ಸ್ಥಗಿತಗೊಂಡ ರಸ್ತೆ ಕಾಮಗಾರಿಯನ್ನು ಮುಂದುವರಿಸಿ ಸಂತೆ ಮೈದಾನವನ್ನು ನಿಗದಿಪಡಿಸಿ…!!!!

Listen to this article

ಸ್ಥಗಿತಗೊಂಡ ರಸ್ತೆ ಕಾಮಗಾರಿಯನ್ನು ಮುಂದುವರಿಸಿ ಸಂತೆ ಮೈದಾನವನ್ನು ನಿಗದಿಪಡಿಸಿ
ಕಾನಹೊಸಹಳ್ಳಿ:- ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿರುವ . ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸುವ ಮುಖ್ಯರಸ್ತೆಯ ಕಾಮಗಾರಿಯನ್ನು ಮುಂದುವರಿಸು ವಂತೆ ಕಾನಹೊಸಹಳ್ಳಿ ಗ್ರಾಮಸ್ಥರ ಹಾಗೂ ಸುತ್ತಮುತ್ತಲಿನ ಹಳ್ಳಿಯ ಸಾರ್ವಜನಿಕರಿಂದ ಒತ್ತಾಯ. ಕಾನ ಹೊಸಹಳ್ಳಿ ಗ್ರಾಮದ ಮುಖ್ಯ ರಸ್ತೆಯ ಅಗಲೀಕರಣ ವಾಗಿದ್ದು ಸಂಪೂರ್ಣ ಕಾಮಗಾರಿ ಮುಗಿದಿದ್ದು, ಗ್ರಾಮ ಪಂಚಾಯಿತಿ ಭಾಗದಿಂದ ರಾಷ್ಟ್ರೀಯ ಹೆದ್ದಾರಿ 50ರ ವರೆಗೆ ಕಾಮಗಾರಿಯನ್ನು ಮುಂದುವರಿಸಿದೆ ಹಾಗೆ ಬಿಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಅಳತೆ ಮಾಡಿಕೊಂಡು ಹೋಗಿ ಒಂದು ವರ್ಷ ಕಳೆದರೂ ಕೂಡ ಕಾಮಗಾರಿ ಮುಂದುವರಿದಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟಂತೆಹಲವಾರು ಪತ್ರಿಕೆಗಳಲ್ಲಿ ಅನೇಕ ಬಾರಿ ಪ್ರಕಟನೆ ಮಾಡಲಾಗಿದೆ, ಆದರೂ ಕೂಡ ಯಾವುದೇ ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯ ಬಗ್ಗೆ ಗಮನ ಹರಿಸದೇ ಇರುವುದರಿಂದ ಮಳೆ ಬಂದು ಕೆಸರುಗದ್ದೆಯಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿದೆ, ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದ ಉಂಟು, ಮಳೆನೀರು ಬೇರೆ ಕಡೆ ಹರಿಯದೇ ರಸ್ತೆಯಲ್ಲಿ ನಿಂತು ಸಾರ್ವಜನಿಕರಿಗೂ ಹಾಗು ವಾಹನ ಸವಾರರಿಗೆ ತುಂಬಾ ತೊಂದರೆಯಾಗಿದೆ,
ಕಾನಹೊಸಹಳ್ಳಿ ಯಲ್ಲಿ ಸಂತೆ ಮೈದಾನ ವಿಲ್ಲದೆ ತರಕಾರಿ ಮಾರಲು ಬಂದ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುವ ಪರಿಸ್ಥಿತಿ ಉಂಟಾಗಿದೆ. ರಸ್ತೆಯಲ್ಲಿ ನಿಂತ ಮಳೆನೀರು ವಾಹನಗಳ ಸಂಚಾರ ಮಾಡುವಾಗ ಚಕ್ರ ದಿಂದ ಬರುವ ಕೆಸರಿನ ನೀರು ಸಾರ್ವಜನಿಕರಿಗೆ ಸಿಡಿಯುತ್ತದೆ.

ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನಪ್ರತಿನಿಧಿಗಳು ಯಾವುದಾದರೂ ಒಂದು ನಿರ್ದಿಷ್ಟ ಸಂತೆ ಮೈದಾನವನ್ನು ಗೊತ್ತು ಮಾಡುವಂತೆ ತರಕಾರಿ ಮಾರಲು ಬಂದ ವ್ಯಾಪಾರಿಗಳ ವಿನಂತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಾನ ಹೊಸಹಳ್ಳಿಯ ಮುಂದುವರೆಯದ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಮುಂದುವರಿಸಿ, ಹಾಗೂ ಸಂತೆ ಮೈದಾನವನ್ನು ಕಲ್ಪಿಸಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಕಾನಹೊಸಹಳ್ಳಿ ಯ ಸುತ್ತಮುತ್ತಲ ಹಳ್ಳಿಯ ಸಾರ್ವಜನಿಕರು, ಕಾನಹೊಸಹಳ್ಳಿ ಗ್ರಾಮದ ಮುಖಂಡರು ಜನಪ್ರತಿನಿಧಿಗಳು, ಸಂತೆ ವ್ಯಾಪಾರಿಗಳು, ವಿವಿಧ ಪರ ಸಂಘಟನೆಯ ಸದಸ್ಯರು ಮುಖಂಡರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ…

 

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend