ಅಪರಿಚಿತ ಶವಪತ್ತೆ…!!!

Listen to this article

ಅಪರಿಚಿತ ಶವಪತ್ತೆ

ಚಿತ್ರದುರ್ಗ, ಜುಲೈ08:
ಚಳ್ಳಕೆರೆ ಟೌನ್ ಚಿತ್ರದುರ್ಗ ರಸ್ತೆಯ ಪಕ್ಕದಲ್ಲಿರುವ ಕಾಮಗಾರಿ ಸ್ಥಗಿತಗೊಂಡಿರುವ ಕನಕ ಸಮುದಾಯ ಭವನದಲ್ಲಿ ಜುಲೈ 07 ರಂದು ಅನಾಮಧೇಯ ವ್ಯಕ್ತಿ ಮೃತಪಟ್ಟ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತಪಟ್ಟಿರುವ ಅನಾಮಧೇಯ ವ್ಯಕ್ತಿಯ ಚಹರೆ ಇಂತಿದೆ. ಸುಮಾರು 23-28 ವರ್ಷ, ಕೋಲು ಮುಖ, ಕಪ್ಪು ಬಣ್ಣ,  ಸಾಧಾರಣ ಮೈಕಟ್ಟು, ತಲೆಯಲ್ಲಿ 2 ಇಂಚು ಕಪ್ಪು ಕೂದಲು, ಕರಚಲು ಗಡ್ಡ ಮೀಸೆ ಇರುತ್ತದೆ. ಸುಮಾರು 5 ಅಡಿ ಎತ್ತರವಿದ್ದು. ಕೇಸರಿಬಣ್ಣದ ಟಿ-ಶರ್ಟ್, ನೀಲಿ ನೈಟ್ ಪ್ಯಾಂಟ್ ಧರಿಸಿರುತ್ತಾರೆ.
ಮೃತ ಅನಾಮಧೇಯ ವ್ಯಕ್ತಿಯ ಹೆಸರು ವಿಳಾಸ ಮತ್ತು ವಾರಸುದಾರರ ಬಗ್ಗೆ ಸುಳಿವು ದೊರೆತಲ್ಲಿ ಕೂಡಲೇ  ಚಳ್ಳಕೆರೆ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚಳ್ಳಕೆರೆ ಪೊಲೀಸ್ ಠಾಣೆ 08195-250239, ಚಳ್ಳಕೆರೆ ಪೊಲೀಸ್ ನಿರೀಕ್ಷಕರು 7892537146, ಚಳ್ಳಕೆರೆ ಉಪಾಧೀಕ್ಷಕರವರ ಕಛೇರಿ 08195-251010, ಜಿಲ್ಲಾ ನಿಸ್ತಂತು ಕೇಂದ್ರ 08194-222782ಗೆ ಸಂಪರ್ಕಿಸಬಹುದು ಎಂದು ಚಳ್ಳಕೆರೆ ಪೊಲೀಸ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಜೆ.ಎಸ್.ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ.ಶಶಿಕುಮಾರ್ ಚಳ್ಳಕೆರೆ
Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend