ಗ್ರಾಮ ದೇವತೆ ಶ್ರೀ ಮಲಿಯಮ್ಮ ದೇವಿಯ ಜಾತ್ರೋತ್ಸವವನ್ನು ಸರಳವಾಗಿ ಆಚರಿಸಿದ ಜಮ್ಮೋಬನಹಳ್ಳಿ ಗ್ರಾಮಸ್ಥರು…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ಗ್ರಾಮ ದೇವತೆ ಶ್ರೀ ಮಲಿಯಮ್ಮ ದೇವಿಯ ಜಾತ್ರೋತ್ಸವವನ್ನು ಸರಳವಾಗಿ ಆಚರಿಸಿದ ಜಮ್ಮೋಬನಹಳ್ಳಿ ಗ್ರಾಮಸ್ಥರು.
ಜುಮ್ಮೋಬನಹಳ್ಳಿ,:- ದಿನಾಂಕ 18 ರಿಂದ 19 ಮತ್ತು 20ನೇ ದಿನಾಂಕದಂದು. ಜುಮ್ಮೋಬನಹಳ್ಳಿ ಗ್ರಾಮದೇವತೆ ಶ್ರೀ ಮಲಿಯಮ್ಮ ದೇವಿಯ ಜಾತ್ರೋತ್ಸವ ಸರಳವಾಗಿ ಜರಗಿತು. ಕೋವಿಡ್-19 ರೂಪಾಂತರ ವೈರಸ್ ಮೂರನೇ ಅಲೆ ವ್ಯಾಪಕವಾಗಿ ಹರಡುವುದರಿಂದ ಸರ್ಕಾರದ ಆದೇಶದಂತೆ ಕರೋನಾ ನಿಯಮ ಪಾಲಿಸಿ ಅಲ್ಪಪ್ರಮಾಣದ ಭಕ್ತರ ಸಮೂಹದಲ್ಲಿ, ದೇವತೆಗೆ ಪೂಜೆ ಪುರಸ್ಕಾರ ಮಾಡಲಾಯಿತು. ಜೂಮ್ಮೊಬನಹಳ್ಳಿ ಗ್ರಾಮದ ಹಾಗೂ ಮ್ಯಾಸರಹಟ್ಟಿ ಗ್ರಾಮದ ಭಕ್ತಾದಿಗಳು ಅತಿ ಹೆಚ್ಚು ಜನಸಂದಣಿ ಸೇರಿದಂತೆ ದೇವತೆಗೆ ಪೂಜೆ ಸಲ್ಲಿಸಿದರು. ಕೊನೆಯ ದಿನವಾದ ಇಂದು ಶ್ರೀ ಮಲಿಯಮ್ಮ ದೇವಿಯ ಪಟದ ಹಾರಾಜು ಹಾಗೂ ಹೂವಿನ ಹಾರಗಳನ್ನು ದೇವಸ್ಥಾನದ ದೈವಸ್ಥರು ಹಾಗೂ ಮ್ಯಾಸರಹಟ್ಟಿ ಜಮ್ಮೋಬನಹಳ್ಳಿ ಗ್ರಾಮದ ಗ್ರಾಮಸ್ಥರ ಸಮ್ಮುಖದಲ್ಲಿ ದೇವಿಯ ಪಟದ ಹಾರ ಹಾಗೂ ಹೂವಿನ ಹಾರಗಳನ್ನು ಸವಾಲಿನಲ್ಲಿ ಭಕ್ತಾದಿಗಳು ಸ್ವೀಕರಿಸಿದರು.


ದೇವಿಯ ಪಟವನ್ನು ನಡುಗಡ್ಡೆ ಬೋರಯ್ಯ ತಂದೆ ನಡುಗಡ್ಡೆ ಚಿನ್ನಯ್ಯ ಇವರು ಒಂದು ಲಕ್ಷ ರೂಪಾಯಿಗಳಿಗೆ ದೇವಿಯ ಪಟವನ್ನು ಸವಾಲಿನಲ್ಲಿ. ಸ್ವೀಕರಿಸಿದರು. ನಂತರ ಪ್ರಥಮ ಹೂವಿನ ಹಾರವನ್ನು ಶ್ರೀಮತಿ ಲಕ್ಷ್ಮೀದೇವಿ ದಿವಂಗತ ಕೆ ಚಂದ್ರಪ್ಪ (coi) ಓಬಳಾಪುರ ಇವರು 75 ಸಾವಿರ ರೂಪಾಯಿಗಳಿಗೆ ಸವಾಲಿನಲ್ಲಿ ಸ್ವೀಕಾರ ಮಾಡಿದರು.. 15000 ರೂಪಾಯಿಗಳಿಗೆ ಸಿ ಬಸವರಾಜ ವಕೀಲರು. ಎಂಟು ಸಾವಿರ ರೂಪಾಯಿಗಳಿಗೆ ಪಾಪಣ್ಣ ನವರು. ಹಾಗು ಇನ್ನು ಹಲವಾರು ಭಕ್ತಾದಿಗಳು ಈ ಸವಾಲಿನಲ್ಲಿ ಹೂವಿನ ಹಾರಗಳನ್ನು ಸ್ವೀಕರಿಸಿದರು. ನಂತರ ಶ್ರೀ ಮಲಿಯಮ್ಮ ದೇವಿಯ ಗುಡಿ ತುಂಬ ಕಾರ್ಯವನ್ನು ನಡೆಸಲಾಯಿತು. ಈ ದೇವತೆಯ ಜಾತ್ರಾಮಹೋತ್ಸವವನ್ನು ಜುಮ್ಮೋಬನಹಳ್ಳಿ ಗ್ರಾಮದ ಹಾಗೂ ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿಯ ಯಜಮಾನರು ಮುಖಂಡರು ಸಾರ್ವಜನಿಕರು ಸೇರಿ ಶಾಂತರೀತಿಯಿಂದ ಸರಳವಾಗಿ ಆಚರಿಸಿದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend