ಡಿ.ದೇವರಾಜ ಅರಸುರವರ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು – ಕೆ. ವಿರೂಪಾಕ್ಷಪ್ಪ

Listen to this article

ಡಿ.ದೇವರಾಜ ಅರಸುರವರ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು – ಕೆ. ವಿರೂಪಾಕ್ಷಪ್ಪ

ಸಿಂಧನೂರ:ಅ.20. ದೀನ ದಲಿತರ ಹಿಂದುಳಿದ ಅಲ್ಪಸಂಖ್ಯಾತ ತುಳಿತಕ್ಕೆ ಒಳಪಟ್ಟ ಜನರ ಪಾಲಿಗೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಯಾಗುತ್ತಿದ್ದರು ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ ಹೇಳಿದರು.

ನಗರದ ಡಿ. ದೇವರಾಜ ಅರಸು ಮಾರುಕಟ್ಟೆಯಲ್ಲಿ ಇರುವ ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣ ಮಾಡಿ ಮಾತನಾಡಿದ ಅವರು ಜೀತಪದ್ದತಿ ನಿರ್ಮೂಲನೆ, ಉಳುವನೆ ಭೂಮಿಯ ಒಡೆಯ, ಶೋಷಿತ ವರ್ಗದ ಜನರಿಗೆ ರಾಜಕೀಯ ಸ್ಥಾನಮಾನ ನೀಡಿ ಸಮಾಜದ ಮುಖ್ಯ ವಾಹಿನಿಗೆ ತಂದು ಅವರ ಆಶಾಕೀರಣವಾಗಿದ್ದಾರೆ ಎಂದು ಮಾತನಾಡಿದರು.

ದೇಶದಲ್ಲಿ ಅಥವಾ ರಾಜ್ಯದಲ್ಲಿ ದಿ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರವರಂತಹ ರಾಜಕೀಯ ನಾಯಕರನ್ನು ಕಾಣುವುದು ಅಪರೂಪ. ಇವತ್ತಿನ ಕಾಲದಲ್ಲಿ ಸ್ವಾರ್ಥ ರಾಜಕಾರಣ ಮಾಡುವವರೆ ಹೆಚ್ಚು, ರಾಜಕೀಯ ನಾಯಕರು ಮಾತನಾಡುವುದೊಂದು ಮಾಡುವುದೊಂದು ಸಾಮಾಜಿಕ ನ್ಯಾಯದ ಕಾರ್ಯಕ್ರಮದಲ್ಲಿ ಇಚ್ಛಾಶಕ್ತಿ ಮುಖ್ಯ. ನಮ್ಮ ಮನಸ್ಸಿನಲ್ಲಿ ಇರುವುದನ್ನು ಮಾಡಿ ತೋರಿಸಬೇಕು. ಯಾವುದೇ ಶೋಷಿತ ಸಮೂದಾಯವನ್ನು ಬದಲಾವಣೆ ಮಾಡಲು ಅಬಿವೃದ್ಧಿ ಹೊಂದಲು ರಾಜಕೀಯ ಅಧಿಕಾರಬೇಕು ಎಂದರು.

ಹಿಂದುಳಿದ ಶೋಷಿತ ತುಳಿತಕ್ಕೆ ಒಳಗಾದ ಜನರನ್ನು ಮೇಲೆಕ್ಕೆ ಎತ್ತುವ ಮೂಲಕ ದೇವರಾಜ ಅರಸು ಸಾಮಾಜಿಕ ಕ್ರಾಂತಿ ಮಾಡಿ ಜನರ ಜೀವನದ ಬದುಕು ಕಟ್ಟುವ ಕೆಲಸವನ್ನು ಮಾಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಎಂ. ದೊಡ್ಡ ಬಸವರಾಜ ಮಾತನಾಡಿ ಡಿ.ದೇವರಾಜ ಅರಸು ರವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರಾಗಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ರವರ ಸಂವಿಧಾನದ ಆಶಯದಂತೆ ರಾಜ್ಯದಲ್ಲಿ ಜಾರಿಗೆ ತಂದರು. ಇವರು ಕರ್ನಾಟಕದ 8 ನೇ ಮುಖ್ಯಮಂತ್ರಿಯಾಗಿದ್ದರು. ಶೋಷಿತ ಸಮೂದಾಯಗಳ,ಶಿಕ್ಷಣದಿಂದ ವಂಚಿತರಾದವರಿಗೆ ಭೂಹಿನರಿಗೆ ರಕ್ಷಣೆಗೆ ನಿಂತವರು. ಮೈಸೂರು ರಾಜ್ಯ 1973 ನವೆಂಬರ್ 1 ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು ಎಂದರು.

ಅಹಿಂದ ತಾಲುಕಾ ಅಧ್ಯಕ್ಷರಾದ ಜೆ.ರಾಯಪ್ಪ ವಕೀಲರು ಹಿಂದುಳಿದ ವರ್ಗಗಳ ತಾಲುಕಾ ಅಧ್ಯಕ್ಷರಾದ ಎಂ.ದೊಡ್ಡ ಬಸವರಾಜ ನಿರುಪಾದಪ್ಪ ಗುಡಿಹಾಳ ಎಚ್.ಎನ್.ಬಡಿಗೇರ ತಹಸೀಲ್ದಾರ ಅರುಣ ದೇಸಾಯಿ ಸೇರಿದಂತೆ ಇತರರು ಮಾತನಾಡಿದರು.

ನಗರಸಭೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್, ಸದಸ್ಯರಾದ ಶೇಖರಪ್ಪ ಗಿಣೀವಾರ, ಮುಖಂಡರಾದ ಕೆ.ಬೀಮಣ್ಣ, ಕರೆಗೌಡ ಕುರಕುಂದಿ, ಬಾಬರಪಾಷ,ಮಹಾದೇವ ದುಮತಿ,ಕೆ.ಮರಿಯಪ್ಪ, ಅಮರೇಶ ಮೈಲಾರ, ವೆಂಕೋಬ ನಾಯಕ, ಖಾಜಿಮಲ್ಲಿಕ, ಲಿಂಗರಾಜ ಹೊಸಳ್ಳಿ, ವೆಂಕಣ್ಣ ತಿಪ್ಪನಹಟ್ಟಿ,ಅಮರೇಶ ಗುರಿಕಾರ, ಎಚ್.ಸೂಲಂಗಿ, ಹನುಮಂತಪ್ಪ ಪನ್ನೂರ,ಪರಮೇಶ ದಡೇಸುಗೂರ, ನರಸಪ್ಪ ಕಟ್ಟಿಮನಿ, ಮಹಿಬೂಬ ಸಾಲಗುಂದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಲಿಂಗಪ್ಪ ಸೇರಿದಂತೆ ಇತರ ಮುಖಂಡರು ಅಧಿಕಾರಿಗಳು ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ತಾಲುಕಾ ಆಡಳಿತದಿಂದ ಅರಸು ಜಯಂತಿಯನ್ನು ಆಚರಿಸಲಾಯಿತು.
ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಶಾಸಕರ ಕಾರ್ಯಲಯದಲ್ಲಿ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಶಾಸಕ ವೆಂಕಟರಾವ ನಾಡಗೌಡ ಜೆಡಿಎಸ ತಾಲುಕಾ ಅಧ್ಯಕ್ಷರಾದ ಬಸವರಾಜ ನಾಡಗೌಡ ದರ್ಮನಗೌಡ, ಹನುಮೇಶ ಕೆ. ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತೆಯರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend