ಪರಿಸರ ರಕ್ಷಣೆ ಮನುಕುಲದ ರಕ್ಷಣೆ…!!!

Listen to this article

ಲೇಖನ : ಪರಿಸರ ರಕ್ಷಣೆ ಮನುಕುಲದ ರಕ್ಷಣೆ

ಪ್ರಕೃತಿ ಮನುಷ್ಯನ ಜೀವನಕ್ಕೆ ಏನ್ನೆಲ್ಲ ಕೊಟ್ಟಿಲ್ಲ. ಅಂತಹದರಲ್ಲಿ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸರ್ವನಾಶ ನಮ್ಮ ಕಣ್ಣೇದುರೆ ನಡೆಯಲಿದೆ. ಇದು ನಡೆಯಬಾರದೆಂದರೆ ಇಂದಿನಿಂದಲೆ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ.
ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಅದು ಅಷ್ಟು ಸುಲಭವಲ್ಲ, ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ದೂರಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ,ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತಾಗಿರುವ ಸತ್ಯ. ಈ ಬಗ್ಗೆ ಕಾಳಜಿ, ಚಿಂತೆ ಇರುವವರನ್ನೂ ಗಾಢವಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ – ಈ ನಿಟ್ಟಿನಲ್ಲಿ ನಾವೇನು ಮಾಡಬಹುದು?

ಪರಿಸರದ ಸಂರಕ್ಷಣೆ ಬಗ್ಗೆ ಗಮನಿಸಬೇಕಾದ ಅಂಶಗಳು

ಜನಸಂಖ್ಯೆ – ಹೆಚ್ಚಳ-ಕಡಿತ ಹಾಗೂ ಅವರ ಒಟ್ಟಾರೆ ಬೇಡಿಕೆಯ ಮೇಲಿನ ಪರಿಣಾಮಆಹಾರ, ಕೃಷಿ – ಕೀಟನಾಶಕಗಳ ಬಳಕೆ, ಸಾವಯವ ಕೃಷಿಯ ಬೆಳವಣಿಗೆ, ಪ್ರಾಣಿಮೂಲ ಆಹಾರದಿಂದ ಪರಿಸರಕ್ಕೆ ಆಗುವ ಆಘಾತಜನರು, ಸಂಘ-ಸಂಸ್ಥೆಗಳು – ಪರಿಸರಕ್ಕೆ ಅವರ ಕೊಡುಗೆಗಳು, ಪಾತ್ರ ಹಾಗೂ ಅವರ ನೈಜ ಉದ್ದೇಶಗಳು
ತ್ಯಾಜ್ಯ – ಉತ್ಪಾದನೆ, ಸಂಸ್ಕರಣೆ ಹಾಗೂ ವಿಲೇವಾರಿ
ನೀರು – ಬಳಕೆಯ ಪ್ರಮಾಣ, ಮಳೆನೀರಿನ ಇಂಗುವಿಕೆಯ ಪ್ರಮಾಣ, ವಿವಿಧ ಮೂಲಗಳ ಸ್ಥಿತಿಗತಿ
ಸ್ಥಳೀಯ ಸಂಸ್ಕೃತಿ, ಹಿರಿಯರ ಜೀವನಕ್ರಮ – ಅದರಲ್ಲಿರುವ ಒಳಿತು-ಕೆಡುಕುಗಳು (ಪರಿಸರದ ದೃಷ್ಟಿಯಿಂದ)ಇಂಧನ-ಶಕ್ತಿ – ಬಳಕೆಯ ಪ್ರಮಾಣ, ನವೀಕರಣಗೊಳ್ಳುವ ಮೂಲಗಳ ಶೇಕಡಾವಾರು ಕೊಡುಗೆನೆಲ – ಬಳಕೆಯಲ್ಲಿ ಆಗುತ್ತಿರುವ ವ್ಯತ್ಯಾಸಗಳು – ಕಾಡು ಕೃಷಿಭೂಮಿಯಾಗುವುದು, ಕೃಷಿಭೂಮಿ ನಿವೇಶನಗಳಾಗುವುದು.ಆರ್ಥಿಕತೆ – ಏರಿಳಿತದಿಂದ ಜನರ ಜೀವನಶೈಲಿ, ಅವರ ಬೇಡಿಕೆಗಳು ಹಾಗೂ ಪರಿಸರದ ಮೇಲೆ ಆಗುವ ಪರಿಣಾಮ.ಸ್ಥಳೀಯ ಪ್ರಾಣಿ-ಪಕ್ಷಿ-ಜಲಚರಗಳು – ಅವುಗಳ ಜೀವನಕ್ರಮ, ಅವುಗಳ ಉಳಿವಿಗೆ ಅವಶ್ಯವಾದ ಪರಿಸರ

ಪರಿಸರ ರಕ್ಷಣೆಗಾಗಿ ನಾವು ಮಾಡಲೇಬೇಕಾದ ಸಂಗತಿಗಳು

ಪುನರ್ ಬಳಕೆಯಂತ ವಸ್ತುಗಳನ್ನು ಸುಮ್ಮನೆ ಬಿಸಾಡಬೇಡಿ, ಮರುಬಳಕೆ ಮಾಡಿ. ನಿಮಗೆ ಬೇಡದಿದ್ದರೆ ಇತರರಿಗಾದರೂ ದಾನ ಮಾಡಿ. ತಿದಿನದ ಜೀವನದಲ್ಲಿ ಅಥವಾ ಸಮಾರಂಭಗಳ ಸಂದರ್ಭದಲ್ಲಿ ಸುಲಭದಲ್ಲಿ ಮಣ್ಣಾಗಿ ಹೋಗುವ ಪರಿಸರ ಸ್ನೇಹೀ ಉತ್ಪನ್ನಗಳನ್ನು ಬಳಸುವುದು. ಉದಾ: ಪ್ಲಾಸ್ಟಿಕ್ ಚೀಲದ ಬದಲು ಕಾಗದ ಅಥವಾ ಬಟ್ಟೆಯ ಚೀಲ, ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಮಣ್ಣಿನ ಗಣೇಶ, ಪ್ಲಾಸ್ಟಿಕ್ ಗೋಣಿಗಳ ಬದಲು ಸೆಣಬಿನ ನಾರಿನ ಗೋಣಿ. ಎಸೆಯುವ ಸಂಸ್ಕೃತಿ’ಯ ಬದಲು ’ರಿಪೇರಿ ಸಂಸ್ಕೃತಿ’ಯನ್ನು ಅಳವಡಿಸಲು ಸಾಧ್ಯವೋ ಎಂಬುದನ್ನು ನೋಡಿ. ಮನೆಯಲ್ಲಿಯೇ ಜೈವಿಕ, ಹಸಿ ತ್ಯಾಜ್ಯಗಳ ಸಂಸ್ಕರಣೆ ಮಾಡಿ (ಉದಾ: ಅಡುಗೆಮನೆಯ ಆಹಾರ ತ್ಯಾಜ್ಯ, ಉದ್ಯಾನವನದ ಹಸಿರು ತ್ಯಾಜ್ಯ). ಇದರಿಂದ ನೀವು ಮನೆಯಲ್ಲಿಯೇ ಪರ್ಯಾಯ ಇಂಧನ ಅಥವಾ ಗೊಬ್ಬರ ತಯಾರಿಸಬಹುದು, ಬೀದಿಯಲ್ಲಿರುವ ದನಗಳು, ನಾಯಿಗಳು ಪ್ಲಾಸ್ಟಿಕ್ ತಿನ್ನುವುದನ್ನೂ ತಪ್ಪಿಸಬಹುದು. ಇದನ್ನು ಅಪಾರ್ಟ್‍ಮೆಂಟಿನಲ್ಲಿರುವವರೂ ಮಾಡಬಹುದು.ಅಪಾಯಕಾರಿ ತ್ಯಾಜ್ಯಗಳನ್ನು ಮಕ್ಕಳ ಕೈಗೆ ಸಿಗದಂತೆ ಸಂಗ್ರಹಿಸಿ ಜಾಗ್ರತೆಯಾಗಿ ವಿಲೇವಾರಿ ಮಾಡಿ. ಉದಾ: ಟ್ಯೂಬ್‍ಲೈಟುಗಳು, ಸಿ.ಎಫ್.ಎಲ್. ಬಲ್ಬುಗಳು, ಇಲೆಕ್ಟ್ರಾನಿಕ್ ಉಪಕರಣಗಳು ಅಥವಾ ಬಿಡಿಭಾಗಗಳು.ವಿಂಗಡನೆ ಮಾಡಿ ವಿಲೇವಾರಿ ಮಾಡುವ ಪ್ರಬುದ್ಧ ವ್ಯವಸ್ಥೆ ಇಲ್ಲದಿದ್ದಲ್ಲಿ ಅದಕ್ಕೋಸ್ಕರ ಒತ್ತಾಯಿಸಿ, ವಿಂಗಡನೆ ಮಾಡುವುದು ನಿಮ್ಮ ಜವಾಬ್ದಾರಿ, ಆದರೆ ಅದರ ಮುಂದಿನ ವ್ಯವಸ್ಥೆಯನ್ನು ಕೇಳುವುದು ನಿಮ್ಮ ಹಕ್ಕು.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸಲು ಪ್ರಯತ್ನ ಮಾಡಿ. ಇದರಿಂದ ಪರಿಸರವೂ ಉಳಿಯುತ್ತದೆ, ದೇಶದ ಪೆಟ್ರೋಲಿಯಂ ಆಮದಿನ ಹೊರೆಯೂ ಕಮ್ಮಿಯಾಗುತ್ತದೆ. ನಿಮ್ಮ ಮನೆಯೊಳಗೆ ಉತ್ತಮ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಿ, ಹಗಲು ಹೊತ್ತನ್ನು ಮನೆಗೊಂದು ಮರ, ಊರಿಗೊಂದು ವನ” ಎನ್ನುವ ಮಾತು ಎಲ್ಲರಿಗೂ ಗೊತ್ತಿದೆ. ಆದರೆ ಎಷ್ಟು ಜನ ಈ ಮಾತನ್ನು ಪಾಲಿಸುವುದರಲ್ಲಿ ಯಶಸ್ವಿಯಾಗಿದ್ದಾರೋ ನಾ ಕಾಣೆ? ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಶಿಕ್ಷಕರು ವಿಜ್ಞಾನ ಪಾಠ ಮಾಡುವಾಗ ಗಿಡಗಳ ಬಗ್ಗೆ, ಮರಗಳ ಮಹತ್ವದ ಬಗ್ಗೆ, ಪರಿಸರದ ಸಂರಕ್ಷಣೆಯ ಬಗ್ಗೆ ತಿಳಿಸಿಕೊಡುತ್ತಿದ್ದರು. ಟೀಚರ್ ಹೇಳುತ್ತಿದ್ದ ಕಾರಣ ಗಿಡ ನೆಡುವ ಮನಸ್ಸಾದರೂ ಮಾಡುತ್ತಿದ್ದೆವು. ಆದರೀಗ ನಮ್ಮ ಪಾಲಿಗೆ ಪರಿಸರವು, ಪರಿಸರದ ಕಥೆ, ಪರಿಸರದ ಅನುಕೂಲ, ಪರಿಸರ ಸಂರಕ್ಷಣೆಯ ಅಗತ್ಯ, ಪರಿಸರ ಮಾಲಿನ್ಯಗಳ ಬಗ್ಗೆ ಭಾಷಣ, ಪ್ರಬಂಧ, ರಸಪ್ರಶ್ನೆ ಹಾಗೂ ಚರ್ಚಾ ವಿಷಯವಾಗಿ ಉಳಿದುಬಿಟ್ಟಿದೆ. ಅಂದರೆ ಪರಿಸರ ಸಂರಕ್ಷಣೆ ಕೇಲವ ಕಲಿಕಾ ವಿಷಯವಾಗಿ ಮಾರ್ಪಟ್ಟಿದೆ. ಈ ಬಗ್ಗೆ ನಾವು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.ಚೆನ್ನಾಗಿ ಉಪಯೋಗಿಸಿ. ಆಗ ಫ್ಯಾನ್, ವಾತಾನುಕೂಲಿ, ವಿದ್ಯುತ್ ದೀಪಗಳು, ಇವೆಲ್ಲದರಲ್ಲಿ ವಿದ್ಯುತ್ ಶಕ್ತಿಯನ್ನು ಉಳಿಸಬಹುದು. ನವೀಕರಿಸಲು ಸಾಧ್ಯವಿರುವ ಮೂಲಗಳನ್ನು ಉಪಯೋಗಿಸಿ. ಉದಾ: ಸೋಲಾರ್ ನೀರಿನ ಹೀಟರ್, ಸೋಲಾರ್ ದೀಪಗಳು
ಸಾಧ್ಯವಾದಾಗಲೆಲ್ಲಾ ರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳನ್ನೇ ಖರೀದಿಸಿರಿ. ಇದರಿಂದ ಪರಿಸರಕ್ಕೂ ನಿರಾಳ, ನಿಮ್ಮ ಆರೋಗ್ಯಕ್ಕೂ ವರದಾನ. ಸುತ್ತಮುತ್ತಲೂ ಹಸಿರು ಹೆಚ್ಚುವಂತೆ ಪ್ರಯತ್ನ ಮಾಡಿ. ನಿಮ್ಮ ಹುಟ್ಟುಹಬ್ಬದಂದು, ಇತರ ವಿಶೇಷ ದಿನಗಳಂದು ಗಿಡ ನೆಡುವ ಕಾರ್ಯ ಕೈಗೊಳ್ಳಿ, ಅದನ್ನು ನೀರೆರೆದು ಪೋಷಿಸಲು ಮರೆಯಬೇಡಿ.
ಇಂಗು ಗುಂಡಿಗಳನ್ನು ಸ್ಥಾಪಿಸಿ. ಮನೆಯ ಸುತ್ತಮುತ್ತಲೂ ಹರಿದು ಪೋಲಾಗಿಹೋಗುವ ಮಳೆನೀರನ್ನು ಇಂಗಿಸಲು ವ್ಯವಸ್ಥೆ ಕಲ್ಪಿಸಲು ಸಾಧ್ಯವಾದರೆ ಮಾಡಿ.

ಹೆಚ್ಚಿಗೆ ಮಾಡಬಹುದಾದ ಸಂಗತಿಗಳು

ಸಸ್ಯಜನ್ಯ ಆಹಾರಕ್ಕೆ ಹೆಚ್ಚಿನ ಒತ್ತುಕೊಡಿ.
ನಿಮ್ಮ ಜನಪ್ರತಿನಿಧಿಗಳನ್ನು ಪರಿಸರ ಪ್ರೇಮಿಗಳಾಗಲು ಒತ್ತಾಯಿಸಿಜನಸಂಖ್ಯೆಯನ್ನು ನಿಯಂತ್ರಣ
ಸ್ಥಳೀಯ ಯೋಜನೆಗಳ ಬಗ್ಗೆ ಜಾಗೃತರಾಗಿರಿ, ಅಗತ್ಯ ಬಿದ್ದಲ್ಲಿ ಕೈಜೋಡಿಸಿ ಪರಿಸರ ಸಂರಕ್ಷಣೆಗಾಗಿ ಹೋರಾಡಿ.
ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಿ, ಅವುಗಳ ಕಾರ್ಬನ್ ಫುಟ್‍ಪ್ರಿಂಟ್ ಕಡಿಮೆ ಇರುತ್ತದೆ, ಇದು ಸ್ಥಳೀಯ ಆರ್ಥಿಕತೆಗೂ ಒಳ್ಳೆಯದು.ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡುವ ಸಂಘ-ಸಂಸ್ಥೆ ಅಥವಾ ವ್ಯಕ್ತಿಗಳನ್ನು ಎತ್ತಿಹಿಡಿಯಿರಿ,ಮರಗಳನ್ನು ಕಡಿಯುವುದರ ಬದಲು ಸ್ಥಳಾಂತರಿಸುವುದು.

ಮನೆಗೊಂದು ಮರ, ಊರಿಗೊಂದು ವನ” ಎನ್ನುವ ಮಾತು ಎಲ್ಲರಿಗೂ ಗೊತ್ತಿದೆ. ಆದರೆ ಎಷ್ಟು ಜನ ಈ ಮಾತನ್ನು ಪಾಲಿಸುವುದರಲ್ಲಿ ಯಶಸ್ವಿಯಾಗಿದ್ದಾರೋ ನಾ ಕಾಣೆ? ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಶಿಕ್ಷಕರು ವಿಜ್ಞಾನ ಪಾಠ ಮಾಡುವಾಗ ಗಿಡಗಳ ಬಗ್ಗೆ, ಮರಗಳ ಮಹತ್ವದ ಬಗ್ಗೆ, ಪರಿಸರದ ಸಂರಕ್ಷಣೆಯ ಬಗ್ಗೆ ತಿಳಿಸಿಕೊಡುತ್ತಿದ್ದರು. ಟೀಚರ್ ಹೇಳುತ್ತಿದ್ದ ಕಾರಣ ಗಿಡ ನೆಡುವ ಮನಸ್ಸಾದರೂ ಮಾಡುತ್ತಿದ್ದೆವು. ಆದರೀಗ ನಮ್ಮ ಪಾಲಿಗೆ ಪರಿಸರವು, ಪರಿಸರದ ಕಥೆ, ಪರಿಸರದ ಅನುಕೂಲ, ಪರಿಸರ ಸಂರಕ್ಷಣೆಯ ಅಗತ್ಯ, ಪರಿಸರ ಮಾಲಿನ್ಯಗಳ ಬಗ್ಗೆ ಭಾಷಣ, ಪ್ರಬಂಧ, ರಸಪ್ರಶ್ನೆ ಹಾಗೂ ಚರ್ಚಾ ವಿಷಯವಾಗಿ ಉಳಿದುಬಿಟ್ಟಿದೆ. ಅಂದರೆ ಪರಿಸರ ಸಂರಕ್ಷಣೆ ಕೇಲವ ಕಲಿಕಾ ವಿಷಯವಾಗಿ ಮಾರ್ಪಟ್ಟಿದೆ. ಈ ಬಗ್ಗೆ ನಾವು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.
ಮಾನವ ಪರಿಸರದ ಶಿಶು ಎನ್ನುವುದು ಅಕ್ಷರಶಃ ಸತ್ಯ. ಪರಿಸರವಿಲ್ಲದೆ ಮಾನವನ ಜೀವನಕ್ಕೆ ಅರ್ಥವೆಂಬುದೇ ಇಲ್ಲ. ಪ್ರಸ್ತುತ ಮನುಕುಲವು ಅತ್ಯಂತ ದುರಾಸೆಯಿಂದ ಅವನ ಅನುಕೂಲಕ್ಕಾಗಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡುತ್ತಿದೆ. ಇದರಿಂದ ಬರೀ ಪರಿಸರವಲ್ಲದೆ ಪ್ರಾಣಿಗಳ ಜೀವ ರಕ್ಷಣೆಗೂ ಹಾನಿಯುಂಟಾಗುತ್ತಿದೆ. ಇದೆಲ್ಲದರ ಜೊತೆಗೆ
ಜಲಮಾಲಿನ್ಯ, ವಾಯುಮಾಲಿನ್ಯ, ಮಣ್ಣಿನ ಮಾಲಿನ್ಯ, ಅರಣ್ಯನಾಶ ಹೀಗೆ ಹತ್ತು ಹಲವು ಸಮಸ್ಯೆಗಳು ಪರಿಸರದಲ್ಲಿ ಕಂಡುಬರುತ್ತಿವೆ. ಇದಕ್ಕೆಲ್ಲ ಮೂಲ ಕಾರಣ ಮಾನವನ ದುರಾಸೆ, ಐಶಾರಾಮಿ ಜೀವನ, ಆಧುನಿಕ ಸಮಾಜ, ನಗರಗಳ ಬೆಳವಣಿಗೆ ಹೆಚ್ಚುತ್ತಿರುವ ಕೈಗಾರಿಕೆಗಳು.

ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ದಿನವೇ ವಿಶ್ವ ಪರಿಸರ ದಿನ ಪ್ರತೀ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಮಹತ್ತರವಾದ ದಿನವಿದು.ಪರಿಸರ ಸಂರಕ್ಷಣೆಗೆ ನಾವು ಸ್ವಯಂಪ್ರೇರಿತರಾಗಿ ಗಿಡ ನೆಟ್ಟು, ನೀರು ಹಾಕಿ, ಮರಗಳನ್ನು ಬೆಳೆಸಬೇಕಿದೆ. ಪರಿಸರದ ಮೌಲ್ಯವನ್ನು ಎಲ್ಲರೂ ಅರಿತುಕೊಂಡು ಮಲಿನ ಮಾಡದಂತೆ ಸಂರಕ್ಷಣೆ ಮಾಡುವಲ್ಲಿ ಶ್ರಮವಹಿಸಬೇಕಿದೆ. ಇನ್ನು ನಮ್ಮ ಆಪ್ತರ ಸಂತೋಷದ ಕ್ಷಣಗಳಿಗೆ ಕಾರಣರಾಗಲು ನಾವು ಯಾವುದೋ ಲಕ್ಷಾಂತರ ಮೌಲ್ಯದ ಉಡುಗೂರೆ ನೀಡುವ ಬದಲು ಪರಿಸರಕ್ಕೆ ಪೂರಕವಾಗುವಂತೆ ಒಂದು ಗಿಡ ಕೊಟ್ಟರೆ ಅದು ಎಲ್ಲದಕ್ಕಿಂತಲೂ ಅಮೂಲ್ಯವಾದದ್ದು ಎನಿಸಿಕೊಳ್ಳುತ್ತದೆ. ಹೀಗೇ ಯಾವೊದೋ ಒಂದು ನೆಪದ್ಲಲಿ ಪ್ರತೀ ಮನೆಗಳಲ್ಲಿ ಒಂದು ಗಿಡ ನೆಟ್ಟರೆ ಸಾಕು, ತಾನಾಗಿಯೇ ಊರಿನಲ್ಲಿ ವನ ಸೃಷ್ಟಿಯಾಗುತ್ತದೆ. ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರಿಗೆ ಮರುಜನ್ಮ ನೀಡಿದ ಹಾಗೆ ಆಗುತ್ತದೆ, ಈ ನಮ್ಮ ಪರಿಸರ ರಕ್ಷಣೆ,

World Environment Day 2023

ದೀಪ, ಜಿ D/೦ ಶಿವಣ್ಣ, ಜಿ
ಕೂಡ್ಲಿಗಿ (ತಾ) ವಿಜಯನಗರ (ಜಿ) ಸೂಲದಹಳ್ಳಿ
ಎಂ ಎ ಪಿಎಚ್ ಡಿ ಸಂಯೋಜಿತ, ಸಂಶೋಧನಾರ್ಥಿ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಐದನೇ ಸೆಮಿಸ್ಟರ್
ಭಾಷಾ ನಿಕಾಯ….

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend