ರಿಪೀಟರ್ಸ್ ಶುಲ್ಕ  ಕಟ್ಟಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ವಿದ್ಯಾರ್ಥಿ ವಿರೋಧಿ – ಪರೀಕ್ಷೆ ನಡೆಸಲು ಮನವಿ…!!!

Listen to this article

ರಿಪೀಟರ್ಸ್ ಶುಲ್ಕ  ಕಟ್ಟಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ವಿದ್ಯಾರ್ಥಿ ವಿರೋಧಿ – ಪರೀಕ್ಷೆ ನಡೆಸಲು ಮನವಿ

ಇಂದು AIDSO ವತಿಯಿಂದ VSKUBಯ ರೀಪಿಟರ್ಸ್ ವಿದ್ಯಾರ್ಥಿಗಳ ಪರೀಕ್ಷೆ ನಡೆಸಬೇಕೆಂದು VSKUBಯ ಮಾನ್ಯ ಕುಲಸಚಿವರಾದ ಪಿ.ಸಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಪದವಿ ವಿದ್ಯಾರ್ಥಿಗಳ 6ನೇ ಸೆಮಿಸ್ಟರ್‌ನ ರೆಗ್ಯೂಲರ್ ಪರೀಕ್ಷೆಗಳು ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದು ನಿಮಗೆಲ್ಲಾ ತಿಳಿದಿರುವ ಸಂಗತಿ. ಅಂತಿಮ ವರ್ಷದ ವಿದ್ಯಾರ್ಥಿಗಳು 2, 4ಮತ್ತು 5ನೇ ಸೆಮಿಸ್ಟರ್‌ನಲ್ಲಿ ತೇರ್ಗಡೆಯಾಗದ ವಿಷಯಗಳ ಪರೀಕ್ಷೆಗಳನ್ನು ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ನಡೆಯುವ ಸಂದರ್ಭದಲ್ಲಿ 2,4&5ನೇ ಸೆಮಿಸ್ಟರ್‌ನ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಂಡಿದ್ದು, ಆದರೆ ಪರೀಕ್ಷೆ ಬರೆಯುವ ಅವಕಾಶವನ್ನು ಮಾತ್ರ ಮೂರು ತಿಂಗಳು ಕಳೆದರೂ ಕೂಡ ವಿವಿಯು ಪರೀಕ್ಷೆ ನಡೆಸುವುದರ ಕುರಿತು ಇದುವರಗೂ ಯಾವುದೇ ಮಾಹಿತಿ ನೀಡದೆ ಇರುವುದು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಪ್ರತಿವರ್ಷವೂ ವಿವಿಯು ರೀಪಿಟರ್ರ್ ವಿದ್ಯಾರ್ಥಿಗಳ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುತ್ತಿದೆ. ಆದರೆ ಈ ವರ್ಷ ವಿ.ಎಸ್.ಕೆ ವಿವಿಯು ಅವಕಾಶ ನೀಡದಿರುವುದು ವಿದ್ಯಾರ್ಥಿಗಳ ಭವಿಷ್ಯ ಇನ್ನು ಮುಂದೆ ಏನು ಎನ್ನುವ ಪ್ರಶ್ನೆ ಕಾಡುತ್ತಿದೆ.

ವಿದ್ಯಾರ್ಥಿಗಳು ಬಾಕಿ ಇರುವ ವಿಷಯಗಳಿಗೆ ಪರೀಕ್ಷಾ ಶುಲ್ಕ ಕಟ್ಟಿ, ಆರನೇ ಸೆಮಿಸ್ಟರ್ ಪರೀಕ್ಷೆ ನಡೆದು ಪಲಿತಾಂಶ ಪ್ರಕಟವಾಗಿದೆ. ಆದರೆ ಒಂದು ಅಥವಾ ಎರೆಡು ವಿಷಯಗಳನ್ನು ಬಾಕಿ ಇಟ್ಟುಕೊಂಡ ವಿದ್ಯಾರ್ಥಿಗಳು ಮುಂದಿನ ಇನ್ನು ಒಂದು ವರ್ಷ ಕಾಯಬೇಕೆಂದರೆ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಮೂಲ್ಯವಾದ ಒಂದು ವರ್ಷ ವ್ಯರ್ಥವಾದಂತಾಗುತ್ತದೆ. ಅಲ್ಲದೆ ಉನ್ನತ ಹಂತದ ಶಿಕ್ಷಣಕ್ಕೆ ಹಾಗೂ ಉದ್ಯೋಗ ಅವಕಾಶಕ್ಕೆ ಅಡ್ಡಗಾಲು ಹಾಕಿದಂತಾಗುತ್ತೆದೆ. ಆದ್ದರಿಂದ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಹಿತಾದೃಷ್ಟಿಯಿಂದ 2&45ನೇ ಸೆಮಿಸ್ಟರ್‌ಗಳ ರೀಪಿಟರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಎಐಡಿಎಸ್ಓ ಆಗ್ರಹಿಸುತ್ತದೆ.

ಈ ಸಂದರ್ಭದಲ್ಲಿ AIDSO ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರಾದ ಕೆ.ಈರಣ್ಣ ವಿದ್ಯಾರ್ಥಿಗಳಾದ ಹೇಮಂತ್, ಶರಣು, ಶ್ರೀನಿವಾಸ, ಕೋಡಪ್ಪ, ಸತೀಶ ಎರ್ರಿಸ್ವಾಮಿ ಮತ್ತು ಇತರರು ಭಾಗವಹಿಸಿದ್ದರು..

ವರದಿ. ಎಂ, ಎಲ್, ವೆಂಕಟೇಶ್, ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend