ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿಯ ಕಮಂಡಲಗೊಂದಿ ಗ್ರಾಮದ ಹೊರಹೊಲಯದಲ್ಲಿ ಚಿನ್ನಹಗರಿ ಹಳ್ಳದ ಸೇತುವೆ ಮೇಲಿನ ತಡಗೋಡೆಯ ಕಲ್ಲು ಕಂಬಗಳು ಉರುಳಿ ಬಿದ್ದಿವೆ…!!!

Listen to this article

ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿಯ ಕಮಂಡಲಗೊಂದಿ ಗ್ರಾಮದ ಹೊರಹೊಲಯದಲ್ಲಿ ಚಿನ್ನಹಗರಿ ಹಳ್ಳದ ಸೇತುವೆ ಮೇಲಿನ ತಡಗೋಡೆಯ ಕಲ್ಲು ಕಂಬಗಳು ಉರುಳಿ ಬಿದ್ದಿವೆ. ಈ ಸೇತುವೆ ಮೇಲಿನ ಸಂಚಾರ ವಾಹನ ಸಾವರರು, ರೈತರು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
ಈ ಹಿಂದೆ ಮುಂಗಾರು ಪೂರ್ವದಲ್ಲಿ ಬಿದ್ದ ಮಳೆಗೆ ಚಿನ್ನಹಗರಿ ಹಳ್ಳವು 4 ಬಾರಿ ತುಂಬಿ ಆರಿದ್ದಿದು, ನೀರಿನ ರಭಸಕ್ಕೆ ತಡೆಗೋಡೆಯ ಕಲ್ಲು ಕಂಭಗಳು ಉರುಳಿ ಬಿದ್ದು, ಕೊಚ್ಚಿ ಹೋಗಿದ್ದು, ಇದರಿಂದ ನಿತ್ಯ ಸಂಚಾರಿಸುವ ವಾಹನ ಸವಾರರು ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಹೆದ್ದಾರಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೇ
ಕಮಂಡಲಗೊಂದಿ, ಸಾಲೇಹಳ್ಳಿ, ಮಲ್ಲಾಪುರ, ಮಲ್ಲಾರಹಟ್ಟಿಯ ಹೋಗುವವರು ಹಾಗೂ ವಾಪ್ಪಸು ಜಗಳೂರು, ಹಿರೇಮಲ್ಲನಹೊಳೆಗೆ ಅಲ್ಲದೇ ಮಲ್ಪೆ ಮತ್ತು ಮೊಳಕಾಲ್ಮೂರು ರಾಜ್ಯ ಹೆದ್ದಾರಿಗೆ ಈ ಸೇತುವೇ ರಸ್ತೆ ಕಲ್ಪಿಸಲಿದ್ದು, ದಿನ ನಿತ್ಯ ಈ ಸೇತುವೆಯ ಮೇಲೆ ನೂರಾರು ಲಘುವಾಹನ ಬಾರಿ ವಾಹನಗಳು ಓಡಾಡುತ್ತವೆ.
ಸುತ್ತಲಿನ ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು, ಉತ್ಪನ್ನಗಳನ್ನು ಸಾಗಿಸಲು, ಕಾಲೇಜ್ ವಿದ್ಯಾರ್ಥಿಗಳು, ನೌಕರರು ಈ ಸೇತುವೆಯ ಮೇಲೆ ಹಗಲು ರಾತ್ರಿ ಸಂಚರಿಸುತ್ತಾರೆ. ಹಗಲು ಹೇಗೂ ಸಂಚಾರಿಸುವರು ಆದರೆ ರಾತ್ರಿ ಸಮಯದಲ್ಲಿ ಸಂಚಾರಿಸುವುದು ಕಷ್ಟವಾಗಿದ್ದು, ಸ್ವಲ್ಪ ಯಮಾರಿದರು ಹಳ್ಳದಲ್ಲಿ ಬಿಳುವ ಸಂಭವವ ಹೆಚ್ಚಾಗಿದೆ.
ಅಧಿಕಾರಿಗಳ ನಿರಾಸಕ್ತಿ
ಮಲ್ಪೆ ಟು ಮೊಳಕಾಲ್ಮೂರು ರಾಜ್ಯ ಹೆದ್ದಾರಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆಯ ತಡೆಗೊಡೆಯೇ ಉರುಳಿ ಬಿದ್ದು ಆರು ತಿಂಗಳ ಕಳೆದರೂ, ಸೇತುವೆಗೆ ತಡೆಗೋಡೆ ನಿರ್ಮಿಸದೇ ಸಂಬಂಧಿಸಿದ ಅಧಿಕಾರಿಗಳು ವೈಪಲ್ಯ ತೋರಿಸುವುದು ವಿಷಾಧನೀಯ ಆದ್ದರಿಂದ ಸಂಬಂಧಿಸಿದ ಇಲಾಖೆಯು ಅವಘಡಗಳು ಸಂಭವಿಸುವ ಮುನ್ನ ತುರ್ತಾಗಿ ಸೇತುವೆಗೆ ತಡೆಗೋಡೆ ನಿರ್ಮಿಸುವುದು ಅವಶ್ಯಕವಾಗಿದೆ.
ಕೋಟ್; 1
ರಾಜ್ಯ ಹೆದ್ದಾರಿಯನ್ನು ಬೇಸಿಯುವ ಈ ಸೇತುವೆ ಹತ್ತಾರು ಹಳ್ಳಿಯ ಜನರು ವಾಹನಗಳಲ್ಲಿ ಸಂಚಾರಿಸುತ್ತಾರೆ. ಆದ್ದರಿಂದ ಸೇತುವೆಗೆ ರಕ್ಷಾ ಕಂಬಗಳನ್ನು ಅಳವಡಿಸಿ ಸುರಕ್ಷಿತ ಸಂಚಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಅನುವು ಮಾಡಬೇಕಿದೆ.
ಶ್ಯಾಮ್‍ಸುಂದರ್. ಕಮಂಡಲಗೊಂದಿ
ಕೋಟ್-2
ಸೇತುವೆಗೆ ರಕ್ಷಾ ಕಂಬಗಳು( ತಡೆಗೋಡೆ) ವರ್ಷದ ಹಿಂದೆ ಹಾಕಿಲಾಗಿತ್ತು, ಚಿನ್ನಹಗರಿ ಹಳ್ಳವು ಹಲವು ಮಳೆಗೆ ನಾಲ್ಕೈದು ಬಾರಿ ತುಂಬಿ ಹರಿದರಿರುವ ಕಾರಣ, ನೀರಿನ ರಭಸಕ್ಕೆ ಉರುಳಿರವುದು ತಮ್ಮ ಗಮನಕ್ಕೆ ಬಂದಿದ್ದು, ಜಿ.ಪಂ ಅನುದಾನದಲ್ಲಿ ಅತೀ ಶಿಘ್ರವಾಗಿಯೇ ತಡೆಗೋಡೆಗಳನ್ನು ನಿರ್ಮಿಸಲಾಗುವುದು.
ಶಿವಕುಮಾರ್. ಜಿ.ಪಂ. ಸಹಾಯಕ ಕಾರ್ಯನಿರ್ವಾಕಧಿಕಾರಿ, ಜಗಳೂರು.

ವರದಿ. ಸಂದೀಪ್, ಸಿ, ಎಂ, ಹೊಳೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend