ಸಂವಿಧಾನದ ಸದುಪಯೋಗವಾಗಲಿ-ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ…!!!

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಸಂವಿಧಾನದ ಸದುಪಯೋಗವಾಗಲಿ-ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಯಲ್ಲಿ, ತಾಲೂಕು ಕಾನೂನು ಸೇವೆಗಳ ಪ್ರ‍ಾಧಿಕಾರ ಹಾಗೂ ತಾಲೂಕು ವಕೀಲರ ಸಂಘ ಹಾಗೂ ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಸಹಯೋಗದಲ್ಲಿ.”ವಿದ್ಯಾರ್ಥಿಗಳಿಗೆ ಕಾನೂನು ಅರಿವು” ನೆರವು ಕಾರ್ಯಕ್ರಮ ಫೆ 23ರಂದು ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆ ಮಾತನಾಡಿದರು, ಪ್ರಪಂಚದಲ್ಲಿಯೇ ಭಾರತ ಸಂವಿಧಾನ ಅತ್ಯುನ್ನತವಾದದ್ದಾಗಿದೆ.ಅದರ ಸದುಪಯೋಗ ಪಡೆಸಿಕೊಳ್ಳಬೇಕೆ ಹೊರತು ದುರುಪಯೋಗ ಪಡಿಸಿಕೊಳ್ಳಬಾರದು,ಆರ್ಥಿಕ ಸ್ಥಿತಿಗತಿಯ ಆಧಾರಿಸಿ ಮೀಸಲಾತಿ ನೀಡಿದ್ದಲ್ಲಿ ಸಮಾನತೆ ಸರ್ವಸಮಾನತೆ ಸಾಧ್ಯ. ವಿದ್ಯಾರ್ಥಿಗಳು ಪದವಿ ಪಡೆಯುವುದರೊಂದಿಗೆ ಕಾನೂನು ಅರಿವು ಹೊಂದಬೇಕಿದೆ.ಯುವ ಪೀಳಿಗೆ ಕರ್ಥವ್ಯಗಳನ್ನು ಹಾಗೂ ಮೂಲಭೂತ ಹಕ್ಕುಗಳ ಕುರಿತು ತಿಳುವಳಿಕೆ ಹೊಂದಲೇಬೇಕಿದೆ ಎಂದರು.ಹೋರಾಟಗಾರ ಕಾರ್ಮಿಕ ಮುಖಂಡ ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ “ಭಾರತ ಸಂವಿಧಾನ” ಕುರಿತು ಉಪನ್ಯಾಸ ನೀಡಿದರು.ಪ್ರ‍ಾಚಾರ್ಯ ಟಿ.ನಾಗರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಕಾನೂನನ್ನು ಯಾರು ಗೌರವಿಸುತ್ತಾರೋ ಅವರನ್ನು ಸಮಾಜ ಗೌರವಿಸುತ್ತದೆ.ಕಾನೂನು ಪರಿಪಾಲನೆ ಪ್ರತಿಯೊಬ್ಬರ ಆಧ್ಯ ಕರ್ಥವ್ಯವಾಗಿದೆ,ಕಾನೂನು ತಿಳುವಳಿಕೆ ಯಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.ವಕೀಲರ ಸಂಘದ ಅದ್ಯಕ್ಷ ಜಿ.ಹೊನ್ನೂರಪ್ಪ ಮಾತನಾಡಿದರು.ಉಪಾಧ್ಯಕ್ಷ ಟಿ.ಪಾಪಯ್ಯ,ಕಾರ್ಯದರ್ಶಿ ಬಿ.ಸಿದ್ದಲಿಂಗಪ್ಪ,ಹಿರಿಯ ವಕೀಲರಾದ ಎ.ರವಿಕುಮಾರ,ಜಿ.ಆರ್.ಗೋವಿಂದರೆಡ್ಡಿ,ಹಿರಿಯರಾದ ಶಿವರುದ್ರಯ್ಯ ವೇದಿಕೆಯಲ್ಲಿದ್ದರು.ಸಂಗೀತ ಶಿಕ್ಷಕಿ ಯಶೋಧಮ್ಮ ಮಂಜುನಾಥ ಹಾಗು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಶಿಕ್ಷಕ ಶಿವರಾಜು ನಿರೂಪಿಸಿ ವಂದಿಸಿದರು,ವಿದ್ಯಾರ್ಥಿನಿ ಅನುಪಮಾ ಸ್ವಾಗತಿಸಿದರು,ವಿದ್ಯಾರ್ಥಿನಿ ಲ‍‍ಾವಣ್ಯ ವಂದಿಸಿದರು.
ವಿದ್ಯಾರ್ಥಿನಿಯರಾದ ಕಾವೇರಿ,ಬಿ.ಜಿ.ಬಸಮ್ಮ,ಎಸ್.ಮಮತಾ,ಶೋಭಾ,ಶಾಲಿನಿ,ಸಂಜನಾ,ಪವಿತ್ರ,ಲಾವಣ್ಯ,ಅಕ್ಷತಾ ಸೇರಿದಂತೆ ಅನೆಕೆ ವಿದ್ಯಾರ್ಥಿನಿಯರು. ನ್ಯಾಯಾಧೀಶರೊಂದಿಗೆ ಕೆಲ ಕಾನೂನು ಕುರಿತು ಚರ್ಚಿಸಿದರು ಹಾಗೂ ಅವರಿಂದ ಉತ್ತರ ಪಡೆದರು.ಕಾನೂನು ಸೇವಾ ಸಮಿತಿಯ ಸೋಗಿ ಸತೀಶ ಸೇರಿದಂತೆ ನ್ಯಾಯಾಲಯ ಸಿಬ್ಬಂದಿ ಹಾಗೂ ವಸತಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು.ನೂರಾರು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿದ್ದರು….

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend