ನಾಯಕನಹಟ್ಟಿ: ಬತ್ತಯ್ಯನಹಟ್ಟಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕುರಿಗಳು ಮೃತ.!!

Listen to this article

ವರದಿ. ಮಂಜುನಾಥ್. ಎಚ್

ಚಿತ್ರದುರ್ಗ: ನಾಯಕನಹಟ್ಟಿ / ನೇರಲಗುಂಟೆ ಸಮೀಪದ ಬತ್ತಯ್ಯನಹಟ್ಟಿ ಗ್ರಾಮದಲ್ಲಿ ಧಾರಾಕಾರವಾಗಿ ಸುರಿದ ಅಕಾಲಿಕ ಮಳೆಗೆ ಹೋಬಳಿಯ ನೇರಲಗುಂಟೆ ಸಮೀಪದ ಬತ್ತಯ್ಯನಹಟ್ಟಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ರೈತ ಮುತ್ತಯ್ಯ 150ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದು, ಗ್ರಾಮದ ಹೊರವಲಯದಲ್ಲಿ ಕುರಿಗಳನ್ನು ಮೇಯಿಸಿಕೊಂಡು ಸಂಜೆ ಮನೆ ಬಳಿಯಿದ್ದ ಕುರಿರೊಪ್ಪದಲ್ಲಿ ಕೂಡಿದ್ದಾರೆ. ಆದರೆ ಸಂಜೆಯ ವೇಳೆ ಆರಂಭವಾದ ಮಳೆ ರಾತ್ರಿಯಿಡೀ ಧಾರಾಕಾರವಾಗಿ ಸುರಿದಿದ್ದರಿಂದ ಕುರಿಗಳು ಮಳೆಯಲ್ಲಿ ತೊಯ್ದಿವೆ. ಬೆಳಿಗ್ಗೆ ರೊಪ್ಪದ ಬಳಿ ನೋಡಿದಾಗ ಮುವತ್ತಕ್ಕೂ ಹೆಚ್ಚು ಕುರಿಗಳು ಸತ್ತಿವೆ. ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಲಾಯಿತು. ರಾತ್ರಿ ಸುರಿದ ಮಳೆಗೆ ಕುರಿಗಳಿಗೆ ಶೀತವಾಗಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿವೆ’ ಎಂದು ಆಸ್ಪತ್ರೆಯ ಸಿಬ್ಬಂದಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಇನ್ನೂ ಹಲವು ಕುರಿಗಳಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಳೆಯಿಂದ ನಮ್ಮ ಕುರಿಗಳ ಜೀವ ಹೋಗಿದೆ. ಇವುಗಳಿಂದಲೇ ನಮ್ಮ ಜೀವನ ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದ ಹಾಗೇ ಹಲವು ಕುರಿಗಳು ಮೃತಪಟ್ಟಿದ್ದು, ಘಟನೆಯಿಂದ ಮನಸ್ಸಿಗೆ ನೋವುಂಟಾಗಿದೆ’ ಎಂದು ಅಳಲು ತೋಡಿಕೊಂಡರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend