ಪುಸ್ತಕ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿ:ಉಬಾಮ…!!!ಪುಸ್ತಕ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿ:ಉಬಾಮ

Listen to this article

ಪುಸ್ತಕ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿ:ಉಬಾಮ

ರಾಜ್ಯ ಕೇಂದ್ರ ಗ್ರಂಥಾಲಯವು 2021 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡ ಕೃತಿಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿಗೆ ಏಕಗವಾಕ್ಷಿ ಯೋಜನೆಯಡಿಯಲ್ಲಿ 2021-22ನೇ ಸಾಲಿಗೆ ಅರ್ಜಿ ಆಹ್ವಾನಿಸಿರುವುದು ಸಂತಸದ ಸಂಗತಿಯಾಗಿದೆ.

ಆದರೆ ತಮಗೆಲ್ಲಾ ತಿಳಿದಿರುವಂತೆ ನಾಡನ್ನು ಕಾಡಿದ ಕರೋನಾ ಹೊಡತಕ್ಕೆ ನಲುಗಿ ಹೋಗಿರುವ ಲೇಖಕರು, ಕವಿಗಳು, ಸಾಹಿತಿಗಳು, ಪ್ರಕಾಶಕರು ಯಾವುದೇ ಪ್ರೋತ್ಸಹವಿಲ್ಲದೆ ಕಂಗಾಲಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಸಂಪೂರ್ಣ ಕರ್ನಾಟಕ ಸ್ಥಬ್ಧವಾಗಿದ್ದು ಈಗಷ್ಟೆ ಲಾಕಡೌನ್ ನಿಂದ ಹೊರಬರುತ್ತಿದೆ, ಈ ನಿಟ್ಟಿನಲ್ಲಿ ಗ್ರಥಾಲಯ ಇಲಾಖೆ ಏಕಗವಾಕ್ಷಿ ಯೋಜನೆಯಡಿಯಲ್ಲಿ ಪುಸ್ತಕ ಆಯ್ಕೆ ಸಮಿಗೆ ಅರ್ಜಿ ಸಲ್ಲಿಸಲು 31-07-2021ರವರೆಗೆ ಮಾತ್ರ ಅವಕಾಶ ನೀಡಿರುತ್ತದೆ.
ಆದರೆ ಮುದ್ರಣಾಲಯಗಳು ಸರ್ಕಾರದ ಆದೇಶದ ನಂತರ ಈಗಷ್ಟೆ ಬಾಗಿಲು ತೆಗೆದು ಧೂಳು ಕೊಡವಿಕೊಂಡು ಸಿದ್ಧಗೊಳ್ಳಲು 2-3 ದಿನಗಳು ಉರುಳಿಹೋಗುತ್ತವೆ. ನಂತರ ಲೇಖಕರ ಕೃತಿಗಳ ಕರಡು ತಿದ್ದುಪಡಿಗೆ ಸಾಕಷ್ಟು ಸಮಯದ ಅವಶ್ಯಕತೆ ಇರುತ್ತದೆ, ಅಷ್ಟೇ ಅಲ್ಲಗೆ ಮುದ್ರಣಗೊಂಡ ಕೃತಿಗಳು ಲೇಖಕರ ಕೈಸೇರಿ ನೊಂದಣಿ ಮಾಡಿಸಿ, ಕೃತಿ ಸಲ್ಲಿಸಲು ಅನೇಕ ಸಾಹಿತಿಗಳು ಪ್ರಕಾಶಕರಿಗೆ ಕಡಿಮೆ ಸಮಯ ದೊರೆತು ಯಮ ಯಾತನೆ ಅನುಭವಿಸುವಂತಾಗುತ್ತದೆ.
ಅನೇಕ ಲೇಖಕರು ಹಿರಿಯರು ಮತ್ತು ವಿಶೇಷಚೇತನರು ಇರುತ್ತಾರೆ.

ಈ ದಿಸೆಯಲ್ಲಿ ಕೃತಿ ಮುದ್ರಣ,ಕಾಪಿರೈಟ್, ನೊಂದಣಿ ಮಾಡಿಸಿ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಸಮಯವನ್ನು ಪರಿಷ್ಕರಿಸಿ,ಆಗಸ್ಟ್ 31ರವರೆಗೆ ವಿಸ್ತರಿಸಬೇಕೆಂದು ನಾಡಿನ ಎಲ್ಲಾ ಸಾಹಿತಿಗಳ ಪರವಾಗಿ ವಿನಂತಿಸಿಕೊಳ್ಳುತ್ತೇನೆ.

ಉಮೇಶ್ ಬಾಬು ಮಠದ್ (ಉಬಾಮ)
ಸಾಹಿತಿ ಮತ್ತು ಸಾಮಾಜಿಕ ಚಿಂತಕರು
9844270305

ವರದಿ. ಕೆ, ಎಸ್, ವಿರೇಶ್ ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend