ರಸ್ತೆಯಲ್ಲಿ ನಿಂತ ನೀರು, ಅದಗೆಟ್ಟಿತ ಸಂಬಂಧ ಪಟ್ಟ ಆಡಳಿತ ವ್ಯವಸ್ಥೆ! ಸಾರ್ವಜನಿಕ ಗೋಳು…???

Listen to this article

ಅವ್ಯವಸ್ಥೆಯಿಂದ ಚರಂಡಿಯ ನೀರು ರಸ್ತೆಗೆ ????? ಕೂಡ್ಲಿಗಿ :- ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿನ ರಾಷ್ಟ್ರೀಯ ಹೆದ್ದಾರಿ 50 , ರ ಸರ್ವೀಸ್ ರಸ್ತೆಯ ಬಸ್ ಸ್ಟ್ಯಾಂಡ್ ಹತ್ತಿರ ಬಣವಿಕಲ್ಲು ಗ್ರಾಮ ಪಂಚಾಯ್ತಿಯ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಇತ್ತೀಚೆಗೆ ಹೊಸದಾಗಿ ಚರಂಡಿಯನ್ನು ನಿರ್ಮಾಣ ಮಾಡಿರುತ್ತಾರೆ . ಆದರೆ ಈ ಚರಂಡಿಯ ನೀರು ಹಳ್ಳಕ್ಕೆ ಸೇರದೇ ರಸ್ತೆಗೆ ನೀರು ಹರಿದು ಜನರು ಮೂಗು ಮುಚ್ಚಿಕೊಂಡೇ ಸುಮಾರು 2 ತಿಂಗಳಿನಿಂದ ಸಾರ್ವಜನರು ಮತ್ತು ವಾಹನ ಸವಾರರಿಗೆ ಮೂಗು ಮುಚ್ಚಿಕೊಂಡೇ ಹೋಗುವಂತಾ ಸ್ಥಿತಿ ನಿರ್ಮಾಣವಾಗಿದ್ದು , ಇಲ್ಲಿಯವರೆಗೂ ಯಾರು ಸಹ ಈ ಸ್ಥಳಕ್ಕೆ ಆಗಮಿಸದೇ ಇದ್ದು , ಇದಕ್ಕೆ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ 50, ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಇದು ಸರಿ ಎಂದು ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ . ಆದರೆ ಇಲ್ಲಿಯ ಚರಂಡಿಯ ನೀರು ರಸ್ತೆಯಲ್ಲಿ ಹರಿಯುವ ಕಾರಣ ಮಕ್ಕಳು ಮತ್ತು ವೃದ್ಧರಿಗೆ ಹಾಗೂ ಸಾರ್ವಜನಿಕರಿಗೆ ಸೊಳ್ಳೆಗಳ ಕಾಟದಿಂದ ರೋಗಕ್ಕೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಣವಿಕಲ್ಲಿನ ಸಾರ್ವಜನಿಕರು ಪತ್ರಿಕಾ ಮಾಧ್ಯಮದವರಿಗೆ ತಿಳಿಸಿದ್ದಾರೆ …

ವರದಿ. ಗಣೇಶ್, ಕೆ,

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend