ಬೆಲೆ ಬಿಸಿಗೆ ಬೇಯದ ತರಕಾರಿ, ಗ್ರಾಹಕರು ಕಂಗಾಲು…!!!

Listen to this article

ಬೆಲೆ ಬಿಸಿಗೆ ಬೇಯದ ತರಕಾರಿ ಗ್ರಾಹಕರು ಕಂಗಾಲು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಯ ವಾರದ ಸಂತೆಯಲ್ಲಿ ತರಕಾರಿ ಕೊಳ್ಳಲು ಬಂದ ಗ್ರಾಹಕರು ಬೆಲೆ ನೋಡಿ ಕಂಗಾಲಾಗಿದ್ದಾರೆ.
ರೈತರು ಬೆಳೆದ ನಾನು ತರಕಾರಿಗಳ ಬೆಲೆಗಳು ಇಳುವರಿ ಇಲ್ಲದೆ ಗಗನಕ್ಕೇರಿದ್ದು ಗ್ರಾಹಕರಿಗೆ ಬರೆದರೆ ಕೆಲದಿನಗಳ ಹಿಂದೆ ಕಡಿಮೆ ಮಾರಲಾಗುತ್ತಿತ್ತು ನಾನು ತರಕಾರಿ ಬೆಲೆ ಕಳೆದ ವಾರದಿಂದ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು. ತಾಲೂಕಿನ ರೈತ ವ್ಯಾಪಾರಿಗಳಿಗೆ ಕೊಟ್ಟರೆ ಗ್ರಾಹಕರಿಗೆ ಎಟುಕದಂತೆ ಆಗಿದೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕೇಳಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಈಗಿನ ಬೆಲೆ 110 ರೂ. ಟೊಮೋಟೊ. 120ರೂ. ಬೀನ್ಸ್. ರೂ 60 .ಹೀರೆಕಾಯಿ. ಬೆಂಡೆಕಾಯಿ ಕೆಜಿಗೆ ರೂ.60. ಸೌತೆಕಾಯಿ ಕೆಜಿಗೆ 40 ರೂ. ಸಿಹಿ ಈರುಳ್ಳಿ ಕೆಜಿಗೆ 50ರೂ. ಒಂದುಕಟ್ಟು ಸಿಹಿ ಪಾಲಕ ಸೊಪ್ಪು ರೂ.10 ಕೊತ್ತಂಬರಿಸೊಪ್ಪು ಒಂದು ಕಟ್ಟಿಗೆ ರೂ.10.
ಬೆಲೆಯೇರಿಕೆಗೆ ಸಮಸ್ಯೆಗೆ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯ ಕಾರಣ ರೈತರು ಹೊಲದಲ್ಲಿ ನೀರು ನಿಂತು. ತರಕಾರಿ ಗಿಡಗಳು ಕಳೆದುಹೋಗಿದೆ ಗಿಡಗಳಲ್ಲಿ ಕಾಯಿಗಳು ಬಿದ್ದು ಹಾಳಾಗಿದೆ ಹೀಗೆ ಹತ್ತಾರು ಸಮಸ್ಯೆಗಳಿಂದಾಗಿ ತರಕಾರಿ ಬೆಲೆ ಗಗನಕ್ಕೇರಿದೆ ಎನ್ನುತ್ತಾರೆ ಕೆಲ ರೈತರು.
ತರಕಾರಿ ಬೆಲೆ ಗಗನಕ್ಕೇರಿದ್ದು ಕೆಲವು ಸಂಚುರಿ ದಾಟಿವೆ ಇನ್ನು ಕೆಲವು ತರಕಾರಿಗಳು ನೂರರ ಗಡಿಯಲ್ಲಿ ಇದ್ದವು ಈ ಬೆಲೆ ಕೇಳಿ ಗ್ರಾಹಕರು ಮುಖ ಟಮೋಟೋ ರೀತಿ ಕೆಂಪೇರಿತ್ತು.
ತರಕಾರಿಯ ಬೆಲೆ ಕೇಳಿ ಗ್ರಾಹಕರು ತರಕಾರಿ ಖರೀದಿ ಮಾಡದೆ ಹಿಂದಿರುಗು ಪರಿಸ್ಥಿತಿಯಲ್ಲಿದ್ದರೂ. ವಿಧಿಯಿಲ್ಲದೇ ಕೆಜಿ ಕೊಳ್ಳುವವರು ಕಾಲ್ ಕೆಜಿ ಅರ್ಧ ಕೆಜಿ ಗೆ ಇಳಿಯುತ್ತಿದ್ದರು.

ನಮಗೂ ನಷ್ಟವಾಗಿದೆ
ಅಕಾಲಿಕ ಮಳೆಯಿಂದ ತರಕಾರಿಗಳು ಕೊಳೆತು ಹೋಗಿವೆ. ನಿರೀಕ್ಷೆಯಲ್ಲಿದ್ದರು ತರಕಾರಿಯು ಮಾರುಕಟ್ಟೆಗೆ ಬಂದಿಲ್ಲ. ನಾವು ಮೂರು ಪಟ್ಟು ಬೆಲೆ ಕೊಟ್ಟು ತರಕಾರಿ ಖರೀದಿಸಿದ್ದೇವೆ. ತಂದ ಅಸಲಿಗೆ ಮಾರಿದರು ಜನರು ಬಾಯಮೇಲೆ ಬಿಟ್ಟು ನೋಡಿ ಹಾಗೆ ಹೋಗುತ್ತಿದ್ದಾರೆ. ಈ ವಾರದ ಸಂತೆಯು ನಮಗೆ ತುಂಬಾ ನಷ್ಟ ಉಂಟು ಮಾಡಿದೆ ಎನ್ನುತ್ತಾರೆ.
ತರಕಾರಿ ವ್ಯಾಪಾರಿ
ನಟರಾಜ ಸ್ವಾಮಿಹೊಸಹಳ್ಳಿ,ತರಕಾರಿ ವ್ಯಾಪಾರಿ
ಮಲ್ಲೇಶ್ ಹುಲಿಕೆರೆ…

ವರದಿ. ವಿರೇಶ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend