ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿಗೆ ಜನಪ್ರತಿನಿಧಿಗಳ ಕೂಗು…!!!

Listen to this article

ಚಳ್ಳಕೆರೆ.
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ನಗರಸಭೆ ಅಭಿವೃದ್ಧಿ ಹಳ್ಳ ಹಿಡಿಯುತ್ತಿದ್ದು ನಾಗರೀಕರು ನಗರಸಭೆ ಆಡಳಿತ ಯಂತ್ರಕ್ಕೆ ಹಿಡಿ ಶಾಪಹಾಕುತ್ತಿದ್ದಾರೆ.
ಹೌದು ಚಳ್ಳಕೆರೆ ನಗರಸಭೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ವಿವಾದಗಳ ಹುತ್ತವಾಗಿದ್ದು, ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ತಬ್ಧವಾಗಿದೆ. ನಗರಸಭೆಯ ಮೂಲಭೂತ ಕರ್ತವ್ಯಗಳಾದ ಕಸ ವಿಲೇವಾರಿ, ಬೀದಿ ದೀಪ ಚರಂಡಿಗಳ ನಿರ್ವಹಣೆ, ಕುಡಿಯುವ ನೀರು ಪೂರೈಕೆ ಹಾಗೂ ಕುಡಿಯುವ ನೀರು ಸೋರಿಕೆ ತಡೆಗಟ್ಟುವಿಕೆ, ಚರಂಡಿಗಳ ಸ್ವತ್ಛತೆ ಅಭಿವೃದ್ಧಿ ಕಾಮಗಾರಿಗಳು ಅರೆ ಬರೆ ಹಾಗೂ ಅನುಮೋದನೆ ನೀಡಿದರೂ ಟೆಂಡರ್ ವಿಳಂಭ, ರಾಜಕಾಲುವೆ ಒತ್ತುವರಿ ತೆರವು ಅಭಿವೃದ್ಧಿ ಸೇರಿದಂತೆ ಇತ್ಯಾದಿ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಸದಸ್ಯರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳುವಂತಾಗಿದೆ.
ಜನರಿAದ ಆಯ್ಕೆಯಾದ ಸದಸ್ಯರು ಏನಾದರೂ ನಮ್ಮನ್ನು ಆಯ್ಕೆ ಮಾಡಿ ನಗರಸಭೆಗೆ ಕಳಿಸಿದ ಜನರಿಗೆ ಉತ್ತಮ ಆಡಳಿತ, ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಕನಸು ಕಟ್ಟಿಕೊಂಡು ಬಂದಿದ್ದು ಪದೇ ಪದೇ ಪೌರಾಯುಕ್ತರ ವರ್ಗಾವಣೆ, ಹಾಗೂ ನಗರಸಭೆ ಕಚೇರಿಯಲ್ಲಿ ಬಹಳ ವರ್ಷಗಳಿಂದ ಸ್ಥಳಿಯ ಸಿಬ್ಬಂದಿಗಳು ಇರುವುದರಿಂದ ಇ-ಸ್ವತ್ತು, ತೆರಿಗೆ, ಖಾತೆ ಸೇರಿದಂತೆ ಹಲವು ಸೌಲಭ್ಯಗಳನ್ನು ಜನರಿಗೆ ನೀಡಲು ಕಚೇರಿ ಸಿಬ್ಬಂದಿಗಳ ವಿಳಂಭದೋರಣೆಯಿಂದ ಸಾರ್ವಜನಿಕರುಕಚೇರಿಗೆ ಹಲೆದಾಡಿ ಹೈರಾಣಾಗಿದ್ದಾರೆ. ಕಚೇರಿಯಲ್ಲಿ ನಗರಸಭೆ ಸದಸ್ಯರಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳು ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಹಳ್ಳ ಹಿಡಿಯುವಂತಾಗಿದೆ.
ಮಳೆಗಾಲದಲ್ಲಿ ನಗರದ ಎಲ್ಲಾ ಚರಂಡಿಗಳನ್ನು ಸ್ವತ್ಛತಾ ಆಂದೋಲದ ಮಾದರಿಯಲ್ಲಿ ಒಮ್ಮೆ ಸ್ವತ್ಛಗೊಳಿಸಿದರೆ ಮಳೆ ನೀರು ಸರಾಗವಾಗಿ ಹರಿದು ಕೆರೆ ಸೇರುತ್ತದೆ. ಅಪಾಯಗಳು ಕಡಿಮೆಯಾಗುತ್ತದೆ. ಆದರೆ, ಚರಂಡಿಗಳ ಸ್ವತ್ಛತೆಯನ್ನೇ ಮರೆತ ನಗರಸಭೆಯಿಂದ ತುಂತುರು ಹನಿಗಳು ಬಿದ್ದರೂ ರಸ್ತೆಯು ಕೆಸರು ಗದ್ದೆಯಾಗಿ ಮಾರ್ಪಡುತ್ತಿದ್ದು, ಕಸ ರಸ್ತೆ ಮೇಲೆ ನಿಲ್ಲುವಂತಾಗಿದೆ.
ನಗರಸಭೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇವುಗಳನ್ನು ಬಗೆಹರಿಸುವಂತೆ ಸದಸ್ಯರು ನಗರಸಭೆ ವಾಟ್ಸ್ಆಪ್ ಗ್ರೂಪ್ ನಲ್ಲಿ ಅಸಮದಾನವನ್ನು ವಾಯ್ಸ್ ಚಾಟಿಂಗ್ ಹಾಗೂ ಸಂದೇಶಗಳ ಮೂಲಕ ಅಧಿಕಾರಿಗಳ ಗಮನ ಸೆಳೆದರೂ ಜವಾಬ್ದಾರಿಯಿಂದ ನಿಭಾಯಿಸಬೇಕಾದ ಅಧಿಕಾರಿಗಳು ಮಾತ್ರ ಉತ್ತರ ನೀಡದೆ ಮೌನವಹಿಸಿರುವುದು ಸದಸ್ಯರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.
ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡುವ ಮುನ್ನವೇ ನಗರದ ಅಭಿವೃದ್ಧಿ ಅಧಿಕಾರಿಗಳು ಮುಂದಾಗುವರೇ ಕಾದು ನೋಡ ಬೇಕಿದೆ…

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend