ಕೂಡ್ಲಿಗಿ:ಪ್ರಭಾವಿಗಳ ಅಕ್ರಮಗಳಿಂದಲೇ ದಲಿತರ ಶೋಷಣೆ…!!!

Listen to this article

ಕೂಡ್ಲಿಗಿ:ಪ್ರಭಾವಿಗಳ ಅಕ್ರಮಗಳಿಂದಲೇ ದಲಿತರ ಶೋಷಣೆ-ಖಂಡನೆ.ವಿಜಯನಗರ ಜಿಲ್ಲೆ ಕೂಡ್ಲಿಗಿ-ತಾಲೂಕಿನಲ್ಲಿ ದಲಿತರನ್ನು ಪರೋಕ್ಷವಾಗಿ ಪ್ರಭಾವಿಗಳೇ ಶೋಷಿಸುತ್ತಿದ್ದಾರೆ ಎಂದು,ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ದೂರಿದರು ಮತ್ತು ಪ್ರಭಾವಿಗಳ ನಿಲುವನ್ನ ಅವರು ಖಂಡಿಸಿದರು.
ಅವರು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಜರುಗಿದ ದಲಿತರ ಸಭೆಯಲ್ಲಿ ಮಾತನಾಡಿದರು, ಸರಿಯಾಗಿ ಶುದ್ಧ ಕುಡಿಯೋ ಸಿಗೋದಿಲ್ಲ ಆದ್ರೆ ಬೀರು ಬ್ರಾಂದಿ ಸಿಗುತ್ತವೆ.ಅಕ್ರಮ ಮದ್ಯ ಜೂಜುಗಳಿಂದಾಗಿ ಹೆಚ್ಚಾಗಿ ದಲಿತರೇ ಆರ್ಥಿಕವಾಗಿ ಶೋಷಣೆಗೊಳಗಾಗುತ್ತಿದ್ದಾರೆ,
ಮೀಸೆ ಬಾರದ ಬಾಲಕರು ಹಾಗೂ ಮಹಿಳೆಯರು ಮದ್ಯ ವ್ಯೆಸನಿಗಳಾಗುತ್ತಿದ್ದಾರೆ. ದನಕಾಯೋರು ಹಾಗೂ ಶಾಲಾಮಕ್ಕಳು
ಮಟ್ಕಾ ಜೂಜು ಆಡುತ್ತಿದ್ದಾರೆ, ಇದರಿಂದಾಗಿ ದಲಿತರ ಗಲ್ಲಿಗಳಲ್ಲಿ ಕಳ್ಳತನ ಮತ್ತು ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ.
ಮದ್ಯ ವ್ಯೆಸನದಿಂದಾಗಿ ದಲಿತರು ಹೆಚ್ಚಾಗಿ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ ಎಂದು ರಾಘವೇಂದ್ರ ನುಡಿದರು.
ಕೂಡ್ಲಿಗಿ ಪಟ್ಟಣ ಸೇರಿದಂತೆ
ತಾಲೂಕಿನ ಗ್ರಾಮೀಣ ಭಾಗಗಳಲ್ಲಿ,ಅಕ್ರಮ ಮದ್ಯ ಎಗ್ಗಿಲ್ಲದೆ ಮಾರಾಟ ನಡೆಯುತ್ತಿದೆ ಈ ಮೂಲಕ ದಲಿತರನ್ನ ನಿರಂತರವಾಗಿ ಶೋಷಿಸಲಾಗುತ್ತಿದೆ.

ಅಕ್ರಮ ಮದ್ಯ ಮಾರಾಟಗಾರರು ಬಂಡವಾಳ ಶಾಹಿಗಳಾಗಿದ್ದಾರೆ,ಮತ್ತು ಉನ್ನತ ವರ್ಗದವರೇ ಆಗಿದ್ದು ಅವರು ಈ ಮೂಲಕ ದಲಿತರನ್ನ ಪರೋಕ್ಷವಾಗಿ ಆರ್ಥಿಕವಾಗಿ ಶೋಷಿಸುತ್ತಿದ್ದಾರೆ ಎಂದು ಗುನ್ನಳ್ಳಿ ರಾಘವೇಂದ್ರ ಗಂಭೀರವಾಗಿ ಆರೋಪಿಸಿದರು.
ತಾಲೂಕಿನ
ಕೆಲ ಪ್ರಭಾವಿ ದಲಿತ ನಾಯಕರೇ ರಾಜಕೀಯ ಕಾರಣಕ್ಕೆ, ಶೋಷಿಸುವವರ ಬೆನ್ನಿಗೆ ನಿಂತು ಪರೋಕ್ಷವಾಗಿ ಸಂರಕ್ಷಿಸುತ್ತಿದ್ದಾರೆ,
ಈ ಮೂಲಕ ಕೆಲ ಪ್ರಭಾವಿ ದಲಿತರೇ ದಲಿತರ ಶೋಷಣೆಗೆ ಪರೋಕ್ಷವಾಗಿ ಕಾರಣವಾದಂತಾಗಿದೆ.
ಹಾಗಾಗಿ ಮೊದಲು ಪ್ರಭಾವಿ ದಲಿತ ನಾಯಕರು ವಾಸ್ಥವತೆಯನ್ನ ಮನಗಾಣಬೇಕು,ಅಕ್ರಮಗಳಲ್ಲಿ ಭಾಗಿಯಾಗಿರುವವರನ್ನು ಮೊದಲಿಗೆ ದೂರವಿಡಬೇಕಿದೆ.ಪೊಲೀಸ್ ಇಲಾಖಾಧಿಕಾರಿಗಳು ಅಕ್ರಮ ಚಟುವಟಿಕೆಗಳನ್ನ ಹತ್ತಿಕ್ಕಿ ದಲಿತರನ್ನ ಸಂರಕ್ಷಿಸಬೇಕಿದೆ ಎಂದರು.
ಪಪಂ ಸದಸ್ಯರು ಹಾಗೂ ದಲಿತ ಮುಖಂಡರಾದ ಕಾವಲ್ಲಿ ಶಿವಪ್ಪನಾಯಕ ಹಾಗೂ ಎಸ್.ದುರುಗೇಶ,ಗುರಿಕಾರ ರಾಘವೇಂದ್ರ ರವರು ಅಭಿಮತ ವ್ಯಕ್ತಪಡಿಸಿ ದ್ವನಿಗೂಡಿಸಿದರು. ವಿವಿದ ದಲಿತ ಮುಖಂಡರು ಹಾಗೂ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಡಿವೈಎಸ್ಪಿ ಹರೀಶ್,ಸಿಪಿಐ ವಸಂತ ಅಸೋಧೆ,ಪಿಎಸೈ ಶರತ್ ಹಾಗೂ ಅಪರಾಧ ವಿಭಾಗದ ಪಿಎಸೈ ಸೇರಿದಂತೆ ಪೊಲೀಸ್ ಇಲಾಖಾಧಿಕಾರಿಗಳು ಇದ್ದರು…

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend