ಕೂಡ್ಲಿಗಿ:ಕಾ.ನಿ.ಪ.ಧ್ವನಿ ಸಂಘದಿಂದ ಪತ್ರಿಕಾ ದಿನಾಚರಣೆ ಉದ್ಗಾಟಿಸಿದ ಉಜ್ಜಿನಿ ಜಗದ್ಗುರು…!!!

Listen to this article

ಕೂಡ್ಲಿಗಿ:ಕಾ.ನಿ.ಪ.ಧ್ವನಿ ಸಂಘದಿಂದ ಪತ್ರಿಕಾ ದಿನಾಚರಣೆ ಉದ್ಗಾಟಿಸಿದ ಉಜ್ಜಿನಿ ಜಗದ್ಗುರು.

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ, ಆ20ರಂದು ಕಾರ್ಯನಿರತ ಪತ್ರಕರ್ತರ ಧ್ವನಿ ಕೂಡ್ಲಿಗಿ ಸಂಘದಿಂದ ವಿಶ್ವ ಪತ್ರಿಕಾ ದಿನಾಚರಣೆ ಜರುಗಿತು. ಕಾರ್ಯಕ್ರಮವನ್ನು ಉಜ್ಜಿನಿ ಜಗದ್ಗುರು ಶ್ರೀಶ್ರೀಶ್ರೀ 1008 ಜಗದ್ಗುರು, ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಚಾನುಕೋಟಿ ಮಠದ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು,ಕೂಡ್ಲಿಗಿ ಹಿರೇಮಠ ಸಂಸ್ಥಾನದ ಶ್ರೀಪ್ರಶಾಂತ ಸಾಗರ ಸ್ವಾಮಿಗಳು, ನಂದಿಪುರ ಪುಣ್ಯ ಕ್ಷೇತ್ರದ ಶ್ರೀಮಹೇಶ್ವರ ಸ್ವಾಮೀಜಿಗಳು ಹಾಗೂ ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿಗಳಾದ ಶ್ರೀಐಮಡಿ ಶರಣಾರ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಕಾ.ನಿ.ಪ.ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು,ಮಾತನಾಡಿ ರಾಜ್ಯದ ಪತ್ರಕರ್ತರ ಏರಿಳಿತಗಳ ಬಗ್ಗೆ ವಿವರಿಸಿದರು. ಉತ್ತಮ ಬರವಣೆಗೆ ಜೊತೆಗೆ ಭಾಷೆಯ ಮೇಲೆ ಹಿಡಿತ ಹೊಂದಿರಬೇಕಿದೆ, ಹಾಗೂ ಬರವಣಿಗೆಯಲ್ಲಿ ಪ್ರತಿಯೊಬ್ಬರ ಭಾವನೆಗಳಿಗೆ ಬೆಲೆ ನೀಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರಾದ ಎಲೆ ನಾಗರಾಜ್ ರವರು ವಹಿಸಿದ್ದರು, ವೇದಿಕೆಯಲ್ಲಿ ಗುಜ್ಜಲ್ ರಘು, ಲೋಕೇಶ್ ವಿ ನಾಯಕ,ಪಪಂ ಅಧ್ಯಕ್ಷೆ ಎಮ್.ಶಾರದಾಬಾಯಿ, ಉಪಾಧ್ಯಕ್ಷೆ ಸರಸ್ವತಿ ಬಿ.ಕೆ.ರಾಘವೇಂದ್ರ, ಸ್ಥಾಯಿಸಮಿತಿ ಅಧ್ಯಕ್ಷ ಚಂದ್ರು, ಸದಸ್ಯರಾದ ಶುಕೂರ್,ಸಚಿನ್, ಚೌಡಮ್ಮ, ಊರಮ್ಮ, ಬಾಸುನಾಯ್ಕ, ಕಾವಲಿ ಶಿವಪ್ಪ, ನಾಯಕ ಸೇರಿದಂತೆ ವಿವಿದ ಸದಸ್ಯರು. ಬ್ಯಾಳಿ ವಿಜಯಕುಮಾರಗೌಡ, ಬಿ.ಭೀಮೇಶ, ಶಿವಪುರ ವೀರೇಶ, ಧ್ವನಿ ಸಂಘಟನೆ ರಾಜ್ಯ ಕಾರ್ಯದರ್ಶಿ ಎಂ.ಇಸಾಕ್ ಹಾಗೂ, ಶಾಸಕರ ಕಾರ್ಯದರ್ಶಿ ಶ್ರೀಕಾಂತ,ರಂಗಕಲಾವಿದರು, ರೈತ ಮುಖಂಡರು, ವಿವಿದ ಪತ್ರಿಕೆಗಳ ಸಂಪಾದಕರು, ಹಿರಿಯ ಪತ್ರಕರ್ತ ಮಂಜುನಾಥ, ಹಿರಿಯ ಪತ್ರಕರ್ತರು, ಸಮಾಜ ಸೇವಕರು, ಗಣ್ಯರು ವೇದಿಕೆಯಲ್ಲಿದ್ದರು. ವಿವಿದ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು, ಹಾಗೂ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಲಾವಿದರಾದ ಅಗಸಗಟ್ಟೆ ತಿಂದಪ್ಪ, ಹಾಗೂ ಬಾಣದ ನರಸಿಂಹಪ್ಪ ಸಂಗಡಿಗರು ಪ್ರಾರ್ಥಿಸಿದರು. ಪತ್ರಕರ್ತರಾದ ಮಂಜುನಾಥ ನಾಯಕ ನಿರೂಪಿಸಿದರು, ಬಿ.ಕೆ.ರಾಘವೇಂದ್ರ, ಬಸಣ್ಣ ಸ್ವಾಗತಿಸಿದರು. ಗುನ್ನಳ್ಳಿ ನಾರಾಯಣ ಪ್ರಾಸ್ತಾವಿಕ ವಾಗಿ ಮಾತನಾಡಿದರು…

ವರದಿ.ಬಸಪ್ಪ (ಅಂಗಡಿ )ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend