ಸರ್ವೋದಯದಲ್ಲಿ ಕರಡಿ ವಿಶ್ರಮಿಸುವ ವಿಶಿಷ್ಟ ಪಂಚಲಿಂಗ ಗುಹಾಲಯ ತಾಣ…!!!

Listen to this article

ಸರ್ವೋದಯದಲ್ಲಿ ಕರಡಿ ವಿಶ್ರಮಿಸುವ ವಿಶಿಷ್ಟ ಪಂಚಲಿಂಗ ಗುಹಾಲಯ ತಾಣ..

ಗುಡೇಕೋಟೆ:- ಕೂಡ್ಲಿಗಿ ತಾಲೂಕು ಕೇಂದ್ರದಿಂದ ಪೂರ್ವಕ್ಕೆ 28 ಕಿಲೋಮೀಟರ್ ದೂರ ಶ್ರಮಿಸಿದರೆ ಗುಡೇಕೋಟೆ ಹೋಬಳಿಯ ಸರ್ವೋದಯ ಶಾಲೆಯಿಂದ 2 ಕಿ .ಮೀ.ಅಂತರದಲ್ಲಿ ಕರಡಿ ಧಾಮಕ್ಕೆ ಒಳಪಟ್ಟ ಅರಣ್ಯ ಪ್ರದೇಶದಲ್ಲಿ ಈ ಪಂಚಲಿಂಗೇಶ್ವರ ಗುಹಾಲಯ ಇದೆ. ಆದಿ ಮಾನವನ ಕೆತ್ತನೆ ಎನ್ನಬಹುದಾದ ಅನೇಕ ಬಿಳಿ ವರ್ಣ ಕೆಂಪುವರ್ಣ ಚಿತ್ರಗಳು ವಿಶಾಲ ಗುಹೆಯ ಬಂಡೆಯಲ್ಲಿ ಕಂಡುಬರುತ್ತದೆ.

ಪಂಚಲಿಂಗ ಗುಹಾಲಯ

ಬಂಡೆ ಗಲ್ಲಿಗನುಗುಣವಾಗಿ ಸಾಲಾಗಿ ಐದು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದ್ದು ಕಪ್ಪು ಶಿಲೆಯಲ್ಲಿ ಕೆತ್ತಲಾಗಿದೆ. ಈ ಶಿಲ್ಪಿಗಳನ್ನಾಧರಿಸಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದ್ದು ಗುಡೇಕೋಟೆ ಪಾಳೆಗಾರರ ಕಾಲದಲ್ಲಿ ಬಹು ಮುಖ್ಯ ತಾಣವಾಗಿ ಮಾರ್ಪಟ್ಟ ಸಂಗತಿ ತಿಳಿದು ಬರುತ್ತದೆ.

*ಆಕರ್ಷಕ ಲಿಂಗಗಳು*:

ಸುಮಾರು 100 ಅಡಿಗೂ ಉದ್ದ ಕಣಶಿಲೆಯ ವಿಶಾಲ ಬಂಡೆಕಲ್ಲಿನ ಕೆಳಗೆ ಗುಹಾಂತರ ದೇವಾಲಯವಿದೆ. ಕೆಳಭಾಗದಲ್ಲಿ ಅದರ ಉದ್ದಕ್ಕೂ ಇರುವ ಸ್ಥಳಾವಕಾಶವನ್ನು ಬಳಸಿಕೊಂಡು ಪಂಚಲಿಂಗಗಳನ್ನು ಪ್ರತಿಷ್ಠಾಪಿಸಿದ್ದು ಕಂಡುಬರುತ್ತದೆ.

ಲಿಂಗದ ಎದುರಿಗೆ ಬಸವಣ್ಣ ಮೂರ್ತಿಯ ಕಂಡುಬರುತ್ತದೆ ನಿಧಿಗಳ್ಳರ ಹಾವಳಿಯಿಂದ ಸುಂದರ ಕಪ್ಪು ಶಿಲೆಯ ಆಕರ್ಷಕ ಪಂಚಲಿಂಗಗಳು ಹಾಳಾಗಿರುವುದು ಕಂಡು ಬರುತ್ತಿದೆ.

ಕರಡಿಗಳ ಆವಾಸ ಸ್ಥಾನ

ಇಲ್ಲಿನ ಕರಡಿಗಳಿಗೆ ಈ ಗುಹೆ ಹೇಳಿ ಮಾಡಿಸಿದ ಜಾಗವಾಗಿದೆ. ಗುಹಾಲಯವನ್ನು ನೋಡಲು ಆಸಕ್ತರು ಗುಂಪಾಗಿಯೇ ಹೋಗಬೇಕು ಈ ಸ್ಥಳವು ಕರಡಿ ದಾಮಕ್ಕೆ ಸೇರಿರುವುದರಿಂದ ಅಧಿಕಾರಿಗಳ ಪೂರ್ವಾನುಮತಿ ಕಡ್ಡಾಯವಾಗಿದೆ. ದಟ್ಟ ಅರಣ್ಯವಾಗಿದ್ದರಿಂದ ಮರ ಗಿಡಗಳಿಂದ ಸಾಕಷ್ಟು ಹಣ್ಣು ಹಂಪಲುಗಳು ಇಲ್ಲಿ ದೊರಕುತ್ತವೆ. ಕರಡಿಗಳಿಗೆ ಹಣ್ಣುಗಳ ಪುಷ್ಕಳ ಭೋಜನ ಸವಿದು. ಪಂಚಲಿಂಗಗಳಿರುವ ಈ ಗುಹಾಲಯಗಳಲ್ಲಿ ವಿರಮಿಸುತ್ತವೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮವನ್ನು ಪ್ರೇಕ್ಷಣೀಯ ಸ್ಥಳವಾಗಿ ಘೋಷಿಸಿ ಸಂರಕ್ಷಿಸುವ ಮೂಲಕ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕಿದೆ.ಎನ್.ಎಂ.ರವಿಕುಮಾರ್. ಸಾಹಿತಿಗಳು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷರು ಎಂ.ಬಿ.ಅಯ್ಯನಹಳ್ಳಿ.

12ನೇ ಶತಮಾನದ ಗುಹೆ ಕಲ್ಯಾಣ ಚಾಲುಕ್ಯರಿಗೆ ಸ್ಪೂರ್ತಿ ತಂದ ದೇವ ಶಿಲ್ಪ ಕಪ್ಪು ಶಿಲೆ ಪಂಚಲಿಂಗ ಅನೇಕ ಕಡೆ ಕಪ್ಪು ಶಿಲೆ ಬಳಸಿ ನಿರ್ಮಿಸಿರುವ ದೇವಾಲಯಗಳನ್ನು ಕಾಣಬಹುದಾಗಿದೆ. ಹೀಗಾಗಿ ಗುಡೇಕೋಟೆ ಐತಿಹಾಸಿಕ ಗ್ರಾಮವಾಗಿದೆ.ಓಬಯ್ಯ.ಇತಿಹಾಸ ಸಂಶೋಧಕರು.ಉಪನ್ಯಾಸಕರು.ಹಾಲಸಾಗರ ಗುಡೇಕೋಟೆ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend