ಮೋಕಾ: ‘ರೋಜಗಾರ್ ದಿವಸ್’ ಆಚರಣೆ…!!!

Listen to this article

ಮೋಕಾ: ‘ರೋಜಗಾರ್ ದಿವಸ್’ ಆಚರಣೆ

ಬಳ್ಳಾರಿ:ತಾಲ್ಲೂಕಿನ ಮೋಕಾ ಗ್ರಾಮ ಪಂಚಾಯತಿಯಲ್ಲಿ ಶುಕ್ರವಾರದಂದು “ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತರಿ” ಅಭಿಯಾನದಡಿ “ರೋಜಗಾರ್ ದಿವಸ್” ಆಚರಿಸಲಾಯಿತು.
ಪಂಚಾಯತಿ ಅಭಿವೃದ್ದಿ ಅಧಿಕಾರಿ ವೆಂಕಟಮ್ಮ ಅವರು ಮಾತನಾಡಿ, ರೋಜಗಾರ್ ದಿವಸದಲ್ಲಿ ನಮ್ಮ ಪಂಚಾಯತಿಯಲ್ಲಿ ಒಟ್ಟು 2452 ಉದ್ಯೋಗ ಚೀಟಿಗಳನ್ನು ವಿತರಣೆ ಮಾಡಲಾಗಿದೆ, ಅದರಲ್ಲಿ 1338 ಸಕ್ರಿಯ ಉದ್ಯೋಗ ಚೀಟಿಗಳಿದ್ದು, 2730 ಸಕ್ರಿಯವಾಗಿ ಕೂಲಿಕಾರ್ಮಿಕರು ನೋಂದಾಯಿಸಿಕೊಂಡು ಕೆಲಸಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು.


ಯಾವುದೇ ಕೂಲಿ ಕಾರ್ಮಿಕರು ಬೇರೆ ಕಡೆ ವಲಸೆ ಹೋಗಬಾರದು. ನಿಮ್ಮೂರಲ್ಲೇ ಕೂಲಿ ಕೆಲಸವನ್ನು ನೀಡಲಾಗುತ್ತಿದೆ, ಮುಂದಿನ 3 ತಿಂಗಳವರೆಗೆ ಕೆಲಸ ನೀಡಲು ಕಾಮಗಾರಿಗಳು ಲಭ್ಯವಿದೆ ಎಂದರು.
ಕೂಲಿಕಾರರು ನಮೂನೆ 6 ರಲ್ಲಿ ಮೇಟಿಗಳ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಮುಂದಿನ ಒಂದು ಎರಡು ದಿನಗಳಲ್ಲಿ ನಿಮಗೆ ಕೂಲಿ ಕೆಲಸ ನೀಡಲಾಗುವುದು. ಬೇಸಿಗೆ ಅವಧಿಯಲ್ಲಿ ನಿಮಗೆ ಕಾಮಗಾರಿ ಕೆಲಸದ ಪ್ರಮಾಣದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.30 ಮತ್ತು ಜೂನ್ ತಿಂಗಳಲ್ಲಿ ಶೇ.20 ರಿಯಾಯಿತಿ ನೀಡಲಾಗಿದೆ ಎಂದರು.
ಎಲ್ಲಾ ಮೇಟಿಗಳು ಗ್ರಾಮ ಪಂಚಾಯಿತಿಗೆ ಬಂದು ನಮೂನೆ 6 ರಲ್ಲಿ ಕೂಲಿಕಾರರ ಬೇಡಿಕೆ ಸಲ್ಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೋಕಾ ಗ್ರಾಪಂ ಕಾರ್ಯದರ್ಶಿ, ಬಿಎಫ್ಟಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಮೇಟಿಗಳು ಮತ್ತು ಊರಿನ ಕೂಲಿ ಕಾರ್ಮಿಕರು ಹಾಜರಿದ್ದರು….

ವರದಿ. ವಿರೇಶ್, ಎಚ್, ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend