ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸ್ನೇಹ ಕೂಟ ಕಾರ್ಯಕ್ರಮ…!!!

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 21. 2.2 2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು*

*ಶ್ರೀ ಕ್ಷೇತ್ರ ಧರ್ಮಸ್ಥಳ* *ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ದಿನಾಂಕ 20/02/2021 ರಂದು ಸ್ನೇಹಕೂಟ ಕಾರ್ಯಕ್ರಮ—– ಪಟ್ಟಣದ ಡಾಕ್ಟರ್ ಬಿಆರ್ ಅಂಬೇಡ್ಕರ್ ವಸತಿ ಶಾಲೆಯ ಆವರಣದಲ್ಲಿ ಸ್ನೇಹಕೂಟ( ನಾವೆಲ್ಲರೂ ಒಂದೇ) ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕರಾದ ಪಿಕೆ ಪುರುಷೋತ್ತಮ್ ರವರು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಇವರು ನಾನು ನನ್ನದು ನನ್ನಿಂದಲೇ ಎಲ್ಲಾ ಎನ್ನುವುದಕ್ಕಿಂತ ನಾವು ನಾವೆಲ್ಲ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಗಳು ನಮ್ಮ-ನಿಮ್ಮೆಲ್ಲರಲ್ಲಿ ಬರಬೇಕು ಪ್ರತಿಯೊಬ್ಬರೂ ಸ್ವಾರ್ಥತೆಯನ್ನು ಬಿಟ್ಟು ನಿಸ್ವಾರ್ಥ ಸೇವೆ ಸಲ್ಲಿಸಿ ಸಮಾಜದಲ್ಲಿ ಬಂಧು-ಬಳಗ ದಂತೆ ಸ್ನೇಹಿತರಂತೆ ನಡೆದುಕೊಳ್ಳಿ ಎಂದು ಈ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು ಕೂಡ್ಲಿಗಿ ತಾಲೂಕಿನ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿಗಳು ಕಲೆ-ಸಾಂಸ್ಕೃತಿಕ ಸಾಹಿತ್ಯ ಭಾಷೆ ಹಾಗೂ ನೃತ್ಯಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶನ ಮಾಡಿ ವಿವಿಧತೆಯಲ್ಲಿ ಏಕ ಮಂತ್ರ ಸಾರಿದರು ಭಾರತೀಯರ ಪರಂಪರೆ ದೇಸಿ ಸೊಗಡನ್ನು ಬಿಂಬಿಸುವ ನೃತ್ಯ ವಿವಿಧ ವಲಯದ ವೇಷಭೂಷಣಗಳು ಈ ಸಮಾರಂಭಕ್ಕೆ ಕಳೆಗಟ್ಟಿದವು ನಾವೆಲ್ಲಾ ಒಂದೇ ಎಂಬುವ ಭಾವೈಕ್ಯತೆ ಸಾರುವ ಸೇವಾ ಪ್ರತಿನಿಧಿಗಳ ವೈವಿದ್ಯಮಯ ಪ್ರದರ್ಶನಗಳಿಗೆ ಸಾಕ್ಷಿಯಾಗಿ ನೂರಾರು ಮಂದಿ ವೀಕ್ಷಕರು ಸಿಬ್ಬಂದಿ ಸೇವಾ ಪ್ರತಿನಿಧಿಗಳು ಹುಚ್ಚೆದ್ದು ಕುಣಿದಾಡಿದರು ಈ ಒಂದು ಸಮಾರಂಭದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಕೆ ಚಿದಾನಂದ ಕೂಡ್ಲಿಗಿ ತಾಲೂಕಿನ ಯೋಜನಾಧಿಕಾರಿ ಮಂಜುನಾಥ್. ಈ ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ. ಕೆ.ರಾಯಪುರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುನೀತಾ ರವರು. ಲಿಂಗಯ್ಯನವರು ಮಂಜುಳಾ. ಚಿಕ್ಕಜೋಗಿಹಳ್ಳಿ ಸುಲೇಮಾನ್ ಸಹದೇವ ಕರಿಯಪ್ಪ ವಿವಿಧ ವಲಯದ ಸೇವಾ ಪ್ರತಿನಿಧಿಗಳು ಈ ಸಂಸ್ಥೆಯ ಕಾರ್ಯಕರ್ತರು ಯೋಜನಾ ಕಚೇರಿ ಎಲ್ಲ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend