ರೋಗಿಗಳ ಹೃದಯ ಬಡಿತದ ಗಡಿಯಾರವನ್ನು ಜೀವಂತವಾಗಿರಿಸಿರುವ ಬಳ್ಳಾರಿಯ ವೈಧ್ಯ ಲೋಕ…!!!

Listen to this article

ಸ್ತಬ್ಧ ವಾಗುವ ದಿಕ್ಕಿನತ್ತ ಸಾಗಿದ್ದ ಅನೇಕರ ಹೃದಯ ಬಡಿತದ ಗಡಿಯಾರವನ್ನು ಜೀವಂತವಾಗಿರಿಸಿರುವ ಬಳ್ಳಾರಿಯ ವೈಧ್ಯ ಲೋಕ:- ವೈದ್ಯೋ ನಾರಾಯಣೋ ಹರಿಯೇ ಎಂಬಂತೆ ಇಡೀ ನಮ್ಮ ದೇಶ,ನಾಡು,ಜಿಲ್ಲೆ, ಹಳ್ಳಿಗಳ ಸಮೇತ ಮಾಹಾಮಾರಿ ಕೊರೋನಾ ಗೆ ನಲುಗಿರುವುದಂತೂ‌ ನಗ್ನ ಸತ್ಯ.ನಮ್ಮ ದೇಶದ ವೈಧ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ಜೀವದ ಹಂಗನ್ನು ತೊರೆದು ಕೋವಿಡ್ ರೋಗಿಗಳ ಪ್ರಾಣ ಪಕ್ಷಿಗಳನ್ನು ಹಾರಿ ಹೋಗಲು ಬಿಡದೆ ತಮ್ಮ ಪ್ರಾಣ ಹೋದರೂ ಸರಿಯೇ ಎಂದು ಹಗಲಿರುಳು ಸಲ್ಲಿಸುತ್ತಿರುವ ಸೇವೆಗೆ ಸಾವಿರಾರು ವೈಧ್ಯರನ್ನು ನಾವು ಈಗಾಗಲೇ ದೇಶದಲ್ಲಿ ಕಳೆದುಕೊಂಡಿದ್ದೇವೆ.ನಮ್ಮ ಬಳ್ಳಾರಿ ಜಿಲ್ಲೆಯಲ್ಲೂ ಅನೇಕ ವೈಧ್ಯ ರಂಗದವರನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಸಮಸ್ತ ಪತ್ರಕರ್ತರ ಪರವಾಗಿ ಮಡಿದಂತ ಆರೋಗ್ಯ ಇಲಾಖೆಯ ವೈಧ್ಯರುಗಳಿಗೆ ನಮ್ಮ ಹೃದಯ ತುಂಬಿದ ನೋವಿನ ಕಣ್ಣೀರಿನ ನಮನಗಳು.ಇಡೀ ಬಳ್ಳಾರಿ ಜಿಲ್ಲೆಯಾಧ್ಯಂತ ಹಾಗೂ ಬಳ್ಳಾರಿ ನಗರದಲ್ಲಿ ಅನೇಕ ಕೋವಿಡ್ ಕೇಂದ್ರಗಳಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ಹಿಂದಿನ ಅಗಾಧ ಶಕ್ತಿ ಎಂದರೆ ನಮ್ಮ ಶ್ರಮದಾಯಕ ವ್ಯಕ್ತಿತ್ವವಿರುವ ಬಳ್ಳಾರಿ “ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸಾರ್” ಹಾಗೂ “ಪೋಲಿಸ್ ವರಿಷ್ಠಾಧಿಕಾರಿಗಳಾದ ಸೈದುಲ್ಅದಾವತ್ ಸಾರ್ “ಎಂದರೆ ಅತಿಶಯೋಕ್ತಿ ಅಲ್ಲ. ಬಳ್ಳಾರಿ ವಿಮ್ಸ್ ಪ್ರಾಂಗಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ಕೇಂದ್ರಗಳಲ್ಲಿ ಪ್ರತಿಯೊಬ್ಬ ಕೋವಿಡ್ ರೋಗಿಗಳನ್ನ ಪ್ರೀತಿ ಮಮತೆಯ ಆರೈಕೆಯೊಂದಿಗೆ ಚಿಕಿತ್ಸೆ ನೀಡುತ್ತಿರುವ ಇಲ್ಲಿನ ವಿಮ್ಸ್ ನಿರ್ದೇಶಕರಾದ ಡಾ.ಗಂಗಾಧರಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ Dr.ಬಸರೆಡ್ಡಿ, ಮೆಡಿಕಲ್ ಸೂಪರಿಟೆಂಡೆಟ್ ರವರಾದ ಡಾ.ಅಶ್ವಿನ್ ಕುಮಾರ್ ಸಿಂಗ್,ಫೀವರ್ ಕ್ಲಿನಿಕ್ ಅಂಡ್ ಟ್ರಯಾಸ್ ನ ನೋಡೆಲ್ ಅಧಿಕಾರಿಗಳಾದ ಡಾ.ಎಂ.ಶಾಂತಿ,ನೋಡೆಲ್ ಆಫೀಸರಾದ ಡಾ.ಲೀಬಾ ಸೆಬಾಸ್ಟೀನ್,ಸೀನಿಯರ್ ಲ್ಯಾಬ್ ಟೆಕ್ನಿಷಿಯನ್ ಆಫೀಸರಾದ ಕಿರಣ್ ಯಾದವಾಡ ಹಾಗೂ ಸಮಸ್ತ ವೈಧ್ಯರ ತಂಡ,ಸುಶ್ರೂಷಕರು ಮತ್ತು ಸಮಸ್ತ ಸಿಬ್ಬಂದಿ ವರ್ಗದವರೆಲ್ಲರೂ ಜಿಲ್ಲಾಧಿಕಾರಿಗಳಾದ ಮಾಲಪಾಟಿ ಯವರ ನೇತೃತ್ವದಲ್ಲಿ ಸ್ಥಬ್ಧವಾಗುವ ದಿಕ್ಕಿನತ್ತ ಸಾಗಿದ್ದಂತಹ ಅನೇಕ ಬಳ್ಳಾರಿ ಜಿಲ್ಲೆಯ ನಿಪ್ಪಾಪಿಗಳ ಹೃದಯ ಬಡಿತದ ಗಡಿಯಾರವನ್ನು ಜೀವಂತವಾಗಿಟ್ಟಿದ್ದಲ್ಲದೆ ಮೊಗದಲ್ಲಿ ಸಂತೋಷದ ನಗುವಿನೊಂದಿಗೆ ಪ್ರತಿಯೊಬ್ಬ ಕೋವಿಡ್ ರೋಗಿಗಳ ಪಾಲಿನ ಆರಾಧಕರಾಗಿರುವ ಇವರೆಲ್ಲರಿಗೂ ಮತೊಮ್ಮೆ ಹೃದಯ ಪೂರ್ವಕ ನಮನಗಳ ಜೊತೆಗೆ ಕೊರೋನಾ ಪ್ರಂಟ್ ಲೈನ್ ವರ್ಕರ್ಸ್ ಗಳಾಗಿ ಕಲ್ಮಶವಿಲ್ಲದಂತೆ ಹಗಲಿರುಳು ತಮ್ಮ ಸೇವಾ ಮನೋಭಾವನದ ಮುಖಾಂತರ ಸಾರ್ವಜನಿಕರ ಹಾಗೂ ಸರ್ಕಾರದ ಮಧ್ಯ ಕೊಂಡಿಯಂತೆ ತಮ್ಮ ವೃತ್ತಿಯಲ್ಲಿ ತೊಡಗಿರುವ ಬಳ್ಳಾರಿ ವಾರ್ತಾಧಿಕಾರಿ ರಾಮಲಿಂಗಪ್ಪ ,ಪ್ರಜಾವಾಣಿಯ ವರದಿಗಾರರಾದ ನರಸಿಂಹಮೂರ್ತಿ,ಚಂದನ ಟಿ.ವಿ.ಯ ಕಿನ್ನೂರೇಶ್ವರ್,ಸಾಕ್ಷಿ ಪತ್ರಿಕೆಯ ಗುರುನಾಥನ್,ಬಜಾರಪ್ಪ,ವಿರೇಶ್,ಯಾಳ್ಪಿ ವಲಿಬಾಷ ,ವಾರ್ತಾ ರವಿ,ವೆಂಕಟೇಶ್ ದೇಸಾಯಿ,ಪೊಂಪನಗೌಡ, “ಎಚ್ಚರಿಕೆ ಕ್ರಾಂತಿಕಾರಿ ವಾರಪತ್ರಿಕೆ ವರದಿಗಾರರಾದ ಎಂ, ಎಲ್, ವೆಂಕಟೇಶ್” ಹಾಗೂ ಇನ್ನೀತರ ಅನೇಕ ಪತ್ರಕರ್ತರುಗಳಿಗೂ ನಮನವನ್ನು ತಿಳಿಸುತ್ತಾ.
ವಿಶೇಷವಾಗಿ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ:- ಬಳ್ಳಾರಿ ನಗರದ ಕೆಲವೆಡೆ ತಳ್ಳುವ ಗಾಡಿಗಳಲ್ಲಿ ತರಕಾರಿ ಹಾಗೂ ಹಣ್ಷು ಮಾರುವವರಿಗೆ ಕಿರುಕುಳದ ಜೊತೆಗೆ ಕೆಲ ಪೋಲಿಸರಿಂದ ತೊಂದರೆ ಯಾಗುತ್ತಿದೆ ಎಂಬ ನೋವಿನ ಕೂಗನ್ನು ತಮ್ಮ ಅಹವಾಹನೆಗಾಗಿ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯ ಕಾರ್ಯದರ್ಶಿಗಳು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ.ಮೋ:-9535290300

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend