ನಿನ್ನೆ ಅಂದರೆ ದಿನಾಂಕ:21/8/2022 ರಂದು ಸಂಜೆ ಕೂಡ್ಲಿಗಿಯ ಜನಪ್ರಿಯ ಹಾಗೂ ಆಧುನಿಕ ಭಗೀರಥ ಎಂದೇ ಹೆಸರಾಗಿರುವ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ರವರನ್ನು ಅವರ ಸ್ವಂತ ರಾಂಪುರದ ಪುರಾತನ ನಿವೇಶನದಲ್ಲಿ ಭೆಟ್ಟಿಯಾಗಿ,ನಿನ್ನೆಯ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮಕ್ಕೆ ಕಡೆಯ ಶ್ರಾವಣ ಮಾಸದ ಶನಿವಾರದಂದು ಅವರ ನಿವೇಶನದಲ್ಲಿ ವಿಶೇಷ ಪೂಜೆಯ ನಿಮಿತ್ತ ಹಾಜರಾಗದ ಹಿನ್ನೆಲೆಯಲ್ಲಿ ಕೂಡ್ಲಿಗಿಯ ಬಹುತೇಕ ಪತ್ರಿಕಾ ಮಿತ್ರರು ಹಾಗೂ ಒಡನಾಡಿಗಳು 5 ಕಾರುಗಳಲ್ಲಿ ಅವರ ನಿವಾಸಕ್ಕೆ ತೆರಳಿ ಅವರಿಗೆ ಸನ್ಮಾನಿಸಿದ್ದು ವಿಶೇಷತೆಯಾಗಿತ್ತು. ತದನಂತರ ನನ್ನ ಹಾಗೂ ಶಾಸಕರ ಮಧ್ಯ ಅನೇಕ ವಿಚಾರಗಳು ಕುರಿತು ಚರ್ಚೆ ಸಾಗಿದವು. ನಾ ಅವರಲ್ಲಿ ನಾಡಿನ ಸಮಸ್ತ ವರದಿಗಾರರ ಸಂಕಷ್ಟಗಳ ಕುರಿತು ಗಮನಕ್ಕೆ ತಂದಾಗ,ನನ್ನ ಕೈಯಿಂದ ಆಗುವಂತ ಸಹಾಯ ಮಾಡುವುದರ ಜೊತೆಗೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ನೆರದಂತ ಪತ್ರಕರ್ತರಿಗೆ ಧೈರ್ಯ ತುಂಬಿದರು ಜೊತೆಗೆ ಕೂಡ್ಲಿಗಿಯ ಗುಣಸಾಗರದಲ್ಲಿರುವ ಪ್ರಸಿದ್ದ ವೇಣು ಗೋಪಾಲ ದೇವಸ್ಥಾನದ ಅಭಿವೃದ್ದಿಯ ಕುರಿತು ಗಮನ ಸೆಳೆದಾಗ ಮುಂದಿನ ದಿನಗಳಲ್ಲಿ ಖಂಡಿತ ಅಭಿವೃದ್ದಿ ಮಾಡುತ್ತೇನೆ ಹಾಗೂ ಪ್ರವಾಸೋಧ್ಯಮದಿಂದ ಆಗುವ ಅನುಕೂಲತೆಗಳ ಬಗ್ಗೆ ಆನಂಗ್ ಸಿಂಗ್ ರವರ ಸಹಕಾರದಿಂದ ಆದಷ್ಟು ಅನುದಾನದಿಂದ ಪ್ರವಾಸಿ ತಾಣವಾಗುವತ್ತಾ ಗಮನ ನೀಡುತ್ತೇನೆ ಎಂದಿದ್ದಾರೆ. ಸರಳ ವ್ಯಕ್ತಿತ್ವದ ಶಾಸಕರು ನನಗೆ ಹೃತ್ಪೂರ್ವಕವಾಗಿ ಸನ್ಮಾನಿಸಿ ಪತ್ರಕರ್ತರ ಹೋರಾಟಕ್ಕೆ ನಾನೂ ನಿಮ್ಮೊಂದಿಗೆ ಇದ್ದೇನೆ ಎಂದಿರುವುದು ಅವರ ವಿಶಾಲ ಹೃದಯಕ್ಕೆ ಸಾಕ್ಷಿ ಎನ್ನುವಂತಿದೆ….
ವರದಿ. ಬಸಪ್ಪ ಬಣವಿಕಲ್ಲು (ಅಂಗಡಿ )
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030