ಎಂ.ಬಿ.ಅಯ್ಯನಹಳ್ಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ರಸ್ತೆ ತಡೆದು ಪ್ರತಿಭಟನೆ…!!!

Listen to this article

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ.8.2.2021. ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಎಂಬಿ ಅಯ್ಯನಹಳ್ಳಿ*

*ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ರಸ್ತೆ ತಡೆದು ಪ್ರತಿಭಟನೆ.:– ಪ್ರತಿಭಟನೆ ಸ್ಥಳಕ್ಕೆ ಕೂಡ್ಲಿಗಿ ತಹಸಿಲ್ದಾರ್ ರವರು ಭೇಟಿ*
ತಾಲೂಕಿನ ಎಂ ಬಿ ಅಯ್ಯನಹಳ್ಳಿ ಗ್ರಾಮ ದಲ್ಲಿ ಈ ದಿನ ರಾಷ್ಟ್ರೀಯ ಹೆದ್ದಾರಿ 50 ರಾ ರಸ್ತೆ ನಿರ್ಮಾಣ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿದ್ದನ್ನು ಖಂಡಿಸಿ ಎಂಬಿ ಅಯ್ಯನಹಳ್ಳಿ ಯ ಪ್ರೌಢಶಾಲೆಯ ಮಕ್ಕಳು ವಸತಿ ಶಾಲೆಯ ವಿದ್ಯಾರ್ಥಿಗಳು ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ಮಾಡಿದರು. ಈ ಪ್ರತಿಭಟನೆಯ ಮುಖಂಡತ್ವವನ್ನು ತಾಲೂಕು ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರರವರು. ಮುಖಂಡರಾದ ವೀರುಪಾಕ್ಷಪ್ಪ ವಕೀಲರು. ತುಂಬರಗುದ್ದಿ ಚಂದ್ರು ಅವರು ವಹಿಸಿಕೊಂಡಿದ್ದರು ಇವರುಗಳು ರಾಷ್ಟ್ರೀಯ ಹೆದ್ದಾರಿ 50 ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದನ್ನು ಖಂಡಿಸಿ ಸಂಬಂಧಪಟ್ಟ ಇಲಾಖೆಯವರು ಅತಿಶೀಘ್ರದಲ್ಲಿ ಉತ್ತಮ ಮಟ್ಟದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಮಾಡಿ ಇಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ನಂತರ ಸಾರ್ವಜನಿಕರಿಗೂ ವಿದ್ಯಾರ್ಥಿಗಳಿಗೂ ರಸ್ತೆ ದಾಟುವುದು ತುಂಬಾ ಕಷ್ಟಕರವಾಗಿದೆ.

ವಿದ್ಯಾರ್ಥಿ ಗಳು ರಸ್ತೆ ದಾಟಿ ಶಾಲೆ ಹೋಗುವುದಂತೂ ತುಂಬಾ ಕಷ್ಟವಾಗಿದೆ. ಕಾರಣ ರಸ್ತೆ ಕೆಳಗಡೆಗೆ ಸಂಚರಿಸುವ ದಾರಿ ಹಾಗೂ ರಸ್ತೆ ಮೇಲ್ಭಾಗದಲ್ಲಿ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸಂಚರಿಸುವ ದಾರಿಯನ್ನು ನಿರ್ಮಾಣ ಮಾಡಬೇಕೆಂದು. ಹಾಗೂ ಸರ್ವಿಸ್ ದಾರಿಯ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡುವುದು. ಚರಂಡಿ ಇಲ್ಲದಿರುವುದರಿಂದ ಗ್ರಾಮದ ತ್ಯಾಜ್ಯ ನೀರು ರೋಡಿನ ಮೇಲೆ ಹರಿಯುತ್ತಿದ್ದು ಅನೇಕ ಅಪಘಾತಗಳು ಸಾವುಗಳು ಸಂಭವಿಸಿವೆ ಕಾರಣ ಅತಿ ಶೀಘ್ರದಲ್ಲಿ ನಮ್ಮಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ತಾಲೂಕ್ ತಹಶೀಲ್ದಾರರಾದ ಶ್ರೀ ಮಹಾಬಲೇಶ್ವರವರಿಗೆ ಸಾರ್ವಜನಿಕರು ವಿದ್ಯಾರ್ಥಿಗಳು ಮುಖಂಡರು ಮನವಿ ಮಾಡಿಕೊಂಡರು. ತಹಶೀಲ್ದಾರ್ರವರು ಮಾತನಾಡಿ ಇನ್ನು ಒಂದು ತಿಂಗಳಲ್ಲಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಅತಿ ಶೀಘ್ರದಲ್ಲಿ ಉತ್ತಮ ಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡುವಂತೆ ಹೇಳಿ ಇಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲಾಗುವುದು ಎಂದು ಹೇಳಿದರು.

ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತೆಗೆದುಕೊಂಡರು ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಗೆ ಸಂಬಂಧ ಪಟ್ಟ ಅಧಿಕಾರಿಗಳು ಕೊಟ್ಟೂರು ಸಿಪಿಐ ದೊಡ್ಡಣ್ಣ ನವರು. ಕಾನಹೊಸಹಳ್ಳಿ ಪೊಲೀಸ್ ಠಾಣೆ ಅಧಿಕಾರಿ ಪಿಎಸ್ಐ ನಾಗರಾಜುರವರು. ಮಹಿಳಾ ಪಿಎಸ್ಐ ನಾಗರತ್ನಮ್ಮನವರು. ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ. ಊರಿನ ಮುಖಂಡರು ಪ್ರಮುಖರು ಗ್ರಾಮಪಂಚಾಯತಿಯ ಹಾಲಿ ಹಾಗೂ ಮಾಜಿ ಸದಸ್ಯರುಗಳು ವಿದ್ಯಾರ್ಥಿಗಳು ಸಾರ್ವಜನಿಕರು ಗ್ರಾಮಸ್ಥರು ಉಪಸ್ಥಿತರಿದ್ದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend