ಕೂಡ್ಲಿಗಿ:ಮಜ್ಲಿಸ್ಎಉಲಮಾ ಅಹಲೆ ಹದೀಸ್ ವತಿಯಿಂದ ಇಸ್ಲಾಮಿಕ್ ಸ್ಪರ್ದೆ…

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಮಜ್ಲಿಸ್-ಎ-ರಹಮಾನಿಯ ಮಸೀದಿಯಲ್ಲಿ,ಮಕ್ಕಳಿಗಾಗಿ ಧಾರ್ಮಿಕ ಶ್ರದ್ಧಾ ಭಕ್ತಿ ಉತ್ತೇಜಿಸುವಂತಹ ಇಸ್ಲಾಮಿಕ್ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ‘ತೋಫತ್-ಉಲ್-ಇಸ್ಲಾಂ’ ಪುಸ್ತಕವನ್ನು ಕಂಠಪಾಠ ಮಾಡಿ ಒಪ್ಪಿಸಿದ ಮಕ್ಕಳಿಗೆ,10,000 ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿತ್ತು.

ಇದರ ಜೊತೆಗೇ ತರಗತಿಗಳ ಆಧಾರದ ಮೇಲೆ ಮಕ್ಕಳನ್ನು,ಒಟ್ಟು 3 ಗುಂಪುಗಳಲ್ಲಿ ವಿಂಗಡಿಸಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮೊದಲನೇ ಗುಂಪಿನಲ್ಲಿ 1 ರಿಂದ 4ನೇ ತರಗತಿ ಮಕ್ಕಳು, 2ನೇ ಗುಂಪಿನಲ್ಲಿ 5 ರಿಂದ 8ನೇ ತರಗತಿ ಮಕ್ಕಳು ಹಾಗೂ 3ನೇ ಗುಂಪಿನಲ್ಲಿ 9 ರಿಂದ 12ನೇ ತರಗತಿಯ ಮಕ್ಕಳು ಭಾಗವಹಿಸಲು ಅವಕಾಶವಿತ್ತು.ಪ್ರತಿ ಗುಂಪಿನಲ್ಲಿ ವಿಜೇತ ಮಕ್ಕಳಿಗೆ ಮೊದಲನೇ ಬಹುಮಾನ ಸೈಕಲ್,ದ್ವಿತೀಯ ಬಹುಮಾನ ಸೂಟ್ಕೇಸ್, ಮತ್ತು ತೃತೀಯ ಬಹುಮಾನ ಬ್ಯಾಗ್ ನೀಡಲಾಗುವುದು ಎಂದು ಘೋಷಿಸಲಾಗಿದೆ.
ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು, ಕಾರ್ಯಕ್ರಮ ಬೆಳಿಗ್ಗೆ 9.30 ರಿಂದ ಸಾಯಂಕಾಲ 5.30ರ ವರೆಗೆ ನಡೆಯಿತು.ಸ್ಪರ್ಧೆಯ ಮೌಲ್ಯಮಾಪಕರಾಗಿ ರಾಯದುರ್ಗದ ಅರೇಬಿಕ್ ಕಾಲೇಜ್ ಜಾಮಿಯಾ ಮೊಹಮ್ಮದೀಯ ಶೇಕ್ ಹಫೀಜ್ ಟಿ ನಜೀರ್ ಉಮ್ರಿ ಮದನಿ.ಶೇಕ್ ಅಬ್ದುಲ್ ಬಾರಿ ಜಾಮೀಯಿ ಮದನಿ, ಶೇಕ್ ವಾಸಿಂ ಖಾಜಿ ಜಾಮೀಯಿ ಮದನಿ, ಹಾಗೂ ಹರಪನಹಳ್ಳಿಯ ಅಸ್ಮಾ ಮೊಹಮ್ಮದಿ ರವರು ಆಗಮಿಸಿದ್ದರು.


ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ನಿಗದಿ ಮಾಡಿದ,ಜಲ್ಸಾ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಉಲಮಾ ಅಧ್ಯಕ್ಷ ಮಜ್ಲಿಸೆ ಅಖಿಲ್ ಅಹಮದ್ ತಿಳಿಸಿದ್ದಾರೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend