ಅಮಲಾಪುರ ಗ್ರಾಮದ ಗ್ರಾಮಸ್ಥರಿಂದ ಸ್ವಚ್ಛಗೊಳಿಸಿದ ಬತ್ತದೆ ಇರುವ ನೀರಿನ ಚಿಲುಮೆ( ಊಟು ಬಾವಿ)…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಬತ್ತದೆ ಇರುವ ನೀರಿನ ಚಿಲುಮೆ( ಊಟು ಬಾವಿ)
ಅಮಲಾಪುರ:- ಬಣವಿಕಲ್ಲು ಮಾರ್ಗದಿಂದ ಕೂಡ್ಲಿಗಿ ಮಾರ್ಗವಾಗಿ ಹೋಗುವ 101 ಪತ್ರೆ ಮರ ಸ್ವಾಮಿಯ ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿ ಐವತ್ತರ ಪಕ್ಕದಲ್ಲಿ ಸದಾಕಾಲ ನೀರು ಬತ್ತದ ಒಂದು ನೀರಿನ ಚಿಲುಮೆಯಿದ್ದು, ಈ ಬಾವಿಯು ಗಿಡಗಂಟೆಗಳಿಂದ ಮುಚ್ಚಿಕೊಂಡು ಹೋಗಿತ್ತು, ಕಾರಣ ಅಮಲಾಪುರ ಗ್ರಾಮದ ಶ್ರೀ ಶರಣಬಸವೇಶ್ವರ ಸಾಂಸ್ಕೃತಿಕ ಭಜನೆ ಸಂಘದ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಸೇರಿ, ಈ ಬಾವಿಯ ಸುತ್ತ ಬೆಳೆದಿರುವ ಗಿಡಮರಗಳನ್ನು ತೆರವುಗೊಳಿಸಿ, ಈ ಬಾವಿಯಲ್ಲಿ ತುಂಬಿದ್ದ ಕೆಸರನ್ನು ಬಾವಿಯಿಂದ ಮೇಲೆ ಹಾಕಿ ಸ್ವಚ್ಛತೆ ಮಾಡಿದರು. ಯಾವ ಕಾಲದಲ್ಲೂ ಕೂಡ ಈ ಬಾವಿಯಲ್ಲಿ ನೀರು ಬತ್ತದೆ ನೀರಿನ ಜಲ ಇರುವುದರಿಂದಈ ಬಾವಿಗೆ ”ಊಟುಬಾವಿ” ಏಂದು ಹೆಸರು ಕರೆಯಲಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಮಲಾಪುರ ಗ್ರಾಮದ ಮುಖಂಡ ತಿರುಮಲೇಶ್ ಈ ನೀರಿನ ಚಿಲುಮೆ ಬಗ್ಗೆ ಮಾತನಾಡಿ ಕೆಲವು ಸಾದರು ಸ್ವಾಮಿಗಳು ಈ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಬಾಯಾರಿಕೆಯಾಗಿ ನೀರು ಸಿಗದಿದ್ದಾಗ ಬೆತ್ತದ ಕೋಲನ್ನು ಅಲ್ಲಿ ನೆಟ್ಟು ನೀರಿನ ಚಿಲುಮೆಯನ್ನು ಸೃಷ್ಟಿಸಿ ನೀರು ಕುಡಿದು ಬಾಯಾರಿಸಿಕೊಂಡು ಹೋಗಿದ್ದಾರೆ ಎಂದು ಇತಿಹಾಸವಿದೆ ಎಂದು ಪೂರ್ವಜರು ಹೇಳುತ್ತಾರೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ನಂತರ ಅಮಲಾಪುರ ಗ್ರಾಮದ ಗ್ರಾಮಸ್ಥರು ದಸರಾ ಹಬ್ಬದ ಸಂದರ್ಭದಲ್ಲಿ 101 ಪತ್ರೆ ಮರದ ಸ್ವಾಮಿಯ ರಥೋತ್ಸವ ಜರುಗುವುದು ರಿಂದ ಈ ದೇವಸ್ಥಾನವು ಬಣವಿಕಲ್ಲು ಅರಣ್ಯ ಪ್ರದೇಶದಲ್ಲಿ ಇರುವುದರಿಂದ. ಎನ್ಎಚ್ 50ಕ್ಕೆ ದಾರಿ ಅಂಟಿಕೊಂಡಿದ್ದು ದೇವಸ್ಥಾನದಿಂದ ಈ ರಸ್ತೆಗೆ ಸಿಸಿ ರಸ್ತೆ ಕಲ್ಪಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಅಮಲಾಪುರ ಗ್ರಾಮಸ್ಥರು ಹಾಗೂ ಸಂಘದ ಸದಸ್ಯರು ಮನವಿ ಮಾಡಿಕೊಂಡಿರುತ್ತಾರೆ.. ಈ ಸಂದರ್ಭದಲ್ಲಿ ಅಮಲಾಪುರ ಮುಖಂಡ ತಿರುಮಲೀಶ್, ಕೆ ಪೊನ್ನಪ್ಪ, ಈ ರಾಜಪ್ಪ, ರಮೇಶ, ಕರಿಬಸಪ್ಪ , ಎಂ ಚಂದ್ರು, ಎಂ ಬಸವರಾಜ, ಟಿ ಅಂಜಿನಪ್ಪ, ಟಿ ನರಸಪ್ಪ, ಶಶಿಕುಮಾರ, ಎರ್ರಿಸ್ವಾಮಿ ಹಾಗೂ ಅಮಲಾಪುರ ಗ್ರಾಮದ ಶ್ರೀ ಶರಣಬಸವೇಶ್ವರ ಸಾಂಸ್ಕೃತಿಕ ಬಜನಾ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend