾಗಿ ಮಾರ್ಪಾಡಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷರು ಶ್ರೀ ಪ್ರಶಾಂತ ಐಹೋಳೆ, ಕಾರ್ಯಾಧ್ಯಕ್ಷರು ಶ್ರೀ ಚಂದ್ರಕಾಂತ ಕಾದ್ರೋಳ್ಳಿ ಅಧ್ಯಕ್ಷರು ಶ್ರೀ ಮುತ್ತಣ್ಣ ಮೈ ಬೆನ್ನೂರು,ಉಪಾಧ್ಯಕ್ಷರಾದ ರಮೇಶ ಮಾದರ ರಮೇಶ ರಾಯಪ್ಪಗೋಳ ಪ್ರಧಾನ ಕಾಯ೯ದಶಿ೯ ಶ್ರೀ ಅಜೀತ ಮಾದರ ಪ್ರಧಾನ ಸಂಚಾಲಕ ಎಸ್ ಆರ್ ರಂಗನಾಥ ಎಂದು ತಿಳಿಸಿದ್ದಾರೆ.

ಗೌರವಾಧ್ಯಕ್ಷರು
ಶ್ರೀ ಪ್ರಶಾಂತ ಐಹೋಳೆ ,ಕಾಯಾ೯ಧ್ಯಕ್ಷರು
ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ,ಅಧ್ಯಕ್ಷರು
ಶ್ರೀ ಮುತ್ತಣ್ಣ ವೈ ಬೇನ್ನೂರ ,ಉಪಾಧ್ಯಕ್ಷರಾದ
ರಮೇಶ ಮಾದರ ,ಪ್ರಧಾನ ಸಂಚಾಲಕ
ಎಸ್ ಆರ್ ರಂಗನಾಥ ,ಪ್ರಧಾನ ಕಾಯ೯ದಶಿ೯
ಶ್ರೀ ಅಜೀತ ಮಾದರ ,ಉಪಾಧ್ಯಕ್ಷರು
ರಮೇಶ ರಾಯಪ್ಪಗೋಳ ,
ಸಂಚಾಲಕರು
ಶ್ರೀ ಬಸವರಾಜ ಕಾಡಾಪೂರ ,ಮಹಾಲಿಂಗ ಗಗ್ಗರಿ,ಶ್ರೀಕಾಂತ ಮಾದರ,
ತುಕಾರಾಮ ಮಾದರ,ಮಿಲಿಂದ ಐಹೋಳೆ ,ಬಸಪ್ಪ ಪಟಾತ ,ವಿನಾಯಕ ಮೈಶಾಳೆ,
ಕುಮಾರ ಐಹೋಳೆ ಅನೇಕ ಪಧಾಧಿಕಾರಿಗಳು ಉಪಸ್ಥಿತರಿದ್ದರು…

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend