ಸಿದ್ದಾಪುರ ಗ್ರಾಮದ ಶ್ರೀ ಮಲಿಯಮ್ಮ ದೇವಿಯ ಜಾತ್ರೆ ಪ್ರಯುಕ್ತ ಶಾಂತಿ ಸಭೆ…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಗುಂಡುಮುಣುಗು. ಗ್ರಾಮ ಪಂಚಾಯಿತಿ.
ಸಿದ್ದಾಪುರ ಗ್ರಾಮದ ಶ್ರೀ ಮಲಿಯಮ್ಮ ದೇವಿಯ ಜಾತ್ರೆ ಪ್ರಯುಕ್ತ ಶಾಂತಿ ಸಭೆ.
ಗುಂಡುಮುಣುಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿದ್ದಾಪುರ ಗ್ರಾಮದಲ್ಲಿ. ಗ್ರಾಮದ ಮಲಿಯಮ್ಮ ದೇವತೆಯ ಜಾತ್ರೆ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ಚಾಮನೂರ ರವರ ನೇತೃತ್ವದಲ್ಲಿ, ಸಿದ್ದಾಪುರ ಗ್ರಾಮದ ಸಮಸ್ತ ಗ್ರಾಮಸ್ಥರು ಮುಖಂಡರು ದೇವಸ್ಥಾನದ ದೈವಸ್ಥರ ಸಮ್ಮುಖದಲ್ಲಿ ಗುರುವಾರ ಸಂಜೆಸಭೆ ಜರಗಿತು.ದಿನಾಂಕ 18-19 ರಂದು ಗ್ರಾಮದ ಶ್ರೀ ಮಲಿಯಮ್ಮ ದೇವತೆಯ ಜಾತ್ರೆ ಪ್ರಯುಕ್ತ ಶಾಂತಿಸಭೆ ಕುರಿತು ಮಾತನಾಡಿ. ರಾಜ್ಯದಲ್ಲಿ ವ್ಯಾಪಕವಾಗಿ ಕೋವಿಡ್ ರೂಪಾಂತರ ವೈರಸ್ ಹರಡುವುದರಿಂದ, ಯಾವುದೇ ಜಾತ್ರೆ, ಸಮಾರಂಭ, ಇನ್ನೂ ಜನಸಂದಣಿ ಸೇರುವ ಕಾರ್ಯಗಳಿಗೆ ಅವಕಾಶ ಇರುವುದಿಲ್ಲ ಎಂದು ಪಿಎಸ್ಐ ತಿಮ್ಮಣ್ಣ ಚಾಮನೂರು ರವರು ಶಾಂತಿ ಸಭೆ ಕುರಿತು ಮಾತನಾಡಿದರು. ನಂತರ ಊರಿನ ಮುಖಂಡರು ಮಾತನಾಡಿ ಪ್ರತಿವರ್ಷ ಗ್ರಾಮದೇವತೆಯನ್ನು ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ, ನಮಗೆ ಸರಳ ರೀತಿಯಲ್ಲಾದರೂ ದೇವತೆಯ ಕಾರ್ಯವನ್ನು ಮಾಡಲು ಅನುಮತಿ ಮಾಡಿಕೊಡಿರಿ ಎಂದು ಹೊಸಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಗಳನ್ನು ಸಿದ್ದಾಪುರ ಗ್ರಾಮಸ್ಥರು ಕೇಳಿದರು. ನಂತರ ಗ್ರಾಮಸ್ಥರ ಮನವಿಗೆ, ಸರ್ಕಾರ ಆದೇಶ ಮಾಡಿದಂತೆ, ಕೋವಿಡ್ ಹಿನ್ನೆಲೆಯಲ್ಲಿ, ಕೆಲವು ನಿಬಂಧನೆಗಳನ್ನು ಸರ್ಕಾರ ಆದೇಶ ಮಾಡಿದೆ, ಈ ಆದೇಶದ ಪ್ರಕಾರ, ಜನಸಂದಣಿ ಸೇರಿದಂತೆ, ಕಡ್ಡಾಯವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಂಡು, ಪ್ರತಿಯೊಬ್ಬರೂ ಸ್ಯಾನಿಟೈಸರ್ ಬಳಕೆ ಮಾಡಬೇಕೆಂದು ಹೇಳುತ್ತಾ, ಗ್ರಾಮದಲ್ಲಿ ಯಾವುದೇ ಮೆರವಣಿಗೆ ಜಾತ್ರೆ ಸಮಾನು ಅಂಗಡಿಗಳಿಗೆ ಹಾಗೂ ಮೆರವಣಿಗೆ ನಾಟಕ ಪ್ರದರ್ಶನ, ಬೇರೆ ಗ್ರಾಮಗಳಿಂದ ಜನರನ್ನು ಸಹ ಆಹ್ವಾನಿಸುವುದು, ಮಾಡುವಂತಿಲ್ಲ, ಎಂದು ಜನರಿಗೆ ತಿಳಿಹೇಳಿ ನಂತರ ದೇವಸ್ಥಾನದ ಕಾರ್ಯಗಳಿಗೆ ಭಾಗವಹಿಸುವರು ಕಡ್ಡಾಯವಾಗಿ ಕೋವಿಡ್ 19 ರ ಕೋವಿಡ್ ಲಸಿಕೆ “2”ಡೋಸ್ ಪಡೆದಿರಬೇಕು, ಹತ್ತು ಜನ ಸದಸ್ಯರಿಗಿಂತ ಜಾಸ್ತಿ ಜನ ಸೇರದಂತೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಬೇಕು, ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಮಾನ್ಯ ಪಿಎಸ್ಐ ತಿಮ್ಮಣ್ಣ ಚಾಮನೂರ್ ಅವರು ಮಲಿಯಮ್ಮ ದೇವಿಯ ಜಾತ್ರಾ ಪ್ರಯುಕ್ತ ಏರ್ಪಡಿಸಿದ ಶಾಂತಿ ಸಭೆ ಕುರಿತು. ಸಾರ್ವಜನಿಕರಲ್ಲಿ ಮುಖಂಡರಲ್ಲಿ, ಕರೋನಾ ನಿಯಮ ಪಾಲಿಸಿ ಕರೋನವೈರಸ್ ಓಡಿಸಿ, ಎಂದು, ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು. ಈ ಕಾರ್ಯಕ್ರಮದಲ್ಲಿ, ಸಿದ್ದಾಪುರ ಗ್ರಾಮದ ಮುಖಂಡರು, ಗೊಲ್ಲರಹಟ್ಟಿ ಗ್ರಾಮದ ಮುಖಂಡರು, ದೈವಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು, ಯಜಮಾನರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend