ಕೂಡ್ಲಿಗಿ BCM ಆಯುಕ್ತರ ಆದೇಶಕ್ಕೆ ಕವಡೇ ಕಾಸಿನ ಕಿಮ್ಮತ್ತಿಲ್ಲ.!?,…!!!

Listen to this article

ಕೂಡ್ಲಿಗಿ BCM ಆಯುಕ್ತರ ಆದೇಶಕ್ಕೆ ಕವಡೇ ಕಾಸಿನ ಕಿಮ್ಮತ್ತಿಲ್ಲ.!?, ವರ್ಗಾವಣೆ ನೆನಗುದಿಗಿಡಲು ತಾಲೂಕಾಧಿಕಾರಿ ತಿಂದಿದ್ದೇನು..ಎಷ್ಟು.!?- ವಿಜಯನಗರ ನಗರ ಕೂಡ್ಲಿಗಿ: ಜಿಲ್ಲೆಯ BCMಇಲಾಖೆಯ ಆಯುಕ್ತರು, ಕೂಡ್ಲಿಗಿ ವಸತಿ ನಿಲಯದ ಅಡಿಗೆ ಸಿಬ್ಬಂದಿಯನ್ನು. ಬೇರೊಂದು ವಸತಿ ನಿಲಯಕ್ಕೆ ವರ್ಗಾವಣೆ ಮಾಡಿ ಆದೇಶಿಸಿದ್ದು, ತಾಲೂಕು BCM ಇಲಾಖಾಧಿಕಾರಿ ಮಾತ್ರ ಆಯುಕ್ತರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇಲಾಖಾ ತಾಲೂಕಾಧಿಕಾರಿ ಸಿಬ್ಬಂದಿಯನ್ನು ವರ್ಗಾವಣೆಗೊಂಡ ಅಡುಗೆ ನೌಕರನೊರ್ವನನ್ನು, ಆಯುಕ್ತರು ಸೂಚಿಸಿರುವ ವಸತಿ ನಿಲಯಕ್ಕೆ ನಿಯೋಜಿಸದೇ ಬೇರೊಂದು ವಸತಿ ನಿಲಯಕ್ಕೆ ನಿಯೋಜಿಸಿ ಅಯುಕ್ತರ ಆದೇಶ ಉಲ್ಲಂಘಿಸಿದ್ದಾರೆ ಎಂಬ ದೂರಿದೆ. ಈ ಮೂಲಕ ಇಲಾಖಾ ತಾಲೂಕಾಧಿಕಾರಿ, ಇಲಾಖಾ ಆಯುಕ್ತರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ನಿರ್ಲಕ್ಷ್ಯ ತೋರಿದ್ದಾರೆಂದು ಹೇಳಲಾಗಿದೆ. ಬದಲಿಗೆ ಬಿಸಿಎಮ್ ಇಲಾಖಾಧಿಕಾರಿ ಕೂಡ್ಲಿಗಿ ಪಟ್ಟಣದ BCM ಇಲಾಖೆಯ ಮೆಟ್ರಿಕ್ ನಂತರ ಬಾಲಕರ, ವಸತಿ ನಿಲಯ(HIC1683)ದಲ್ಲಿ ಕಾರ್ಯನಿರ್ವಹಿಸುತ್ತಿರುವ. ಎ.ಎಮ್.ಮಹಾಂತೇಶ ಎಂಬ ವವರನ್ನು, ಪಟ್ಟಣದ BCM ಮೆಟ್ರಿಕ್ ನಂತರ ನೂತನ ಬಾಲಕರ ವಸತಿ ನಿಲಯ (HIC 1681) ಕ್ಕೆ. ವರ್ಗಾಯಿಸಿ ಕ್ರಮಕ್ಕೆ 12-9-2023ರಂದು, ಇಲಾಖಾ ಆಯುಕ್ತರು ಇಲಾಖೆಯ ತಾಲೂಕಾಧಿಕಾರಿಗೆ ಅದೇಶಿಸಿದ್ದಾರೆ. ಇದರೊಂದಿಗೆ ಹಲವೆಡೆಯ ಹಾಸ್ಟೆಲ್ ಗಳಲ್ಲಿನ ಕೆಲ ಸಿಬ್ಬಂದಿಯನ್ನು, ವಿವಿದೆಡೆಕಡೆ ವರ್ಗಾಯಿಸಿ ಆಯುಕ್ತರು ಆದೇಶಿಸಿದ್ದಾರೆ. ಇಲಾಖೆಯ ಆಯುಕ್ತರು ಸಿಬ್ಬಂದಿಯ ವರ್ಗಾವಣೆಯ ಸ್ಥಳ ನಿಯುಕ್ತಿಗೊಳಿಸಿ ಸದರಿ ಆದೇಶ ನೀಡಿ, ಸುಮಾರು 6ತಿಂಗಳೇ ಕಳೆದರೂ ಕೂಡ ನಿಯೋಜಿಸಲ‍ಾಗಿರುವ ನಿಲಯದಲ್ಲಿ ಸಿಬ್ಬಂದಿ ಹಾಜರ‍ಗಿಲ್ಲ. ಬದಲಿಗೆ ಬೇರೊಂದು ನಿಲಯದಲ್ಲಿ ಕರ್ಥವ್ಯ ನಿರ್ವಹಿಸುತ್ತಿದ್ದಾನೆ, ಇಲ್ಲಿ ತಾಲೂಕಾಧಿಕಾರಿ ವರ್ಗಾವಣೆಗೊಂಡಿದ್ದ ಸಿಬ್ಬಂದಿಯ ಮನದಿಚ್ಚೆಯಂತೆ ಸ್ಪಂಧಿಸಿರುವುದು ಸ್ಪಷ್ಟವಾಗಿದೆ. ಅಂದರೆ ಆ ಸಮಯದಲ್ಲಿ ಕರ್ಥವ್ಯದಲ್ಲಿದ್ದ BCM ಇಲಾಖಾಧಿಕಾರಿ, ಇಲಾಖಾ ಆಯುಕ್ತರ ಆದೇಶ ಉಲ್ಲಂಘನೆ ಮಾಡಿ. ಡೆಪ್ಟೇಷನ್ ನೆಪದಲ್ಲಿ ತಮಗೆ ಮನ ಬಂದ ಕಡೆ ಸಿಬ್ಬಂದಿ ನಿಯೋಜಿಸಿರುವರಾ.!?, ಅಥವಾ ವರ್ಗಾವಣೆಗೊಂಡಿದ್ದ ಸಿಬ್ಬಂದಿ ತೋರಿದ ಆಮಿಷಕ್ಕೆ ಅಧಿಕಾರಿ ಬಲಿಯಾದರ‍ಾ.!? ಅಥವಾ ಸಿಬ್ಬಂದಿ ತೋರಿದ ಪ್ರಭಾವಿಗಳ ಕಾಣದ ಕೈ ಗೆ ಸಿಕ್ಕು ತೊಗಲುಗೊಂಬೆಯಂತಾದರಾ.!? ಇದಕ್ಕೆ ಈ ಹಿಂದೆ ಇದ್ದ ಹಾಗೂ ಈಗಿರುವ ಅಧಿಕಾರಿ ಉತ್ತರ ಕೊಡಬೇಕಿದೆ. ಅದೂ ಅಲ್ಲದೇ BCM ಇಲ‍ಾಖೆಗೆ ಚುನ‍ವಣಾ ಪ್ರಯುಕ್ತ, ವರ್ಗಾವಣೆಯಾಗಿ ಕೂಡ್ಲಿಗಿ ಗೆ ನೂತನವಾಗಿ ಆಗಮಿಸಿರುವ. ಬ್ಯಾಡಗಿಯಿಂದ ಇಲ್ಲಿಗೆ ಆಗಮಿಸಿರುವ ಪ್ರಸಾದ್ ಷಭಾದಿ ಮಠ ರವರೂ ಕೂಡ, ಇದೇ ಲೋಪ ಎಸಗಿರುವುದು ಅವರ ಕರ್ಥವ್ಯ ನಿಷ್ಠೆಯನ್ನ ಅಣಕಿಸುವಂತಿದೆ. ವರ್ಗಾವಣೆಯಾಗಿ ಆರು ತಿಂಗಳಾಗುವ ಮುನ್ನ ಡೆಪ್ಟೇಷ್ನ ನಿಂದ ಮುಕ್ತಿ ನೀಡಿ, ಇಲಾಖಾ ಆಯುಕ್ತರು ಸೂಚಿಸಿರುವ ವಸತಿ ನಿಲಯಕ್ಕೆ ಸಿಬ್ಬಂದಿಯನ್ನ ಕರ್ಥವ್ಯಕ್ಕೆ ಕಳುಹಿಸಿಕೊಡಬಹುದ‍ಾಗಿತ್ತು. ಅವರು ಕೂಡ್ಲಿಗಿ ಕಚೇರಿಗೆ ಕರ್ಥವ್ಯಕ್ಕೆ ಹಾಜರ‍ಾಗಿದ್ದಾಗ, ವರ್ಗಾವಣೆ ಆದೇಶ ಹೊರಡಿಸಿ ಐದು ತಿಂಗಳಾಗಿತ್ತು. ಅವರಿಗೆ ಎಲ್ಲಾ ತಿಳಿದೂ ಕೂಡ ಈ ಹಿಂದೆ ಇದ್ದ ಅಧಿಕಾರಿ ಮಾಡಿರುವ ಲೋಪ ದೋಷವನ್ನೇ, ಇದೀಗಿರುವ ಪ್ರಸಾದ್ ಷಬಾಧಿ ಮಠ ಮಾಡುತ್ತಿರುವ ಹಿನ್ನಲೆ ಯಾದರೂ ಏನು.!? ಎಂಬ ಪ್ರೆಶ್ನೆ ಎಂಥವರನ್ನೂ ಕಾಡದಿರದು. *ಕಮಿಷನರ್ ಆದೇಶಕ್ಕೆ ಕವಡೇ ಕಾಸಿನ ಕಿಮ್ಮತ್ತಿಲ್ಲ..ಸಿಬ್ಬಂದಿಯ ಇಚ್ಚೆಗೆ ಮಣೆ.!?*- ಕೆಲವು ಮೂಲಗಳಿಂದ ತಿಳಿದುಬಂದ ಮಾಹಿತಿ ಪ್ರಕಾರ, ಇದೇ ಇಲಾಖಾ ವಸತಿ ನಿಲಯದ ವಾರ್ಡ್ ನ್ ರೋರ್ವ ಮಗ, ಇದೇ ಇಲಾಖಾ ವಸತಿ ನಿಲಯದಲ್ಲಿ ಹೊರಗುತ್ತಿಗೆ ನೌಕರನಾಗಿದ್ದು. ತನ್ನ ವಸತಿ ನಿಲಯಕ್ಕೆ ಆಯುಕ್ತರು ನಿಯೋಜಿಸಿ ಆದೇಶಿಸಿರುವ, ಅಡಿಗೆ ಸಿಬ್ಬಂದಿ ಮಹಾಂತೆೇಶನನ್ನು ತನ್ನ ಮಗ ಕೆಲಸ ಮಾಡುತ್ತಿರುವ ವಸತಿ ನಿಲಯಕ್ಕೆ ನಿಯೋಜಸುವಂತೆ. ಸಂಬಂಧಿಸಿದ ಅಧಿಕಾರಿಗೆ ಒತ್ತಡ ಹೇರಿ ಹಾಗೂ ಒತ್ತಡ ಹೇರಿಸಿರುವುದಾಗಿ, ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅಂದರೆ ಇಲಾಖಾಧಿಕಾರಿ ತಮ್ಮ ಮೇಲಾಧಿಕಾರಿ ಕಮಿಷನರ್ ನೀಡಿರುವ ಆದೇಶಕ್ಕೆ, ಕವಡೇ ಕಾಸಿನ ಕಿಮ್ಮತ್ತು ನೀಡದೇ ಕೇವಲ ತಮ್ಮ ಇಲಾಖಾ ಸಿಬ್ಬಂದಿ(ವಾರ್ಡ್ ನ್) ಯ ಲಾಬಿಗೆ ಒಳಗಾಗಿರುವುದು ಸಾಬೀತಾಗಿದೆ. ಇಲಾಖಾ ತಾಲೂಕು ಅಧಿಕಾರಿ ಹಣದಾಸೆಗೆ ತಾವು ಒಳಗಾದರೋ ಅಥವಾ, ಇನ್ನಾವುದೋ ಕಾರಣಕ್ಕೆ ತಮ್ಮ ಉನ್ನತಾಧಿಕಾರಿ ಆದೇಶ ಉಲ್ಲಂಘಿಸಿ. ಇಲಾಖಾ ಸಿಬ್ಬಂದಿಯ ಸ್ವೇಚ್ಚಾಚಾರಕ್ಕೆ ಬಲಿಯಾಗಿರುವರೋ ತಿಳಿಯದಾಗಿದೆ, ಉನ್ನತಾಧಿಕಾರಿಯ ಆದೇಶಕ್ಕೆ ಕವಡೇ ಕಾಸಿನ ಕಿಮ್ಮತ್ತು ನೀಡದೇ ತಮ್ಮ ಸಿಬ್ಬಂದಿಯ ಇಚ್ಚೆಗೆ ಮಣೆ ಹಾಕಿರುವುದಂತು ಕಠು ಸತ್ಯ ಸಂಗತಿಯಾಗಿದೆ. ಇದು BCM ಇಲಾಖೆಯಲ್ಲಾಗುತ್ತಿರುವ ಯಡವಟ್ಟು, ಹಾಗೂ ಅವ್ಯವಹಾರ ಭ್ರಷ್ಟಾಚಾರಗಳಿಗೆ ಸಾಕ್ಷಿಯಾಗಿದೆ. ಇದು ಕೇವಲ ಶ್ಯಾಂಪಲ್ ಮಾತ್ರ ಕೂಡ್ಲಿಗಿ BCM ಇಲಾಖೆಯಲ್ಲಾಗುವ, ಹಾಗೂ ವಸತಿ ನಿಲಯಗಳಲ್ಲಾಗುವ ಎಲ್ಲಾ ತರಹದ ಭ್ರಷ್ಟಾಚಾರ ಕುರಿತು. ಸಾಕಷ್ಟು ಮಾಹಿತಿ ಸಾಕ್ಷ್ಯಾಧಾರಗಳ ಸಮೇತ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ, *”ಹಾಸ್ಟೆಲ್ ಗಳ ಹಾಳು ಹಣೆಯ ಬರಹ”* ಎಂಬ ಶೀರ್ಷಿಕೆಯಡಿ ಸರಣಿ ವರದಿ ಮಾಡಲಾಗುವುದು. ಈ ನಿಟ್ಟಿನಲ್ಲಿ ವಸತಿ ಶಾಲೆಗಳ ವಿದ್ಯಾರ್ಥಿಗಳು ಹಳೇ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜಿನಿಕರು ಮತ್ತು ವಸತಿ ನಿಲಯದಲ್ಲಿನ ಕಿರುಕುಳದಿಂದ ನೊಂದ ಗುತ್ತಿಗೆ ನೌಕರರು ಅಗತ್ಯ ಮಾಹಿತಿಗಳನ್ನ ನೀಡಿ ಸಹಕರಿಸಬೇಕಿದೆ. ಸಂಪರ್ಕಿಸಬೇಕ‍ಾಗಿರುವ ಮೊ ನಂ 9008937428 ಗೆ, ಸಂಪರ್ಕಿಸಬಹುದಾಗಿದೆ. ವಂದೆೇ ಮಾತರಂ ಎಂದು ನಮೂದಿಸಿ ಇದೇ ನಂ ವಾಟ್ಸಾಪ್ ಗೆ, ಪೂರಕ ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಮಾಹಿತಿ ನೀಡಿದವರ ಹೆಸರು ವಿವರ ಗೌಪ್ಯವಾಗಿಡಲಾಗುವುದು, ವರದಿ ಖಾಯಂ ಆಗಿ ಪ್ರಸಾರ ಮಾಡಿ ಇಲಾಖಾ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗುವುದು..

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend