ಬಾಗಲಕೋಟೆ : ಕಾಂಗ್ರೆಸ್ಸಿಗರಿಗೆ ವೀಣಾ ಬೆಂಬಲವೂ ಬೇಡವಾಯ್ತಾ… ???

Listen to this article

ಬಾಗಲಕೋಟೆ : ಕಾಂಗ್ರೆಸ್ಸಿಗರಿಗೆ ವೀಣಾ ಬೆಂಬಲವೂ ಬೇಡವಾಯ್ತಾ ?

ಬಾಗಲಕೋಟೆ: ಜಿಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರಿಗೆ ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ತಪ್ಪಿಸಿದ ಶಕ್ತಿಗಳಿಗೆ ಅವರ ಬೆಂಬಲವೂ ಬೇಡವಾಯ್ತಾ ಎನ್ನುವ ಯಕ್ಷ ಪ್ರಶ್ನೆ ಇದೀಗಹುಟ್ಟಿಕೊಂಡಿದೆ.

ವೀಣಾ ಕಾಶಪ್ಪನವರ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ ಪ್ರಬಲ ಆಕಾಂಕ್ಷಿಗಳಾಗಿದ್ದರು. ಷಡ್ಯಂತ್ರದಿಂದ ಟಿಕೆಟ್ ತಪ್ಪಿಸಲಾಯಿತು. ಬಳಿಕ ಅವರು ಜಿಲ್ಲೆಯ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿ ಸಭೆ, ಪ್ರತಿಭಟನೆ ನಡೆಸಿದರು. ಟಿಕೆಟ್ ಗಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ಆಯ್ತು. ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಉತ್ತರ ಬಾರದೆ ಅವರು ಸದ್ಯ ಮೌನಕ್ಕೆ ಮೊರೆ ಹೋಗಿದ್ದಾರೆ. ಮುಂದಿನ ನಡೆ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ಇಷ್ಟೆಲ್ಲ ಬೆಳವಣಿಗೆಳು‌ ನಡೆದರೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಆಗಲಿ, ಅವರ ತಂದೆ ಜವಳಿ ಸಚಿವ ಶಿವಾನಂದ ಪಾಟೀಲರು ಸೇರಿದಂತೆ ಕಾಂಗ್ರೆಸ್ಸಿನ ಯಾವ ಮುಖಂಡರೂ ಅವರನ್ನು ಭೇಟಿ ಬೆಂಬಲ ಕೋರುವ ಗೋಜಿಗೆ ಹೋಗಿಲ್ಲ.

ಸಂಯುಕ್ತಾ ಪಾಟೀಲ ಅವರು ಪ್ರತಿ ಕ್ಷೇತ್ರಕ್ಕೂ ಭೇಟಿ ಮಾಡಿ ಅಲ್ಲಿನ ಮುಖಂಡರ ಸಹಕಾರ ಕೋರುತ್ತಿದ್ದಾರೆ.‌ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.

ವೀಣಾ ಕಾಶಪ್ಪನವರನ್ನು ಭೇಟಿ ಮಾಡಿ, ಅವರ ಸಹಕಾರ ಕೋರುವ ಯಾವ ಚಿಂತನೆಯೂ ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ಕಾಣ ಬರುತ್ತಿಲ್ಲ. ಇಂತಹುದೇ ಸನ್ನಿವೇಶ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿದೆ. ಅಲ್ಲಿ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಆಗಿದ್ದ ಸಂಸದೆ ಸುಮಲತಾ ಅವರಿಗೆ ಟಿಕೆಟ್ ಮಿಸ್ ಆಗಿ, ಮೈತ್ರಿ ಪಕ್ಷದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕಿಯ ಬದ್ಧವೈರಿ ಆಗಿದ್ದ ಸುಮಲತಾ ಅವರನ್ನು ಭೇಟಿ ಮಾಡಿ, ಸಹಕಾರ ನೀಡುವಂತೆ ಕೋರಿರುವುದು ಗಮನಾರ್ಹ.

ಅಂದ ಹಾಗೆ ಕ್ಷೇತ್ರದಲ್ಲಿ ಕಾಶಪ್ಪನವರ ಬೆಂಬಲಿಗರು ಇಲ್ಲವೆಂದಲ್ಲ ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಅಪಾರ ಸಂಖ್ಯೆಯಲ್ಲಿ ಅವರು ಬೆಂಬಲಿಗರನ್ನು ಹೊಂದಿದ್ದಾರೆ. ಆದಾಗ್ಯೂ ಅವರ ಬೆಂಬಲ ಕೋರುವ ಊಸಾಬರಿಗೆ ಮುಖಂಡರು ಹೋಗದೇ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಯಾವ ಕಾರಣಕ್ಕೆ ಟಿಕೆಟ್ ತಪ್ಪಿದೆ ಎನ್ನುವ ಪ್ರಶ್ನೆಗೆ ಉತ್ತರ ಕೊಡಬೇಕಾಗುತ್ತದೆ. ಏನೆಂದು ಉತ್ತರ ಕೊಡುವುದು ಎನ್ನುವ ಗೊಂದಲದಲ್ಲಿ ಮುಖಂಡರು ಇದ್ದಂತೆ ಕಾಣಿಸುತ್ತಿದೆ.

ಏತನ್ಮಧ್ಯೆ ಮೌನಕ್ಕೆ ಶರಣಾಗಿರುವ ಕಾಶಪ್ಪನವರ ಮೌನ ಮುರಿದ ಬಳಿಕವೇ ಪರಿಸ್ಥಿತಿ ನೋಡಿಕೊಂಡು ಅವರನ್ನು ಭೇಟಿ ಮಾಡುವ ಉದ್ದೇಶ ಕೂಡ ಮುಖಂಡರದ್ದಾಗಿರಬ
ಹುದು ಎನ್ನಲಾಗುತ್ತಿದೆ. ಯಾವಾಗ ಭೇಟಿ ಮಾಡಿದರೂ ಟಿಕೆಟ್ ಕೈ ತಪ್ಪಲು ಕಾರಣ ಹೇಳಲೇ ಬೇಕಾದ ಸ್ಥಿತಿ ಇದೆ. ಏನೆಂದು ಉತ್ತರ ಕೊಡುತ್ತಾರೆ ಎನ್ನುವುದನ್ನು ಜಿಲ್ಲೆಯ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ…

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend