ಅಪ್ಪು ಬಾಯ್ಸ್ ಇಟ್ಟಿಗಿ ಇವರಿಂದ ಅಪ್ಪುವಿಗೆ ಭಾವಪೂರ್ಣ ಶ್ರದ್ಧಾಂಜಲಿ…!!!

Listen to this article

ಅಪ್ಪು ಬಾಯ್ಸ್ ಇಟ್ಟಿಗಿ ಇವರಿಂದ ಅಪ್ಪುವಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಅಗಲಿದ ತಮ್ಮ ನೆಚ್ಚಿನ ನಟನನ್ನು ನೆನೆದು ಭಾವುಕರಾದ ಅಭಿಮಾನಿಗಳು. ಪುನೀತ್ ರಾಜ್‍ಕುಮಾರ್ (೧೭ ಮಾರ್ಚ್,೧೯೭೫ ರಿಂದ ೨೯ ಅಕ್ಟೋಬರ್ ೨೦೨೧)ರವರು ಭಾರತೀಯ ಚಿತ್ರನಟ ,ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ನಿರ್ಮಾಪಕ. ಇವರು ೨೯ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ವಸಂತ ಗೀತ (೧೯೮೦), ಭಾಗ್ಯದಾತ (೧೯೮೧), ಚಲಿಸುವ ಮೋಡಗಳು (೧೯೮೨), ಎರಡು ನಕ್ಷತ್ರಗಳು (೧೯೮೩), ಭಕ್ತ ಪ್ರಹ್ಲಾದ, ಯಾರಿವನು ಮತ್ತು ಬೆಟ್ಟದ ಹೂವು (೧೯೮೫) ಚಿತ್ರಗಳಲ್ಲಿ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು. ಚಳಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಪುನೀತ್ ಅವರು ೨೦೦೨ರಲ್ಲಿ ಅಪ್ಪು ಚಿತ್ರದಲ್ಲಿ ಮೊದಲ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಅವರನ್ನು ಮಾಧ್ಯಮಗಳು ಮತ್ತು ಅಭಿಮಾನಿಗಳು “ಪವರ್‌ಸ್ಟಾರ್” ಎಂದು ಕರೆಯುತ್ತಾರೆ. ಅವರು ಅಭಿ (೨೦೦೩), ಆಕಾಶ್ (೨೦೦೫), ಅರಸು (೨೦೦೭), ಮಿಲನ (೨೦೦೭), ಜಾಕೀ (೨೦೧೦), ಹುಡುಗರು (೨೦೧೧), ಅಣ್ಣಾ ಬಾಂಡ್ (೨೦೧೨) ಮತ್ತು ಪವರ್ (೨೦೧೪) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕನ್ನಡ ಚಿತ್ರರಂಗದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದರು. ಅವರು ಪ್ರಸಿದ್ಧ ಟಿವಿ ಆಟದ ಕಾರ್ಯಕ್ರಮ ಹೂ ವಾಂಟ್ಸ್ ಟು ಬಿ ಮಿಲಿಯನೇರ್ನ ಕನ್ನಡ ಆವೃತ್ತಿ ಕನ್ನಡದ ಕೋಟ್ಯಧಿಪತಿಯ ನಿರೂಪಣೆ ಮಾಡಿದ್ದಾರೆ.
ಇಂತಹ ಬಹುಮುಖ ಪ್ರತಿಭೆಯುಳ್ಳ ಬೆಟ್ಟದ ಹೂ,ಅಭಿಮಾನಿಗಳ ಅರಸ,ರಾಜ್ಯದ ಜನತೆಯ ರಾಜಕುಮಾರನನ್ನು ಹಠಾತ್ತಾಗಿ ಕಾಣಿಸಿಕೊಂಡ ಹೃದಯಾಘಾತ ಎಂಬ ನೆಪದಿಂದ ೨೯ ಅಕ್ಟೋಬರ್ ೨೦೨೧ ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ವಿಧಿವಶರಾಗಿರುತ್ತಾರೆ.ಈ ಆಕಾಲಿಕ ಮರಣವು ನಾಡಿನ ಸಮಸ್ತ ಜನತೆಗೆ ಅಪಾರ ನೋವುಂಟುಮಾಡಿದೆ. ಅಪ್ಪು ನೀವು ಎಂದಿಗೂ ನಮ್ಮೊಂದಿಗೆ ಅಮರ.ಜೊತೆಗಿರದ ಜೀವ ಎಂದಿಗೂ ಜೀವಂತ ,ಬಾಡಿದ ಬೆಟ್ಟ ಹೂ ಎಂದು ಅಭಿಮಾನಿಗಳು ಕಣ್ಣೀರಿಟ್ಟರು.

ವರದಿ-ಪ್ರಕಾಶ್ ಇಟ್ಟಿಗಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend