ಅಕ್ಷರ ದೀಕ್ಷೆ ನೀಡಿ ವಿದ್ಯಾರ್ಥಿಗಳ ಬಾಳು ಬೆಳಗುವ ಶಿಕ್ಷಕ ವೃತ್ತಿ, ಅತ್ಯಂತ ಪವಿತ್ರವಾದದ್ದು-ವೀರಣ್ನ ಎಸ್.ಜತ್ತಿ…!!!

Listen to this article

ಅಕ್ಷರ ದೀಕ್ಷೆ ನೀಡಿ ವಿದ್ಯಾರ್ಥಿಗಳ ಬಾಳು ಬೆಳಗುವ ಶಿಕ್ಷಕ ವೃತ್ತಿ, ಅತ್ಯಂತ ಪವಿತ್ರವಾದದ್ದು-ವೀರಣ್ನ ಎಸ್.ಜತ್ತಿ- ವಿಜಯನಗರ ಜಿಲ್ಲೆ ಕೂಡ್ಲಿಗಿ: ವಿದ್ಯಾರ್ಥಿಗಳಿಗೆ ಅಕ್ಷರ ದೀಕ್ಷೆ ನೀಡುವ ಮೂಲಕ, ಅವರ ಬಾಳನ್ನು ಬೆಳಗುವ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದುದು. ಹಾಗೂ ನೆಮ್ಮದಿಯನ್ನು ನೀಡುವಂತದ್ದು ಎಂದು, ಶಿಕ್ಷಣ ಇಲಾಖೆಯ ಹಾಗೂ ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘದ ವಿಶ್ರಾಂತ ನಿರ್ದೇಶಕರಾದ ವೀರಣ್ಣ ಎಸ್ ಜತ್ತಿರವರು ಅಭಿಪ್ರಾಯಪಟ್ಟರು. ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಡಕಲಕಟ್ಟೆಯಲ್ಲಿ. ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ, ನಿವೃತ್ತ ಮುಖ್ಯ ಶಿಕ್ಷಕರ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದಲ್ಲಿ. ಸಾಧಕರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಎಲ್ಲರಿಗಿಂತಲೂ ಹೆಚ್ಚು ಗೌರವಿಸಲ್ಪಡುವ ಶಿಕ್ಷಕರ ಕಾರ್ಯ ಪೂಜ್ಯನೀಯವಾಗಿದ್ದು, ಅಕ್ಷರ ಹಾಗೂ ಸಂಸ್ಕಾರ ಗಳನ್ನು ಕಲಿಸುವ ಮೂಲಕ. ವಿದ್ಯಾರ್ಥಿಗಳ ಪಾಲಿನ ದೇವರಾಗುವ ಶಿಕ್ಷಕರು ಸಮಾಜಕ್ಕೆ, ಮಹತ್ತರ ಕೊಡುಗೆಯನ್ನು ನೀಡುತ್ತಾರೆ ಎಂದರು. ಮಡಕಲಕಟ್ಟೆ ಶಾಲೆಯು ಶೈಕ್ಷಣಿಕವಾಗಿ ಸದಾ ಉನ್ನತ ಸಾಧನೆ ತೋರಿದ್ದು, ಅನೇಕ ಪ್ರಶಸ್ತಿ ಗಳನ್ನು ಪಡೆಯುವ ಮೂಲಕ ರಾಜ್ಯದ ಮಾದರಿ ಶಾಲೆಯಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿರುವುದು. ಹಾಗೂ ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ, ಶ್ಲಾಘನೀಯವಾದ ವಿಚಾರವಾಗಿದೆ ಎಂದು ತಿಳಿಸಿದರು. ಕೂಡ್ಲಿಗಿಯಲ್ಲಿ ನಾನು ಕ್ಷೇತ್ರಶಿಕ್ಷಣಾಧಿಕಾರಿ ಆಗಿದ್ದಾಗಿನಿಂದಲೂ ಇದು ನನಗೆ ಇಷ್ಟವಾದ ಶಾಲೆ ಯಾಗಿದ್ದು ಈ ಗ್ರಾಮದ ನಂಟು ಇಂದಿಗೂ ಉಳಿದಿದೆ ಎoದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಜಿ.ಎಂ. ಪ್ರದೀಪ್ ಕುಮಾರ್ ಇವರು ಮಡಕಲಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಪ್ರಾರಂಭದಿಂದಲೂ ಇತರೆ ಶಾಲೆಗಳಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಎನ್ ಸಿ ಇ ಆರ್ ಟಿ ನವ ದೆಹಲಿಯ ಮುಖ್ಯಸ್ಥರು ಸಹ ಶಾಲೆಗೆ ಭೇಟಿ ನೀಡಿ ಶಾಲೆಯ ಸಾಧನೆ ಮತ್ತು ಶಿಕ್ಷಕರ ಕಾರ್ಯ ವೈಖರಿಯ ಬಗ್ಗೆ ಪ್ರಶಂಸೆಯ ಸಾಲುಗಳನ್ನು ಬರೆದಿರುವುದು ಶಾಲೆಯ ಹಿರಿಮೆಗೆ ಸಾಕ್ಷಿಯಾಗಿದೆ ಹಾಗೂ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮುಖ್ಯ ಗುರುಗಳಿಗೆ ಅಭಿನಂದನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನವನ್ನು ಏರ್ಪಡಿಸಿದ್ದು. ಮುಂದಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ, ಶೈಕ್ಷಣಿಕ ಮತ್ತು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಆಯೋಜಿಸುವ ಯೋಜನೆಯನ್ನು ಹೊಂದಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ. ಈ ಶಾಲೆಯಲ್ಲಿ ನಮ್ಮ ತಂದೆಯವರಾದ ಮನೋಹರವರು ಮೊದಲಿಗೆ, ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ್ದು. ಈ ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಮೊದಲ ಪ್ರಾಶಸ್ತ್ಯ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಕೂಡ್ಲಿಗಿಯ ಹಿರೇಮಠದ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು ಗ್ರಾಮಸ್ಥರ ನೆರವಿದ್ದಾಗ ಮಾತ್ರ ಪ್ರತಿ ಶಾಲೆ ಅಭಿವೃದ್ದಿ ಹೊಂದಲು ಸಾಧ್ಯ, ಇಂತಹ ವಾತಾವರಣ ಮಡಕಲಕಟ್ಟೆ ಗ್ರಾಮದಲ್ಲಿರುವುದು ಹರ್ಷದಾಯಕವಾದ ಸಂಗತಿಯಾಗಿದೆ. ಹಳೆಯ ವಿದ್ಯಾರ್ಥಿಗಳ ಇಂದಿನ ಕಾರ್ಯ ಶ್ಲಾಘನೀಯವಾಗಿದ್ದು ಗುರು ಭಕ್ತಿಯನ್ನು ತೋರುವ ಮೂಲಕ ತಮಗೆ ಅಕ್ಷರ ಸಂಸ್ಕಾರವನ್ನು ನೀಡಿದ ಗುರುಗಳ ಋಣವನ್ನು ತೀರಿಸುವ ಕಾರ್ಯವನ್ನು ಮಾಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯ ಗುರುಗಳು ಮತ್ತು ಖ್ಯಾತ ಜ್ಯೋತಿಷಿಗಳಾದ ಸಂಗಮೇಶ್ವರಯ್ಯ, ವಿಕಲಚೇತನ ಸಾಧಕಿ ಗುಂಡುಮುಣುಗು ಲಕ್ಷ್ಮೀದೇವಿ, ರಂಗಭೂಮಿ ಕಲಾವಿದ ಸಾಂಬಶಿವ ದಳವಾಯಿ, ನವೋದಯ ಮತ್ತು ಸೈನಿಕ ಶಾಲೆಗೆ ಈ ವರ್ಷ ಆಯ್ಕೆಗೊಂಡ ಸಾಧಕ ವಿದ್ಯಾರ್ಥಿ ಕಾರ್ತಿಕ್ ಮದಕರಿ ಇವರನ್ನು ಸನ್ಮಾನಿಸಲಾಯಿತು. ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ತೋರಿದ ಗ್ರಾಮದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು… ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹನುಮಂತ ವಹಿಸಿದ್ದರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೂಡ್ಲಿಗಿ ಘಟಕದ ಅಧ್ಯಕ್ಷರಾದ ಪಾಲ್ತೂರ್ ಶಿವರಾಜ್, ನಿವೃತ್ತ ಬಿ ಆರ್ ಪಿ ತಳವಾರ ಶರಣಪ್ಪ, ಗುಂಡುಮುಣುಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಗ್ರಾಮ ಪಂಚಾಯತಿ ಸದಸ್ಯ ಸಾರಪ್ಪ, ಶಿಕ್ಷಣ ಸಂಯೋಜಕ ನಾಗರಾಜ, ಗ್ರಾಮದ ಹಿರಿಯರಾದ ನಾಗಣ್ಣ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ನಿವೃತ್ತಿ ಅಭಿನಂದನೆ ಸ್ವೀಕರಿಸಿದ ನಿವೃತ್ತ ಮುಖ್ಯ ಗುರುಗಳಾದ ಶ್ಯಾಮ ಸುಂದರ ಸಫಾರೆ, ಎಚ್.ಎo.ಮಹೇಶ್ವರಯ್ಯ, ಎಂ ಎಸ್ ಗೋಪಾಲ ನಾಯ್ಕ, ಸಿ ಪ್ರಕಾಶ್, ಶಾಲೆ ಯಲ್ಲಿ ಹಿಂದೆ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಜಿಎಂ ಪ್ರದೀಪ್ ಕುಮಾರ್, ವೈ ಎಂ ವಿಜಯಕುಮಾರ್, ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ್, ಅಂಗನವಾಡಿ ಮೇಲ್ವಿಚಾರಕಿ ಅನುಪಮ, ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶಿವಲೀಲಾ, ಪಕ್ಕದ ಊರುಗಳ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಾಂಬಶಿವ ದಳವಾಯಿ ಪ್ರಾರ್ಥಿಸಿದರು, ಶಿವಕುಮಾರ್ ಸ್ವಾಗತಿಸಿದರು, ಶಿಕ್ಷಕ ಮಹಂತೇಶ್ ವಂದಿಸಿದರು, ಹಳೆಯ ವಿದ್ಯಾರ್ಥಿ ಓಬಣ್ಣ ಹಾಗೂ ರಾಜು ನಾಯಕ ಕಾರ್ಯಕ್ರಮ ನಿರೂಪಿಸಿದರು…

ವರದಿ,ವಿ,ಜೆ,ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend