ಸೋರುತಿಹದು ಕೊಗಳಿ ಗ್ರಾಮದ, ಗ್ರಂಥಾಲಯದ ಕಟ್ಟಡ ಅಧಿಕಾರಿಗಳ ನಿರ್ಲಕ್ಷ…!!!

Listen to this article

ಕೋಗಳಿಯಲ್ಲಿ ಸೋರುತ್ತಿರುವ ಗ್ರಂಥಾಲಯ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಕೊಗಳಿ ಗ್ರಾಮದ ಸಾರ್ವಜನಿಕ‌ ಗ್ರಂಥಾಲಯವು ಹಳೆಯ ಕಟ್ಟಡದಲ್ಲಿದ್ದು, ಮಳೆಯಿಂದ ಸೋರುತ್ತಿದ್ದು, ಬಿಳುವ ಆತಂಕ ಎದುರಾಗಿದೆ ಸಂಭಂದಿಸಿದ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಹೋಬಳಿ ಕೇಂದ್ರವಾಗಿರುವ ಕೋಗಳಿ ಗ್ರಾಮಕ್ಕೆ ಸುತ್ತಲಿ ಹಳ್ಳಿಯ ಜನರು ಗ್ರಾಮವನ್ನು ಅವಲಂಬಿಸಿದ್ದು,ಶಾಲಾ-ಕಾಲೇಜಗಳ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳಿಗೆ ಹಾಗೂ ಓದುಗರು ಗ್ರಾಮದಲ್ಲಿರುವ ಸೋರುವ ಮಂಡಲ ಗ್ರಂಥಾಲಯದಲ್ಲಿಯೇ ಜೀವ ಬಿಗಿ ಹಿಡಿದು ಓದುಲು ಕುಳಿತುಕೊಳ್ಳುತ್ತಾರೆ.
ಗ್ರಂಥಾಲಯದ ಕಟ್ಟಡ ಇಪ್ಪತ್ತೈದರಿಂದ ಮೂವತ್ತು ವರ್ಷಗಳಷ್ಟು ಹಳೆಯದಾಗಿದೆ, ಮಳೆ ಬಂದಾಗ ಸೋರುವುದಷ್ಟೆಯಲ್ಲದೆ, ಗಾಳಿ, ಬೆಳಕಿನ ಸಮಸ್ಯೆಯು ಇದೆ.


ನಾಲ್ಕು ಐದು ಬಾರಿ ಗ್ರಾಮ ಪಂಚಾಯಿತಿಯವರಿಗೆ ಅರ್ಜಿ ಸಲ್ಲಿಸಿದರು ಕ್ರಮವಹಿಸಿಲ್ಲ, ಅಧಿಕಾರಿಗಳಾಗಲಿ ಜನ ಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಈ ಸಂದರ್ಭದಲ್ಲಿ ಕರವೇ ಹೋಬಳಿ ಅಧ್ಯಕ್ಷ ಕೆ ನಿಜಗುಣ, ಕರವೇ ಕಾರ್ಯದರ್ಶಿ ವಿ ರವಿ, ಪ್ರಾ.ಕೃ. ಪ. ಸ. ಸಂಘದ ಉಪಾಧ್ಯಕ್ಷ ಜಿ. ಕೊಟ್ರೇಶಪ್ಪ, ಬಿ. ನೀಲಕಂಠಪ್ಪ, ಕೆ. ಉಮೇಶ, ಎಸ್. ನೀಲಪ್ಪ, ಎನ್. ಶಿವಕುಮಾರ, ಕೆ. ವಿರೂಪಾಕ್ಷ, ಮುಂತಾದವರು ಇದ್ದರು…

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend