ಆಲಿಕಲ್ಲು ಮಳೆಗೆ ತುತ್ತಾದ ದಾಳಿಂಬೆ ಬೆಳೆ ರೈತನಗೆ ಸಂಕಷ್ಟ…!!!

Listen to this article

ಆಲಿಕಲ್ಲು ಮಳೆಗೆ ತುತ್ತಾದ ದಾಳಿಂಬೆ ಬೆಳೆ ರೈತನಗೆ ಸಂಕಷ್ಟ

ಕಾನಹೊಸಹಳ್ಳಿಕೂಡ್ಲಿಗಿ ತಾಲ್ಲೂಕು ಗುಡೇಕೋಟೆ ಹೋಬಳಿಗೆ ಸೇರಿದ ನೆಲಬೊಮ್ಮನಹಳ್ಳಿ ಗ್ರಾಮದ ಸಿದ್ದೇಶ ಎಂಬ ರೈತ ಮೂರು ಎಕರೆಗೆ ದಾಳಿಂಬೆ ಬೆಳೆ ಹಾಕಿದ್ದು, ಸಂಪೂರ್ಣ ಫಲಕ್ಕೆ ಬಂದಿದ್ದು, ಭಾನುವಾರದಂದು ಸುರಿದ ಆಲಿಕಲ್ಲು ಮಳೆಗೆ ಸುಮಾರು 90 ರಷ್ಟು ಭಾಗ ನೆಲಕ್ಕೆ ಬಿದ್ದು ಹಾಳಾಗಿ ಹೋಗಿದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಸಿದ್ದೇಶ್ ಮಾತನಾಡಿ, ಮೂರು ಎಕರೆಗೆ ದಾಳಿಂಬೆ ಗಿಡ ಹಾಕಿದ್ದು, ಜಮೀನು ಹದಮಾಡಿದ, ದಾಳಿಂಬೆ ಸಸಿ ಗಿಡ ನಾಟಿ. ಕ್ರಿಮಿನಾಶಕ, ನೀರು ಸರಬರಾಜು ಡ್ರಿಪ್ ಸೆಟ್ಟುಗಳು, ಬಾಡಿಗೆ ರೈತರ ಕೂಲಿ ಸೇರಿದಂತೆ ಸುಮಾರು 10 ಲಕ್ಷ ಖರ್ಚು ಮಾಡಿರುತ್ತೇನೆ, ಉತ್ತಮವಾಗಿ ಬೆಳೆ ಬಂದಿದ್ದು, ನನ್ನ ದುರದೃಷ್ಟ ಭಾನುವಾರದಂದು ಸುರಿದ ಆಲಿಕಲ್ಲು ಮಳೆಗೆ ನನ್ನ ದಾಳಿಂಬೆ ಬೆಳೆ ಸುಮಾರು 90ರಷ್ಟು ಭಾಗ ನೆಲಕ್ಕೆ ಬಿದ್ದು ನಾಲ್ಕರಿಂದ ಐದು ಲಕ್ಷ, ಹಾಳಾಗಿ ಹೋಗಿದೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ, ಗುಡೆಕೋಟೆ ಭಾಗದ ತೋಟಗಾರಿಕೆ ಇಲಾಖೆಯವರು ಕೂಡ ನೋಡಿ ಹೋಗಿದ್ದು, ಈ ವಿಚಾರದ ಸಂಬಂಧ ಧ್ವನಿಯೆತ್ತುತ್ತಿಲ್ಲ, ಫೋನ್ ಕರೆಯನ್ನು ಸ್ವೀಕಾರ ಮಾಡುತ್ತಿಲ್ಲ, ನಮ್ಮ ಕಷ್ಟಗಳನ್ನು ಯಾರು ಸಂಗಡ ಹೇಳಿಕೊಳ್ಳಬೇಕು ಗೊತ್ತಾಗುತ್ತಿಲ್ಲ, ಈ ಬೆಳೆಗೆ ಸಂಬಂಧಪಟ್ಟ ಬ್ಯಾಂಕಿನಲ್ಲಿ ಬೆಳೆ ಇನ್ಸೂರೆನ್ಸ್ ಹಣವನ್ನು ಕಟ್ಟಿರುತ್ತೇನೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಅತಿ ಶೀಘ್ರದಲ್ಲಿ ಮತ್ತೊಮ್ಮೆ ಪರಿಶೀಲಿಸಿ. ಹಾಳಾದ ದಾಳಿಂಬೆ ಬೆಳೆಗೆ ಸರ್ಕಾರದ ವತಿಯಿಂದ ಸಹಾಯಧನ ಮಂಜೂರು ಮಾಡಬೇಕೆಂದು. ಮಾಧ್ಯಮದ ಮೂಲಕ ನೆಲ ಬೊಮ್ಮನಹಳ್ಳಿ ಗ್ರಾಮದ ರೈತರಾದ ಸಿದ್ದೇಶ್ ಮನವಿಮಾಡಿಕೊಂಡಿದ್ದಾರೆ…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend