ಲೋಕಸಭಾ ಚುನಾವಣೆ-2024 ಮತದಾರ ಜಾಗೃತಿ ಹಾಟ್ ಏರ್ ಬಲೂನ್ ಹಾರಾಟ ಎಲ್ಲರ ಸಹಭಾಗಿತ್ವದಲ್ಲಿದೆ ಪ್ರಜಾಪ್ರಭುತ್ವ,ಮತದಾನ ಹಬ್ಬದಲಿ ಭಾಗವಹಿಸಲು ಕರೆ…!!!

Listen to this article

ಲೋಕಸಭಾ ಚುನಾವಣೆ-2024 ಮತದಾರ ಜಾಗೃತಿ
ಹಾಟ್ ಏರ್ ಬಲೂನ್ ಹಾರಾಟ
ಎಲ್ಲರ ಸಹಭಾಗಿತ್ವದಲ್ಲಿದೆ ಪ್ರಜಾಪ್ರಭುತ್ವ,ಮತದಾನ ಹಬ್ಬದಲಿ ಭಾಗವಹಿಸಲು ಕರೆ
ದಾವಣಗೆರೆ : ಪ್ರಜಾಪ್ರಭುತ್ವದಲ್ಲಿ ಎಲ್ಲರ ಸಹಭಾಗಿತ್ವ ಅವಶ್ಯಕ, ಎಲ್ಲರೂ ಲೋಕಸಭಾ ಚುನಾವಣಾ ಹಬ್ಬದಲ್ಲಿ ಭಾಗವಹಿಸುವ ಮೂಲಕ ಪ್ರಜಾತಂತ್ರ ಆರಾಧಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಕರೆ ನೀಡಿದರು.
ಅವರು ಶನಿವಾರ ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಯುವಜನ ಕ್ರೀಡಾ ಇಲಾಖೆ ಹಾಗೂ ಮಾ ಸಾಹಸ ಕ್ರೀಡಾ ಅಕಾಡೆಮಿ ಸಹಭಾಗಿತ್ವದಲ್ಲಿ ಮತದಾರರ ಜಾಗೃತಿಗೆ ಆಯೋಜಿಸಲಾದ ಹಾಟ್ ಏರ್ ಬಲೂನ್ ತರಬೇತಿಗೆ ಚಾಲನೆ ನೀಡಿ ಖುದ್ದು ಹಾರಾಟದಲ್ಲಿ ಭಾಗವಹಿಸಿ ಮಾತನಾಡಿದರು. ಲೋಕಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದೆ. ಯುವ ಮತದಾರರು ಏಪ್ರಿಲ್ 9 ರೊಳಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡುವ ಮೂಲಕ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದರು.


ಒಂದು ಮತ ಅನೇಕ ಅಶ್ವಶಕ್ತಿಗೆ ಸಮವಾಗಿದ್ದು ಯಾರು ಸಹ ಮತದಾನದಿಂದ ಹೊರಗುಳಿಯದೇ ಮತದಾನ ಮಾಡಬೇಕೆಂದ ಅವರು ಮಾರ್ಚ್ 17 ರಂದು ಹಾಟ್ ಏರ್ ಬಲೂನ್ ತರಬೇತಿ ನಡೆಯಲಿದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಮತದಾರರ ಪಟ್ಟಿಯನ್ನು ಅವಲೋಕಿಸಿ ಸೇರ್ಪಡೆ ಮಾತ್ತು ತಿದ್ದುಪಡಿ ಇದ್ದಲ್ಲಿ ಏಪ್ರಿಲ್ 9 ರೊಳಗಾಗಿ ಸಲ್ಲಿಸಬಹುದು. ಮತ್ತು ಚುನಾವಣೆಗೆ ಸಂಬಂಧಿಸಿದ ಸಹಾಯಕ್ಕಾಗಿ 1950 ಟೋಲ್‍ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಯುವಜನ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿಬಾಯಿ, ಯುವ ಪ್ರಶಸ್ತಿ ಪುರಸ್ಕತ ಮಾಗನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು…

ವರದಿ. ಪ್ರಕಾಶ್, ಆರ್, ದಾವಣಗೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend