ಸಾವಿತ್ರಿ ಭಾಪುಲೆ ಜಗತ್ತಿಗೆ ಮಾದರಿ,ಜಗತ್ತಿಗೆ ಜ್ಞಾನ ಜ್ಯೋತಿ-ಶ್ರೀಮತಿ ಪದ್ಮಲತಾ…!!!

Listen to this article

ಸಾವಿತ್ರಿ ಭಾಪುಲೆ ಜಗತ್ತಿಗೆ ಮಾದರಿ,ಜಗತ್ತಿಗೆ ಜ್ಞಾನ ಜ್ಯೋತಿ-ಶ್ರೀಮತಿ ಪದ್ಮಲತಾ

– ವಿಜಯನಗರ ಜಿಲ್ಲೆ ಕೂಡ್ಲಿಗಿ, “ಸ್ವಾತಂತ್ರ್ಯ ಪೂರ್ವ, ಕಟ್ಟಾ ಸಂಪ್ರದಾಯಿಕ ಭಾರತದಲ್ಲಿ ಮಹಿಳೆಯರ ಶಿಕ್ಷಣ ಮತ್ತು ಏಳ್ಗೆಗಾಗಿ ದುಡಿದು, ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಮಿಂಚಿದ ಮಹಾ ತಾರೆ ಎಂದರೆ ಮಾತೆ ಸಾವಿತ್ರಿ ಬಾಯಿಫುಲೆ. ಆಕೆಯ ಜೀವನ-ಸಾಧನೆಗಳು ಯುವ ಭಾರತಕ್ಕೆ ಮತ್ತು ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಬೇಕಿದೆ”.ಅವರು ಜಗತ್ತಿನ ಮಹಿಳೆಯರೆಲ್ಲರಿಗೂ ಮಾದರಿ ಹಾಗೂ ಜಗತ್ತಿಗೆ ಜ್ಞಾನ ಜ್ಯೋತಿಯಾಗಿದ್ದಾರೆ ಎಂದು ಕ.ರಾ.ಪ್ರಾ.ಶಾ‌‌.ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಪದ್ಮಲತಾ ಜಿ ಅವರು ಮಾತನಾಡಿದರು.
ಕೂಡ್ಲಿಗಿ ಪಟ್ಟಣದಲ್ಲಿ ‘ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲೂಕು ಘಟಕ ಕೂಡ್ಲಿಗ’ ವತಿಯಿಂದ ಪಟ್ಟಣದ ಶ್ರೀವಾಲ್ಮೀಕಿ ಮಹಾ ಸಮುದಾಯಭವನದಲ್ಲಿ. “ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ” ಕಾರ್ಯಕ್ರಮದಲ್ಲಿ ನುಡಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಶಿವಾನಂದ.ಬಿ.ಬಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಮಹಿಳೆಯರನ್ನು ಕೋಣೆಯೊಳಗೆ ಬಂಧಿಸಿಟ್ಟಿದ್ದ ಭಾರತದ ಸಾಂಪ್ರಾದಯಿಕ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ, ತಮ್ಮ ಮೇಲೆ ಅಮಾನುಷವಾಗಿ ಸಗಣಿ ಎರಚುವಂತಹ ದುಸ್ಥಿತಿಯಲ್ಲಿ. ಅನೇಕ ಅವಮಾನವೀಯ- ಹಿಂಸೆಗಳ ನಡುವೆಯೂ ಸಹ,ಛಲ ಬಿಡದೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಜೀವಿತಾವಧಿಯನ್ನೇ ತ್ಯಾಗ ‌ಮಾಡಿದ ಮಹಾ ಮಾತೆ ಸಾವಿತ್ರಿ ಬಾಯಿಫುಲೆರವರಾಗಿದ್ದಾರೆ. ಶಿಕ್ಷಕರ ಸಂಘವು‌ ಸಾವಿತ್ರಿ ಬಾಯಿಫುಲೆ ಅವರ ಹೆಸರಿನಲ್ಲಿ,ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ತಹಶಿಲ್ದಾರರಾದ ಟಿ. ಜಗದೀಶ್ , “ಪ್ರಸ್ತುತ ದಿನಗಳಲ್ಲಿ ಸಾವಿತ್ರಿ ಬಾಯಿ ಫುಲೆರವರಂತಹ ಆದರ್ಶ ಶಿಕ್ಷಕರು ಈ ಸಮಾಜಕ್ಕೆ ಅಗತ್ಯವಿದೆ. ಅವರ ಆದರ್ಶಗಳನ್ನು ಶಿಕ್ಷಕರು ಪಾಲಿಸಬೇಕಿದೆ. ಮಾತೆಯ ಹೆಸರಿನಲ್ಲಿ ಪ್ರಶಸ್ತಿ,ದಿನದರ್ಶಿಕೆ, ಶಾಲಾ ಪಂಚಾಂಗ,ಪುಸ್ತಕ ಲೋಕಾರ್ಪಣೆ ಮಾಡುತ್ತಿರುವುದು ಶ್ಲಾಘನೀಯ” ಎಂದರು.
ಶಿಕ್ಷಕರ ಸಂಘದ ದಿನದರ್ಶಿಕೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ,ಜಿ. ಎಂ.ಬಸಣ್ಣ‌ ಬಿಡುಗಡೆ ಮಾತನಾಡಿದರು. ಕೂಡ್ಲಿಗಿ ಪಟ್ಟಣದ ಶಿಕ್ಷಕ ಲೇಖಕ ಶೇಕ್ಷಾವಲಿ ಮಣಿಗಾರ್ ಅವರು ರಚಿಸಿದ “ಹಥೇಲಿ ಕಥಾಸಂಕಲನ” ಪುಸ್ತಕವನ್ನು, ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ ನಾಯ್ಕ್ ಲೋಕಾರ್ಪಣೆ ಮಾಡಿದರು. ಸಂಘದ ಲೆಕ್ಕ-ಪತ್ರಗಳನ್ನು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವರಾಜ್.ಪಿ ಬಿಡುಗಡೆಗೊಳಿಸಿದರು‌. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು “ವಿಶ್ವ ಮಾನವ ದಿನ” ದ ಅಂಗವಾಗಿ ಏರ್ಪಡಿಸಿದ್ದ,ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗೌಡ್ರ ಕೊಟ್ರೇಶ್ ವಹಿಸಿಕೊಂಡಿದ್ದರು,ಜಿಲ್ಲಾ ಉಪಾಧ್ಯಕ್ಷೆ ಗೀತಾ ವಿ, ಕ್ಷೇತ್ರ ಸಮನ್ವಯಾಧಿಕಾರಿ ಜಮೀಲ್ ಅಹ್ಮದ್.ಎಂ.ಆರ್,
ಮಧ್ಯಾಹ್ನ ಬಿಸಿ ಊಟದ ಸಹಾಯಕ ನಿರ್ದೇಶಕರಾದ ಲಕ್ಷ್ಮಣ ಸಿಂಗ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕ ರೇವಣಸಿದ್ದಯ್ಯ.ಯು. ಎಂ,
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೀರೇಶ್, ಕೊಟ್ಟೂರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಅಣಜಿ ಸಿದ್ಲಿಂಗಪ್ಪ,ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ. ಆರ್.ವೆಂಕಟೇಶ್, ಹಾಗೂ ಕೂಡ್ಲಿಗಿ ಶಿಕ್ಷಕರ ಸಂಘದ ಉಪಾಧ್ಯಕ್ಷ ಹನುಮಂತಪ್ಪ.ಹೆಚ್.ಜಿ. ಇಂದಿರಾ ಹೆಚ್,ಕಾರ್ಯದರ್ಶಿ ಶೇಖರಯ್ಯ ಟಿ ಎಚ್ಎಂ,ಕೋಶಾಧ್ಯಕ್ಷ ನಂದೀಶ್ವರ ನಾಯಕ್. ಎಲ್, ಸಹ ಕಾರ್ಯದರ್ಶಿ ಬಿ.ಜಿ.ಪಾಟೀಲ್, ಗೀತಾ ಭಾಪ್ರಿ,
ಸಂಘಟನಾ ಕಾರ್ಯದರ್ಶಿ ಶಾಂತಕುಮಾರಿ.ಎಸ್, ಸದಸ್ಯರಾದ ಪಿ.ವಿ.ಕೊತ್ಲಪ್ಪ, ಕೆ.ಜಿನಾಬಿ, ಎರಿಸ್ವಾಮಿ.ಕೆ, ಪುಟ್ಟಪ್ಪ.ಎನ್, ಗೋಣಿಬಸಪ್ಪ.ಕೆ,ರಾಜ್ಯ ಪಿಂಚಣಿ ನೌಕರರ ರಾಜ್ಯ ಸಂಘಟನಾ ಕಾರ್ಯದರ್ಶಿ ದಯಾನಂದ.ಎಲ್, ಕ.ಜ್ಞಾ.ವಿ.ಸ.ಯ ನ ಕಾರ್ಯದರ್ಶಿ ಕುಮಾರಸ್ವಾಮಿ ಮತ್ತು ಪದಾಧಿಕಾರಿಗಳು ಹಾಗೂ ನೂರಾರು ಶಿಕ್ಷಕರು ಮತ್ತು ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend