ಚನ್ನಗಿರಿ ತಾಲ್ಲೂಕಿನಲ್ಲಿ ತಂಬಾಕು ದಾಳಿ…!!!

Listen to this article

ಚನ್ನಗಿರಿ ತಾಲ್ಲೂಕಿನಲ್ಲಿ ತಂಬಾಕು ದಾಳಿ
ದಾವಣಗೆರೆ.
ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003’ ರ ಸೆಕ್ಷನ್-4 ರ ಅಡಿಯಲ್ಲಿ 12 ಪ್ರಕರಣ, ಸೆಕ್ಷನ್-6ಎ ಅಡಿಯಲ್ಲಿ 02 6ಬಿ ಅಡಿಯಲ್ಲಿ 02 ಪ್ರಕರಣ ಸೇರಿದಂತೆ ಒಟ್ಟು 16 ಪ್ರಕರಣ ದಾಖಲಿಸಿ 2000 ರೂ ದಂಡವನ್ನು ಸ್ಥಳದಲ್ಲಿಯೇ ಸಂಗ್ರಹಿಸಲಾಯಿತು.
ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ತನಿಖಾ ತಂಡವು ಚನ್ನಗಿರಿ ತಾಲ್ಲೂಕ್‍ನ ತಾವರಕೆರೆ ಮುಖ್ಯ ರಸ್ತೆ ಸುತ್ತ-ಮುತ್ತ ಹೋಟೆಲ್ ಅಂಗಡಿ ಮಳಿಗೆ ಬಾರ್, ರೆಸ್ಟೋರೆಂಟ್, ಪಾನ್‍ಶಾಪ್ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲಿಕರು ಧೂಮಪಾನ ನಿಷೇಧದ ನಾಮಫಲಕವನ್ನು ಕಟ್ಟು-ನಿಟ್ಟಾಗಿ ಪ್ರದರ್ಶಿಸಲು ಹಾಗೂ ಅಳವಡಿಸಲು ತಂಡ ತಾಕೀತು ಮಾಡಲಾಯಿತು.
ತಾಲ್ಲೂಕು ತನಿಖಾ ತಂಡದಲ್ಲಿ ಚನ್ನಗಿರಿ ತಾಲ್ಲೂಕು ಆರೋಗ್ಯಾಧಿಕಾರಿ, ಡಾ||ಶಿವಕುಮಾರ್.ಇ ತಾವರಕೆರೆ ಪ್ರಾ.ಆ ಕೇಂದ್ರದ ಆರೋಗ್ಯಾಧಿಕಾರಿ ಡಾ||ಹನುಮೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಲೋಕೇಶಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಯೋಗರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ರಾಜಪ್ಪ, ಸಿ.ಆರ್.ಪಿ ಮಂಜಪ್ಪ.ಎಸ್.ಜಿ, ಪಿ.ಡಿ.ಓ, ರೇಖಾ ಬಿ.ಕೆ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಲಹೆಗಾರ ಸತೀಶ ಕಲಹಾಳ್ ಸಮಾಜ ಕಾರ್ಯಕರ್ತರಾದ ದೇವರಾಜ್ ಕೆ.ಪಿ, ಹಾಗೂ ಪೊಲೀಸ್ ಸಿಬ್ಬಂದಿ ತಂಡದಲ್ಲಿದ್ದರು…

ವರದಿ. ರಾಜು. ಎಂ. ದಾವಣಗೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend