ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗಾಗಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಅವರ ಸ್ಮಾರಕ ದಿಂದ ಬೆಂಗಳೂರಿನ ಪ್ರೀಡಂ ಪರ್ಕ್‌ವರೆಗೆ ಕಾಲ್ನಡಿಗೆ ಜಾಥಾ…!!!

Listen to this article

ವಿಜಯನಗರ ಜಿಲ್ಲಾ ಮಾದಿಗ ಮಹಾಸಭಾ ದಿಂದ ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗಾಗಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಅವರ ಸ್ಮಾರಕ ದಿಂದ ಬೆಂಗಳೂರಿನ ಪ್ರೀಡಂ ಪರ್ಕ್‌ವರೆಗೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಹೊಸಪೇಟೆ ವಿಜಯನಗರದಿಂದ ಮಾದಿಗ ಸಮಾಜದ ಮುಖಂಡರು ಮತ್ತು ಯುವಕರು ನಗರದ ಅಂಬೇಡ್ಕರ್ ವೃತ್ತದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತಗತಳಿಗೆ ಮಾಲಾರ್ಪಣೆ ಮಾಡಿ ಕಾಲ್ನಾಡಿಗೆ ಜಾಥಾದಲ್ಲಿ ಭಾಗವಹಿಸಲು ಹೊರಡಿದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ರಾಮಚಂದ್ರ ಮಾತನಾಡಿ ಸದಾಶಿವ ಆಯೋಗದ ವರದಿ ಜಾರಿಗಾಗಿ ನಡೆಯಲಿರುವ ಕಾಲ್ನಾಡಿಗೆ ಜಾಥದಲ್ಲಿ ಹೊಸಪೇಟೆ ಯಿಂದ ಸರಿಸುಮಾರು 50ಜನ ಭಾಗವಹಿಸಲಿದ್ದೇವೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ 101 ಜಾತಿಗಳು ಭಾಗವಹಿಸಲಿವೆ ಒಳ ಮೀಸಲಾತಿಯಲ್ಲಿ ಅಸ್ಪೃಶ್ಯ ಜಾತಿಗಳಿಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ ಆದ್ದರಿಂದ ಘನ ಸರ್ಕಾರ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದರಿಂದ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಆಗುತ್ತದೆ ಎಂಬ ಬರವಸೆ ಇದೆ. ಆಯೋಗದ ವರದಿ ಜಾರಿಗಾಗಿ ಆಸ್ಪೃಶ್ಯ ಸಮುದಾಯಗಳು ಒತ್ತಾಯಿಸುತ್ತವೆ ಎಂದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರುಗಳಾದ ಗ್ಯಾನಪ್ಪ ಬಡಿಗೇರ,ಜಗನ್ನಾಥ, ಎ.ಬಸವರಾಜ,ಶೇಶು, ಶೇಕ್ಷವಲಿ, ಪಂಪಾಪತಿ,ಜೆ.ಬಿ.ರಾಘವೇಂದ್ರ,ಉದಯ್ ಕುಮಾರ್ ಹೆಚ್ ಆರ್, ವಿಜಯ್ ಕುಮಾರ್,ಓಬಳೇಶ,ವಿನೋದ ಕುಮಾರ್, ದೊಡ್ಡ ಬಸವರಾಜ್ ಬಡಗಿ, ಕರಿಯಪ್ಪ,ಮಾರೇಶ,ನಾಗೇಂದ್ರ, ಮಲ್ಲಪ್ಪ ಎಸ್‌.ಹೆಚ್, ತಾಯಪ್ಪ,ಮಾಂತೇಶ ಸೇರಿದಂತೆ ಇನ್ನಿತರರು ಇದ್ದರು…

ವರದಿ. ಬಸವರಾಜ್ ಕಂಪ್ಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend