ಬಿ.ಜಿ.ಕೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣ: ಒತ್ತಾಯಿಸಿ ಪ್ರತಿಭಟನೆ.!!

Listen to this article

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ ಕೆರೆ ಬಸವೇಶ್ವರ ಬಡಾವಣೆಯ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ. ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆಕ್ರೋಶಗೊಂಡ ಗ್ರಾಮಸ್ಥರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಅಂಡರ್ ನಿರ್ಮಿಸಬೇಕೆಂದು ಗ್ರಾಮಸ್ಥರು ಕಳೆದ ಹತ್ತಾರು ಪ್ರತಿಭಟನೆಗೆ ಸೌಜನ್ಯಕ್ಕಾದರೂ ಸಂಬಂಧಿಸಿದ ಅಧಿ ಕಾರಿಗಳು ಆಗಮಿಸುತ್ತಿಲ್ಲ, ಕಳೆದರೆಡು ದಿನದ ಹಿಂದೆ ನಡೆಸಿದ ಪ್ರತಿಭಟನೆ ವೇಳೆ ತಹಸೀಲ್ದಾರ್ ಆನಂದ ಮೂರ್ತಿ ಪ್ರತಿಭಟನಾಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸೋಮವಾರ ಸ್ಥಳಕ್ಕೆ ಕರೆಸುತ್ತೇವೆ. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದರು. ಅವರ ಮಾತಿನಂತೆ ಪ್ರತಿಭಟನೆಯನ್ನು ಕೈಬಿಟ್ಟಿದ್ದರು. ಸೋಮವಾರ 1 ಗಂಟೆಯಾದರೂ ಯಾರೊಬ್ಬರೂ ಬಾರದ ಅಧಿಕಾರಿಗಳ ನಡೆಗೆ ಆಕ್ರೋಶಗೊಂಡು ಗ್ರಾಮಸ್ಥರು ಹೆದ್ದಾರಿಗಿಳಿದ ಪ್ರತಿಭಟನೆ ನಡೆಸಿ, ದಿಕ್ಕಾರ ಕೂಗಿದರು. ಬಸವೇಶ್ವರನಗರದಲ್ಲಿ ಅಂಡರ್‌ಪಾಸ್‌ ನಿರ್ಮಿಸದೆ ಹೆದ್ದಾರಿ ಕಾಮಗಾರಿ ಮುಗಿಸಿದ್ದಾರೆ. ಬವೇಶ್ವರ ನಗರ ಸಂಪರ್ಕ ರಸ್ತೆಯನ್ನು ಈಗಾಗಲೆ ಬಂದ್ ಮಾಡಿದ್ದು, ಸಾರ್ವಜನಿಕರಿಗೆ ಓಡಾಟಕ್ಕೆ ತುಂಬಾ ತೊಂದರೆ ಯಾಗಿದೆ. ಶಾಲಾ ಕಾಲೇಜು ಮಕ್ಕಳು 3 ಕಿ.ಮೀ ಸುತ್ತಿ ಬರುವಂತಾಗಿದೆ. ಶಾಲಾ ಮಕ್ಕಳು ಹೆದ್ದಾರಿಕಬ್ಬಿಣದ ಸರಳುಗಳಲ್ಲಿ ನುಸುಳಿಕೊಂಡು ಶಾಲೆಗೆ ತೆರಳಬೇಕಿದೆ. ದನಕರುಗಳ ಓಡಾಟಕ್ಕೂ ಎತ್ತಿನ ಗಾಡಿ ಓಡಾಟಕ್ಕೂ ತೊಂದರೆಯಾಗಿದೆ. ಸಮಸ್ಯೆಯಿಂದಾಗಿ ಕೆಲ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವುದನ್ನೂ ನಿಲ್ಲಿಸಿದ್ದಾರೆ. ಶವ ಸಂಸ್ಕಾರಕ್ಕೂ ತೆರಳಲು ಮೂರು ಕಿ.ಮೀ. ಸುತ್ತಿ ಬರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲಿ ಡಾ.ಬಿ.ಅಂಬೇಡ್ಕರ್ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾ ಕಾರರ ಸ್ಥಳಕ್ಕೆ ಸಿಪಿಐ ಉಮೇಶನಾಯಕ, ಪಿಎಸ್‌ಐ ಬಸವರಾಜ ಆಗಮಿಸಿ ಹೆದ್ದಾರಿಯನ್ನು ತರವುಗೊಳಿಸಲು ಗ್ರಾಮಸ್ಥ ರೊಡನೆ ಚರ್ಚೆ ನಡೆಸಿದರೂ, ಫಲ ನೀಡಲಿಲ್ಲ. ಹಿಂದೆ ನಡೆಸಿದ್ದ ಪ್ರತಿಭಟನೆ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಪರಿಹರಿಸು ತೇವೆಂದು ಭರವಸೆನೀಡಿದ್ದೀರಿ. ಆದರೆ, ಯಾರೊಬ್ಬರೂ ಸ್ಥಳಕ್ಕೆ ಆಗಮಿಸಿಲ್ಲ ಸಮಸ್ಯೆ ಆಲಿಸುತ್ತಿಲ್ಲ ಯಾರನ್ನೂ ಕೇಳಬೇಕು ಎಂದು ತೀವ್ರ ಅಸಮಾಧಾನಗೊಂಡು ರಸ್ತೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿದರು. ಶಾಲಾ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಸುಡು ಬಿಸಿಲಿನ್ನು ಲೆಕ್ಕಿಸದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬರುವಿಕೆಗಾಗಿ ಕಾದು ಕುಳಿತಿದ್ದರೂ ಯಾರೊಬ್ಬರು ಆಗಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಂಬಂಧಿಸಿದ ಅಧಿಕಾರಿ ಸ್ಥಳಕ್ಕೆ ಬರದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಾಗ, ಮಂಗಳವಾರ ಸ್ಥಳಕ್ಕೆ ಬರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇವತ್ತೊಂದು ದಿನ ಸಮಯ ಕೊಡಿ ಎಂದು ಮನವಿ ಮಾಡಿದರು. ಒಂದು ದಿನದ ಗಡುವು ನೀಡಿ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದು ಮಂಗಳವಾರ ಅಧಿಕಾರಿಗಳ ನಡೆ ನೋಡಿ ಬುಧವಾರ ಎಲ್ಲರನ್ನೂ ಬಂಧಿಸಿದರೂ ಸಮಸ್ಯೆ ಪರಿಹರಿಸುವವರೆಗೆ ಹೆದ್ದಾರಿಯಲ್ಲಿ ಉರುಳು ಸೇವೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ ಬಾಬು, ಗ್ರಾಪಂ ಅಧ್ಯಕ್ಷೆ ರಾಧಮ್ಮ ನಾಗರಾಜ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಸಿಪಿಐ ಕಾರ್ಯದರ್ಶಿ ಜಾಫರ್ ಷರೀಫ್,ದಸಂಸ ಜಿಲ್ಲಾ ಸಂಚಾಲಕ ಬಿ.ಟಿ.ನಾಗಭೂಷಣ, ನಾಗನ ಗೌಡ, ಗೊಂಚಿಗಾರ್ ನವೀನ್, ಯುವ ಮುಖಂಡರಾದ ಗೋಪಿ, ಡಿ.ಪಿ ಬಸವರಾಜ ಕೊಲ್ಲಣ್ಣ ನಾಗಯ್ಯ, ಲಿಡ್ಲರ್ ಚಂದ್ರಣ್ಣನಾಗೇಂದ್ರ ಚಾರ್, ಹಿರಿಯ ಮುಖಂಡರಾದ ಓಬಣ್ಣ ಕೋಲು ಬಸಣ್ಣ ದುರುಗಪ್ಪ, ನಾಗಯ್ಯ,ಲಿಡ್ಕರ್ ಚಂದ್ರಣ್ಣ ತಿಪ್ಪೇಸ್ವಾಮಿ, ಪಿ.ಬಸವರಾಜ, ನಾಗರಾಜ ಸೇರಿ ನೂರಾರು ಯುವಕರು ಉಪಸ್ಥಿತರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend