ವಿಧಾನಸಭಾ ಸಾರ್ವತ್ರಿಕ ಚುನಾವಣೆ 2.77 ಲಕ್ಷ ನಗದು, 83.40 ಲೀ. ಮದ್ಯ, 0.27 ಗ್ರಾಂ. ಗಾಂಜಾ ವಶ -ಡಿಸಿ ಮಾಲಪಾಟಿ ಮಾಹಿತಿ…!!!

Listen to this article

ವಿಧಾನಸಭಾ ಸಾರ್ವತ್ರಿಕ ಚುನಾವಣೆ
2.77 ಲಕ್ಷ ನಗದು, 83.40 ಲೀ. ಮದ್ಯ, 0.27 ಗ್ರಾಂ. ಗಾಂಜಾ ವಶ
-ಡಿಸಿ ಮಾಲಪಾಟಿ ಮಾಹಿತಿ
ಬಳ್ಲಾರಿ,:
ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಫ್‍ಎಸ್‍ಟಿ, ಎಸ್‍ಎಸ್‍ಟಿ, ಪೊಲೀಸ್ ಮತ್ತು ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮುಂದುವರೆದಿದ್ದು, ಗುರುವಾರ ದಾಖಲೆಯಿಲ್ಲದ 2,77,540 ರೂ. ನಗದು ಹಣ, 53,405 ರೂ. ಮೌಲ್ಯದ 83.40 ಲೀಟರ್ ಮದ್ಯ ಹಾಗೂ ರೂ.4,500 ಮೌಲ್ಯದ 0.27 ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಗುರುವಾರದಂದು, ಎಫ್‍ಎಸ್‍ಟಿ-4 ತಂಡದ ಮುನೀರ್ ಅವರು ವಶಪಡಿಕೊಂಡ 1,27,540 ರೂ. ದಾಖಲೆ ಇಲ್ಲದ ನಗದು ಹಾಗೂ ಎಫ್‍ಎಸ್‍ಟಿ-1 ತಂಡದ ಕಾಂತರಾಜು ಅವರು ವಶಪಡಿಕೊಂಡ 1,50,000 ರೂ. ನಗದು ಮೊತ್ತವನ್ನು ಪರಿಶೀಲನೆಗಾಗಿ ಸಮಿತಿಯ ಮುಂದೆ ಹಾಜರುಪಡಿಸಿದೆ. ಒಟ್ಟು 2,27,540 ರೂ. ಮೊತ್ತವನ್ನು ನಿಯಮಾನುಸಾರ ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ಖಜಾನೆಯಲ್ಲಿ ಇರಿಸಲಾಗಿದೆ.
ಏ.16 ರಂದು ಎಫ್‍ಎಸ್‍ಟಿ-3 ತಂಡವು ವಶಪಡಿಸಿಕೊಂಡಿದ್ದ ರೂ.23 ಲಕ್ಷ ಹಣವನ್ನು ಪರಿಶೀಲನೆಗಾಗಿ ಸಮಿತಿಯ ಮುಂದೆ ಹಾಜರುಪಡಿಸಿದ್ದು, ಹಣವನ್ನು ಆದಾಯ ತೆರಿಗೆ ಇಲಾಖೆಗೆ ಪರಿಶೀಲನೆಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅನಧಿಕೃತವಾಗಿ ಸಾಗಿಸುತ್ತಿದ್ದ 53,405 ರೂ. ಮೌಲ್ಯದ 83.40 ಲೀಟರ್ ಮದ್ಯ ಹಾಗೂ ಸಾಗಣೆಗೆ ಬಳಸುತ್ತಿದ್ದ 3 ಬೈಕ್‍ಗಳನ್ನು ಅಬಕಾರಿ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ. ಸಂಡೂರು ತಾಲೂಕಿನ ಚೋರನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 0.27 ಗ್ರಾಂ. ಒಟ್ಟು 4,500 ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು 3 ಚುನಾವಣಾ ವೆಚ್ಚ ವೀಕ್ಷಕರು, 51 ಫ್ಲೈಯಿಂಗ್ ಸ್ಕ್ವಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡಗಳು ಈಗಾಗಲೇ ಕಾರ್ಯಪ್ರವೃತ್ತವಾಗಿ ತಪಾಸಣೆ ನಡೆಸುತ್ತಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ…

ವರದಿ. ಉಮೇಶ್, ಎಚ್, ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend